ಸಾರಾಂಶ
ಭಾರತದ ಪ್ರಜೆಗಳಾದ ನಾವು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಯಾವುದೇ ಧರ್ಮ, ಜನಾಂಗ, ಜಾತಿ, ಮತ, ಭಾಷೆಯ ಪ್ರೇರಣೆ, ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುವಂತಾಗಬೇಕು.
ಹೊಸಪೇಟೆ: ಭಾರತದ ಪ್ರತಿಯೊಬ್ಬ ಪ್ರಜೆಗೆ ಮತದಾನ ಜನ್ಮಸಿದ್ಧ ಹಕ್ಕು. ಅದನ್ನು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ಹಕ್ಕನ್ನು ಮಾರಿಕೊಳ್ಳದೆ ಯೋಗ್ಯ ಅಭ್ಯರ್ಥಿಗೆ ಮತ ನೀಡಬೇಕು ಎಂದು ಕಮಲಾಪುರ ಮುಖ್ಯಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಕಮಲಾಪುರ ಪುರಸಭೆಯಿಂದ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು.ಭಾರತದ ಪ್ರಜೆಗಳಾದ ನಾವು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಯಾವುದೇ ಧರ್ಮ, ಜನಾಂಗ, ಜಾತಿ, ಮತ, ಭಾಷೆಯ ಪ್ರೇರಣೆ, ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುವಂತಾಗಬೇಕು ಎಂದರು.
ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇದೆಯಾ? ಎಂದು ಪ್ರಶ್ನಿಸುವ ಮೂಲಕ ಈ ಕಾರ್ಡ್ ಮತದಾನದ ವೇಳೆ ಅವಶ್ಯವಿದ್ದು ಅದನ್ನು ತಮ್ಮ ಬಳಿ ಇಟ್ಟುಕೊಂಡು ಮತದಾನಕ್ಕೆ ಹೋಗುವುದು ಅವಶ್ಯವಾಗಿದೆ. ಭಾರತೀಯ ಪ್ರತಿಯೊಬ್ಬ ಪ್ರಜೆಗೆ ಮತದಾನ ಜನ್ಮಸಿದ್ಧ ಹಕ್ಕು. ಅದನ್ನು ಯಾವುದೇ ಆಸೆ, ಆಮಿಷಕ್ಕೆ ಒಳಗಾಗಿ ಮಾರಿಕೊಳ್ಳಬಾರದು ಎಂದರು.ಜೆಸ್ಕಾಂ ಎಇ ಕೃಷ್ಣಮೂರ್ತಿ, ಜೆಇ ಟಿ.ಎಸ್.ಹನುಮಂತ, ಸಿಎಒ ಮಂಜುನಾಥ್, ಕಂದಾಯ ಇಲಾಖೆಯ ವಿಎ ರವಿಚಂದ್ರ, ಎಸ್‌ಎಚ್‌ಐ ಲತಾ, ಜೆಎಚ್ ಐ ಹೇಮಂತರಾಜ್, ಆಹಾರ ಇಲಾಖೆಯ ಎಚ್ ಐ ಧರ್ಮೋಜಿ, ಪುರಸಭೆ ಸ್ಥಾನಿಕ ಅಧಿಕಾರಿಗಳಾದ ಲಕ್ಷ್ಮಿ, ಹುಲುಗಪ್ಪ, ಫಯಾಜ್, ಸಿಕಂದರ್ ಮತ್ತಿತರರಿದ್ದರು.