ಸಾರಾಂಶ
ಚಾಮರಾಜನಗರ ಪಟಣ್ಣದ ೧೭ನೇ ವಾರ್ಡಿನ ಉಪ್ಪಾರ ಬೀದಿ ನಿವಾಸಿ ಕೃಷ್ಣ ಅವರ ಮಗ ಮೋಹನ್ ಸಿ.ಕೆ. (೨೬), ಇನ್ನೊಬ್ಬ ಸವಾರನಿಗೆ ಗಂಭೀರವಾದ ಗಾಯವಾಗಿದ್ದು, ಗಾಯಾಳುವನ್ನು ಮೈಸೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿಡಲಾಗಿದೆ.
ಚಾಮರಾಜನಗರ: ನಗರದ ಜಾಲಹಳ್ಳಿ ಹುಂಡಿ ಗ್ರಾಮದ ಹತ್ತಿರ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಚಾಮರಾಜನಗರ ಪಟಣ್ಣದ ೧೭ನೇ ವಾರ್ಡಿನ ಉಪ್ಪಾರ ಬೀದಿ ನಿವಾಸಿ ಕೃಷ್ಣ ಅವರ ಮಗ ಮೋಹನ್ ಸಿ.ಕೆ. (೨೬), ಇನ್ನೊಬ್ಬ ಸವಾರನಿಗೆ ಗಂಭೀರವಾದ ಗಾಯವಾಗಿದ್ದು, ಗಾಯಾಳುವನ್ನು ಮೈಸೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿಡಲಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ, ದೂರು ದಾಖಲಿಸಿಕೊಂಡಿದ್ದು, ಶವವನ್ನು ಸಿಮ್ಸ್ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಶವವನ್ನು ಹಸ್ತಾಂತರಿಸಲಾಯಿತು.