ಸಾರಾಂಶ
ಬೈಕ್‌ನಲ್ಲಿ ಹಿಂಬದಿ ಒಬ್ಬನನ್ನು ಕೂರಿಸಿಕೊಂಡು, ಕೇಕೆ ಹಾಕಿ ಅತಿ ವೇಗದಲ್ಲಿ ಚಾಲನೆ ಮಾಡುತ್ತಾ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಆರೋಪಿಗಳ ವಿರುದ್ಧ ಚನ್ನಗಿರಿ ಪೊಲೀಸರು ಪ್ರಕರಣ ದಾಲಿಸಿದ್ದಾರೆ.
ದಾವಣಗೆರೆ: ಬೈಕ್‌ನಲ್ಲಿ ಹಿಂಬದಿ ಒಬ್ಬನನ್ನು ಕೂರಿಸಿಕೊಂಡು, ಕೇಕೆ ಹಾಕಿ ಅತಿ ವೇಗದಲ್ಲಿ ಚಾಲನೆ ಮಾಡುತ್ತಾ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಆರೋಪಿಗಳ ವಿರುದ್ಧ ಚನ್ನಗಿರಿ ಪೊಲೀಸರು ಪ್ರಕರಣ ದಾಲಿಸಿದ್ದಾರೆ.
ಚನ್ನಗಿರಿ ಪಟ್ಟಣದ ವಿ.ಆರ್. ಬಡಾವಣೆ ವಾಸಿ ತೌಫಿಕ್ ಅಹಮ್ಮದ್ (23) ಹಾಗೂ ಮೊಹಮ್ಮದ್ ತಾಹೀದ್ (19) ಆರೋಪಿಗಳು. ಈ ಇಬ್ಬರೂ ಚನ್ನಗಿರಿಯಿಂದ ಅಜ್ಜಿಹಳ್ಳಿ ಗ್ರಾಮದ ಕಡೆ ಹೋಗುವ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು. ರಸ್ತೆಯಲ್ಲಿ ಸಾಗುವ ಇತರೆ ವಾಹನ ಸವಾರರು, ಸಾರ್ವಜನಿಕರಿಗೆ ತೊಂದರೆ ಆಗುವಂತೆ ಬೈಕ್ ಚಾಲನೆ ಮಾಡುತ್ತಿದ್ದರು.ಪೊಲೀಸರು ಬೈಕ್ ತಡೆದು, ವಾಹನ ದಾಖಲೆ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಯಾವುದೇ ಮಾಹಿತಿ ಕೇಳಿದರೂ ಹಾಜರುಪಡಿಸಿಲ್ಲ. ಈ ಹಿನ್ನೆಲೆ ಸಂಚಾರ ನಿಯಮಗಳ ಉಲ್ಲಂಘನೆ ವಿರುದ್ಧ ತೌಫಿಕ್ ಅಹಮ್ಮದ್, ಮೊಹಮ್ಮದ್ ತಾಹೀದ್ ವಿರುದ್ಧ ಚನ್ನಗಿರಿ ಪೊಲೀಸರು ಪ್ರಕರಣ ದಾಖಲಿಸಿ, ಕ್ರಮ ಕೈಗೊಂಡಿದ್ದಾರೆ.