ಶಾಹೀನ್ ಕಾಲೇಜು: 437 ವಿದ್ಯಾರ್ಥಿಗಳಿಗೆ ಅಗ್ರಶ್ರೇಣಿ

| Published : Apr 11 2024, 12:52 AM IST

ಶಾಹೀನ್ ಕಾಲೇಜು: 437 ವಿದ್ಯಾರ್ಥಿಗಳಿಗೆ ಅಗ್ರಶ್ರೇಣಿ
Share this Article
  • FB
  • TW
  • Linkdin
  • Email

ಸಾರಾಂಶ

ಶೇ.98 ಅಂಕ ಪಡೆದ ತಾಹೀರ್ ಹಸನ್ ಟಾಪರ್. 421 ವಿದ್ಯಾರ್ಥಿಗಳಿಗೆ ಶೇ.85 ಅಂಕ, ಪರೀಕ್ಷೆ ಬರೆದ ಒಟ್ಟು 1,153 ವಿದ್ಯಾರ್ಥಿಗಳ ಪೈಕಿ 1,114 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. 658 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ 437 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ.

16 ವಿದ್ಯಾರ್ಥಿಗಳು ಶೇ.95 ಮೇಲ್ಪಟ್ಟು ಹಾಗೂ 421 ವಿದ್ಯಾರ್ಥಿಗಳು ಶೇ.85 ಮೇಲ್ಪಟ್ಟು ಅಂಕ ಗಳಿಸಿದ್ದಾರೆ. ಪರೀಕ್ಷೆ ಬರೆದ ಒಟ್ಟು 1,153 ವಿದ್ಯಾರ್ಥಿಗಳ ಪೈಕಿ 1,114 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. 658 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ತಾಹೀರ್ ಹಸನ್ ಎಚ್. ಶೇ.98, ಎಂ.ಕೆ. ಖದೀಜಾಥುಲ್ ಮುಫೀದಾ ಶೇ.97.50, ಮಹಮ್ಮದ್ ಹನೀಫ್ ತಾಡವಾಗಲಾ ಶೇ.97, ಶಾದಮನ್ ಅಲಾಮ್ ಶೇ.96.67, ವಿನಯ್ ಪಿ. ಶೇ.96.67, ಫರಹಾನ್ ಶೇ.96.50, ಮಹಮ್ಮದ್ ಸೈಫ್ ಶೇ.96.33, ಖಾಲಿದಾ ಝೀನತ್ ಶೇ.96.17, ರೋಹಿತ್ ಶೇ.96, ಸಮಿಯ ಅನಮ್ ಶೇ 95.83, ಸಿದ್ಧಲಿಂಗಪ್ಪ ಶೇ.95.83, ಸಾಬಿರ್ ಅಲಿ ಎಸ್. ಶಿಕಾರಿಪುರ ಶೇ.95.67, ರುಖೈಯಾ ಖಾನಮ್ ಶೇ.95.50, ಅಹಮ್ಮದ್ ಯಾಸೀನ್ ಶೇ.95.50, ಸಯೀದಾ ನಿದಾ ನೌಶೀನ್ ಶೇ.95.17, ಸುಫೆರಾ ಶೇ.95ರಷ್ಟು ಅಂಕ ಗಳಿಸಿ ಗಮನ ಸೆಳೆದಿದ್ದಾರೆ.

ಕಾಲೇಜಿಗೆ ಪ್ರತಿ ವರ್ಷದಂತೆ ಈ ವರ್ಷವೂ ಅತ್ಯುತ್ತಮ ಫಲಿತಾಂಶ ಬಂದಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.

ಶಾಹೀನ್ ಸಂಸ್ಥೆ ಅರ್ಧದಲ್ಲೇ ಶಿಕ್ಷಣ ನಿಲ್ಲಿಸಿದ ಮಕ್ಕಳನ್ನು ಮರಳಿ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬೆಸಿಕ್ನೊಂಮದಿಗೆ ಹತ್ತನೇ ಹಾಗೂ ಪಿಯುಸಿಯ ತರಬೇತಿ ನೀಡುತ್ತಿದೆ. ಪರಿಣಾಮವಾಗಿ, 9ನೇ ಹಾಗೂ 10ನೇ ತರಗತಿಯಲ್ಲಿ ಫೇಲಾಗಿದ್ದ ಅನೇಕ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ ಎಂದು ಹೇಳಿದ್ದಾರೆ.

ಬೀದರ್ ಜಿಲ್ಲೆಯ ಶೈಕ್ಷಣಿಕ ಹಿಂದುಳಿಯುವಿಕೆಯ ಹಣೆಪಟ್ಟಿ ಕಳಚಿದೆ. ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ತೀವ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಶೈಕ್ಷಣಿಕವಾಗಿ ಮುಂದುವರಿದ ಜಿಲ್ಲೆಗಳಿಗೆ ಸರಿಸಮನಾದ ಸ್ಥಾನಕ್ಕೆ ಬಂದು ನಿಂತಿದೆ. ಶಿಕ್ಷಣ ಇಲಾಖೆ, ಜಿಲ್ಲೆಯ ಕಾಲೇಜುಗಳ ಪ್ರಯತ್ನ, ಪಾಲಕರ ಸಹಕಾರ ಹಾಗೂ ವಿದ್ಯರ್ಥಿ ಗಳ ಶ್ರಮದಿಂದಾಗಿ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.