ಸಾರಾಂಶ
ಈಶ್ವರ ಶೆಟ್ಟರ್
ಕನ್ನಡಪ್ರಭ ವಾರ್ತೆ ಬಾಗಲಕೋಟೆಹಲವು ನಾಯಕರಿಗೆ ರಾಜಕೀಯ ಪುನರ್ ಜನ್ಮ ನೀಡಿದ ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಸ್ವತಂತ್ರ ಭಾರತದ ಬಳಿಕ ದೇಶದಲ್ಲಿ 1951ರಿಂದ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿತು. ಆ ವರ್ಷದ ಕೊನೆಗೆ ನಡೆದ ಚುನಾವಣೆಯಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದವರು ರಾಮಣ್ಣ ಬಿದರಿ. ಬಳಿಕ ನಡೆದ 1957ರ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ 2ನೇ ಬಾರಿ ಅವರು ಗೆದ್ದಿದ್ದರು.ಸ್ವಾತಂತ್ರ್ಯಾ ನಂತರದ ಎರಡನೇಯ ಲೋಕಸಭೆಗೆ ನಡೆದ ಚುನಾವಣೆ 1957ರಲ್ಲಿ, ಅಖಂಡ ವಿಜಯಪುರ ಜಿಲ್ಲೆಯ ಭಾಗವಾಗಿದ್ದ ಇಂದಿನ ಬಾಗಲಕೋಟೆ ಜಿಲ್ಲೆಯು ಅಂದು ವಿಜಯಪುರ ದಕ್ಷಿಣ ಲೋಕಸಭಾ ಹೆಸರಿನಲ್ಲಿ ಚುನಾವಣೆ ಎದುರಿಸಿತ್ತು. ವಿಜಯಪುರ ದಕ್ಷಿಣ ಲೋಕಸಭೆಗೆ ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ, ಬಾದಾಮಿ, ಹುನಗುಂದ, ಗುಳೇದಗುಡ್ಡ ಅಂದಿನ ಧಾರವಾಡ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರಗಳು ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳು ವಿಜಯಪುರ ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಿದ್ದವು.
ಮೈಸೂರು ರಾಜ್ಯ ವ್ಯಾಪ್ತಿಯಲ್ಲಿನ ಈ ಕ್ಷೇತ್ರ ಮುಂಬೈ ಕರ್ನಾಟಕದ ಪ್ರದೇಶವೆಂದೆ ಪ್ರಚಲಿತವಾಗಿತ್ತು. ರಾಜಕಾರಣವನ್ನು ಮಾಡುವವರು ಕಡಿಮೆ ಇರುವ ಆ ಸಮಯದಲ್ಲಿ ವಿಜಯಪುರ ಸಮೀಪದ ಹೊಗೆನಹಳ್ಳಿ ಗ್ರಾಮದ ರಾಮಣ್ಣ ಬಿದರಿ ದಕ್ಷಿಣ ಲೋಕಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದದ್ದರು ಇವರಿಗೆ ಪ್ರತಿಸ್ಪರ್ಧಿಯಾಗಿ ಬಾದಾಮಿ ತಾಲೂಕಿನ ಸುಳ್ಯದ ದೇಸಾಯಿ ಕುಟುಂಬ ಪಕ್ಷೇತರರಾಗಿ ಸ್ಪರ್ಧೆ ಮಾಡಿರುವುದು ವಿಶೇಷವಾಗಿತ್ತು.ಬಾಗಲಕೋಟೆ ಲೋಕಸಭೆ ಚುನಾವಣೆಯಲ್ಲಿ ಅಂದು ಸ್ಪರ್ಧೆ ಮಾಡಿದವರು ಕೇವಲ ಇಬ್ಬರು ಅಭ್ಯರ್ಥಿ ಮಾತ್ರ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಆರ್.ಬಿ.ಬಿದರಿ ಸ್ಪರ್ಧಿಸಿದರೆ, ಅವರ ಎದುರಾಳಿಯಾಗಿ ಪಕ್ಷೇತರ ಅಭ್ಯರ್ಥಿ ಎಸ್.ಬಿ.ದೇಸಾಯಿ ಎಂಬುವರು ಸ್ಪರ್ಧಿಸಿ ಸೋಲುಂಡವರು. ಅಂದು ನಡೆದ ಚುನಾವಣೆಯಲ್ಲಿ ಒಟ್ಟು ಮತದಾನವಾದ ಮತಗಳು 2,43,679 ಶೇಕಡಾ (63.25)ರಷ್ಟು ಮತದಾನವಾಗಿತ್ತು.ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಆರ್.ಬಿ. ಬಿದರಿ 1,58,171 ಮತಗಳನ್ನು ಪಡೆದು ಆಯ್ಕೆಯಾದರೆ ಅವರ ಸಮೀಪದ ಪ್ರತಿ ಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಎಸ್.ಬಿ.ದೇಸಾಯಿ ಅವರು 85,508 ಮತಗಳನ್ನು ಮಾತ್ರ ಪಡೆದು ಪರಾಭವಗೊಂಡಿದ್ದರು. ಇವರ ಗೆಲವಿನ ಅಂತರ 72,663 ಆಗಿತ್ತು.ಬಾಕ್ಸ್ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ರಾಜಕಾರಣವನ್ನು ಸ್ವಾರ್ಥಕ್ಕೆ ಬಳಿಸಿಕೊಳ್ಳುವವರು ಯಾರೂ ಸಹ ಇರಲಿಲ್ಲಾ ಬದಲಾಗಿ ಅದೊಂದು ಜನಸೇವೆಯ ಬಾಗವಾಗಿತ್ತು, ಪರಸ್ಪರ ಎದುರಾಳಿಗಳು ಸಹ ಚುನಾವಣೆಯನ್ನು ಪ್ಯೆಪೋಟಿಯಾಗಿ ನೋಡದೇ ಅದೊಂದು ಸಾಮಾನ್ಯ ಪ್ರಕ್ರಿಯೆ ಎಂದು ಭಾವಿಸಿದ್ದರ ಪರಿಣಾಮ ಅಂದಿನ ಚುನಾವಣೆಗಳಲ್ಲಿ ಈಗ ಕಾಣುವ ಗಲಭೆ,ಮತ್ಸರದದಂತಹ ಯಾವ ಘಟನೆಗಳು ಕಾಣಲು ಸಾಧ್ಯವಿರಲಿಲ್ಲಾ ಬದಲಾಗಿ ಸ್ನೇಹ,ಕರುಣೆ ಕಾಣಬಹುದಾಗಿತ್ತು.