ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ ಅವರ ಕಾದಂಬರಿಗಳನ್ನು ಹೆಚ್ಚು ಹೆಚ್ಚು ಓದುವುದರ ಮೂಲಕ ವಿದ್ಯಾರ್ಥಿಗಳು ತಮ್ಮಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರಲ್ಲಿ ಆದರ್ಶಮಯ ಚಿಂತನೆ ಇರುವುದು ಎದ್ದು ಕಾಣಿಸುತಿತ್ತು ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ದಾಕ್ಷಾಯಣಿ ಅಭಿಪ್ರಾಯಪಟ್ಟರು.ವಿವಿ ಕಲಾ ಕಾಲೇಜಿನ ಕನ್ನಡ ವಿಭಾಗದಿಂದ ಗುರುವಾರ ಹಮ್ಮಿಕೊಂಡಿದ್ದ ಕಾದಂಬರಿಕಾರ ಡಾ.ಎಸ್. ಎಲ್. ಭೈರಪ್ಪಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಹಪ್ರಾಧ್ಯಾಪಕ ಡಾ.ಶಿವಣ್ಣ ಬೆಳವಾಡಿ ಮಾತನಾಡಿ, ಭೈರಪ್ಪ ಅವರು ಕನ್ನಡದ ಮಹತ್ವ ಕಾದಂಬರಿಕಾರರು.ಅವರ ಕಾದಂಬರಿಗಳಲ್ಲಿ ಮನುಷ್ಯ ಸಂಬಂಧದ ಚಿತ್ರಣ, ಮಾನವೀಯತೆ ಜೊತೆಗೆ ಸಂಶೋಧನಾತ್ಮಕ ಚಿಂತನೆಗಳನ್ನು ಕಾಣಬಹುದು.ಹಾಗೆ ಪುರಾಣದ ವಸ್ತುವನ್ನು ಆಧುನಿಕತೆಯ ಹಿನ್ನಲೆಯಲ್ಲಿ ಕಟ್ಟಿಕೊಟ್ಟಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು.ಪ್ರೊ.ಬಿ.ಕರಿಯಣ್ಣ ಮಾತನಾಡಿ ಡಾ. ಎಸ್. ಎಲ್ ಭೈರಪ್ಪನವರು ಕನ್ನಡದ ಬಹುಮುಖ್ಯ ಲೇಖಕರು.ಕುವೆಂಪು ನಂತರದಲ್ಲಿ ಕನ್ನಡಕ್ಕೆ ಹೆಚ್ಚಿನ ಕಾದಂಬರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಜೊತೆಗೆ ಹೆಚ್ಚು ಓದುಗರನ್ನು ಪಡೆದಿದ್ದ ಸಾಹಿತಿಕೂಡ ಹೌದು. ಕನ್ನಡದಲ್ಲಿ ಇವರ ಕಾದಂಬರಿಗಳಷ್ಟು ಮರುಮುದ್ರಣ ಇದುವರೆಗೂ ಕಂಡಿಲ್ಲ. ಅವರ ಜನಪ್ರಿಯತೆ ಜ್ಞಾನಪೀಠಕ್ಕಿಂತಲೂ ಹೆಚ್ಚಿನದ್ದಾಗಿದೆ ಎಂದರು.ಡಾ. ಬಿ.ಎನ್. ವೇಣುಗೋಪಾಲ ಮಾತನಾಡಿ ಎಸ್. ಎಲ್ ಭೈರಪ್ಪನವರ ಪ್ರತಿಯೊಂದು ಕಾದಂಬರಿಗಳು ಹೊಸ ಅನುಭವದಜೊತೆಗೆ ನಾವಿನ್ಯತೆಯ ಸಂಶೋಧನೆ, ನವೀನವಾದ ವಸ್ತುವಿಷಯವನ್ನು ಪರಿಚಯಿಸುತ್ತದೆಎಂದರು.ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಆರ್.ರೇಣುಕ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಚರ್ಚೆಗಳನ್ನು ಹುಟ್ಟು ಹಾಕಿದ ಸಾಹಿತಿಎಸ್. ಎಲ್ ಭೈರಪ್ಪನವರು.ಈ ಮೂಲಕ ಕನ್ನಡದ ವಾಗ್ವಾದ ಪರಂಪರೆಗೆಜೀವಂತಿಕೆತಂದುಕೊಟ್ಟವರು.ಚಿಂತನೆ, ಮರುಚಿಂತನೆ, ಸಂಶೋಧನೆಅವರ ಸಾಹಿತ್ಯದ ಅಸ್ಮಿತೆ. ಅದನ್ನು ಸಹೃದಯಿ ಲೋಕ ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.