Bike-tipper collision: Bike rider dies on the spot.

ಕಮಲಾಪುರ: ಪಟ್ಟಣದ ಮೋಹನ ಟೈಯರ್ ಕಾರ್ಖಾನೆ ಎದುರುಗಡೆ ರಾಷ್ಟ್ರೀಯ ಹೆದ್ದಾರಿ ಮೇಲೆ ಬುಧುವಾರ 4ಕ್ಕೆ ಬೈಕ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಕಲಬುರ್ಗಿಯ ಖಮರ್ ಕಾಲೋನಿಯ ನಿವಾಸಿ ಅಹಮದ್ ಮಹಮ್ಮದ್(25) ಹಾಗೂ ಕಲಬುರ್ಗಿ ಕೆ.ಬಿ.ಎನ್. ಕಾಲೇಜಿನಲ್ಲಿ ಫೈನಲ್ ಇಯರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಕಲಬುರ್ಗಿಯಿಂದ ಕೆಲಸದ ನಿಮಿತ್ಯ ರಾಯಲ್ ಎಂಫಿಲ್ಡ್ ಬೈಕ್ ಮೇಲೆ ಕಮಲಾಪುರಕ್ಕೆ ಬರುತ್ತಿರುವ ಸಮಯದಲ್ಲಿ ಎದುರಿಗೆ ಬರುತ್ತಿರುವ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಘಟನಾ ಸ್ಥಳಕ್ಕೆ ಕಮಲಾಪುರ ಪಿಎಸ್ಐ ಸುಖಾನಂದ ಸಿಂಗೆ, ಸಿಬ್ಬಂದಿ ಹುಸೇನ್ ಪಟೇಲ್, ಶಕೀಲ್, ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಶವ ಮರಣೋತ್ತರ ಪರೀಕ್ಷೆ ನಡೆಸಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.ಎಂದುಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.