ಸಾರಾಂಶ
ಸಾಧ್ವಿ ರಾಜಲಕ್ಷ್ಮಿ ಅವರು 62 ದಿನಗಳ 21 ಸಾವಿರ ಕಿ.ಮೀ ಪ್ರಯಾಣವು ತಮಿಳುನಾಡಿನ ಚೆನ್ನೈನಿಂದ ಪ್ರಾರಂಭವಾಗಿ ದೆಹಲಿಯವರೆಗೂ ಬೈಕ್ ರ್‍ಯಾಲಿಯ ಮುಖಾಂತರ ತೆರಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ದೃಢ ಸಂಕಲ್ಪದೊಂದಿಗೆ ಬೈಕ್ ಮುಖಾಂತರ ಪ್ರಯಾಣಿಸಿ ಬೆಳಗಾವಿಗೆ ಬಂದ ಬಂದ ರ್‍ಯಾಲಿಯನ್ನು ಶನಿವಾರ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು.ಸಾಧ್ವಿ ರಾಜಲಕ್ಷ್ಮಿ ಅವರು 62 ದಿನಗಳ 21 ಸಾವಿರ ಕಿ.ಮೀ ಪ್ರಯಾಣವು ತಮಿಳುನಾಡಿನ ಚೆನ್ನೈನಿಂದ ಪ್ರಾರಂಭವಾಗಿ ದೆಹಲಿಯವರೆಗೂ ಬೈಕ್ ರ್‍ಯಾಲಿಯ ಮುಖಾಂತರ ತೆರಳುತ್ತಿದ್ದಾರೆ. ಸಾಧ್ವಿ ಮಾತಾ ರಾಜಲಕ್ಷ್ಮಿ ಅವರು ನಗರಕ್ಕೆ ಆಗಮಿಸಿದ ವೇಳೆ ಅವರನ್ನು ಸ್ವಾಗತಿಸಿ ಮಾತನಾಡಿದ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು, ಸಾಧ್ವಿ ಮಾತಾ ರಾಜಲಕ್ಷ್ಮಿ ಅವರು ಆರಂಭಿಸಿರುವ ಈ ಬೈಕ್ ರ್‍ಯಾಲಿಯ ಉದ್ದೇಶ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ಮತ್ತೊಮ್ಮೆ ಅವರೇ ಪ್ರಧಾನಿಯಾಗಬೇಕೆಂಬ ಮಾಡಿರುವ ದೃಢ ಸಂಕಲ್ಪವಾಗಿದೆ. ಸಾಧ್ವಿ ರಾಜಲಕ್ಷ್ಮೀ ಅವರ ದೆಹಲಿ ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ನಗರದ ಕೋಟೆ ಹತ್ತಿರ ಇರುವ ದುರ್ಗಾ ಮಂದಿರದಿಂದ ಬೈಕ್ ರ್‍ಯಾಲಿ ಮುಖಾಂತರ ಸಾಧ್ವಿ ಮಾತಾ ರಾಜಲಕ್ಷ್ಮಿ ಅವರನ್ನು ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಗ್ರಾಮಾಂತರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹಾಂತೇಶ್ ಚಿನ್ನಪ್ಪಗೌಡರ, ಯುವ ಮೋರ್ಚಾ ಮಹಾನಗರ ಜಿಲ್ಲಾಧ್ಯಕ್ಷ ಮಹಾದೇವ ಧರೆಣ್ಣವರ, ರಾಜಶೇಖರ ಢೋನಿ, ಸದಾನಂದ ಗುಂಟೆಪ್ಪನವರ, ಈರಯ್ಯ ಖೋತ್, ಸಚಿನ ಕಡಿ, ಬಾಳೇಶ ಚವ್ವನ್ನವರ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.