ಸಾರಾಂಶ
- ಬಿಜೆಪಿ ನೇತೃತ್ವದ ಸರ್ಕಾರ ಸರ್ವಾಧಿಕಾರಿ ಧೋರಣೆ
ಕನ್ನಡಪ್ರಭ ವಾರ್ತೆ, ಮೂಡಿಗೆರೆಬಿಲ್ಕಿಸ್ಬಾನು ಪ್ರಕರಣದಲ್ಲಿ ಭಾಗಿಯಾಗಿದ್ದ 11 ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆಗೊಳಿಸಿದ್ದ ಗುಜರಾತ್ ಸರಕಾರದ ನಡೆ ತಪ್ಪು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪು ಪ್ರಜಾಪ್ರಭುತ್ವದ ಪರವಾಗಿದ್ದು ಸಂವಿಧಾನಾತ್ಮಕವಾಗಿದೆ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಹೇಳಿಕೆ ನೀಡಿ, ಬಿಜೆಪಿ ನೇತೃತ್ವದ ಸರ್ಕಾರ ಸರ್ವಾಧಿಕಾರಿಯಂತೆ ತೆಗೆದುಕೊಂಡ ಕ್ರಮವನ್ನು ಸುಪ್ರೀಂ ಕೋರ್ಟ್ ಸರಿಯಾಗಿ ಗುರುತಿಸಿದೆ. ಗುಜರಾತ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕ್ರಮ ಸಮಂಜಸ. ಕೋಮುವಾದಿಗಳು, ಫ್ಯಾಸಿಸ್ಟರು, ಅತ್ಯಾಚಾರಿಗಳಿಗೆ ನೀಡಿದ ಎಚ್ಚರಿಕೆ ಗಂಟೆಯಾಗಿದೆ. ಇಂತಹ ಐತಿಹಾಸಿಕ ತೀರ್ಪಿನಿಂದ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಹಾಗೂ ಕಾನೂನಿನ ಮೇಲಿನ ನಂಬಿಕೆ ಇಮ್ಮಡಿಗೊಳಿಸಿದೆ ಎಂದಿದ್ದಾರೆ.2002ರಲ್ಲಿ ಗೋದ್ರಾ ರೈಲಿಗೆ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ 59 ಜನ ಬಲಿಯಾದರು. ಆ ಬಳಿಕ ಗುಜರಾತಿನ ಗೋದ್ರ ಸುತ್ತಮುತ್ತ ಲಿನ ಪ್ರದೇಶಗಳಲ್ಲಿ ಕೋಮುಗಳ್ಳುರಿ ಸ್ಪೋಟಿವಾಯಿತು. ಸಾವಿರಾರು ಧಾರ್ಮಿಕ ಅಲ್ಪಸಂಖ್ಯಾತರ ಹತ್ಯೆ ಯಾಯಿತು. ಆ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಬಿಲ್ಕಿಸ್‌ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಆಕೆಯ 3 ವರ್ಷದ ಮಗಳು ಸೇರಿ ಸಂಬಂಧಿಕರ ಹತ್ಯೆಯಾಗಿತ್ತು. ಈ ಪ್ರಕರಣದ 11 ಜನ ಅಪರಾಧಿಗಳು ಎಂಬುದು ಸಿಬಿಐ ತನಿಖೆಯಿಂದ ಸಾಬೀತಾಯಿತು. ವಿಶೇಷ ನ್ಯಾಯಾಲಯ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2022ರಲ್ಲಿ ಗುಜರಾತ್ ಸರ್ಕಾರ ಸನ್ನಡತೆ ಕಾರಣ ನೀಡಿ 11 ಅಪರಾಧಿಗಳನ್ನು ಶಿಕ್ಷೆ ಕುಣಿಕೆಯಿಂದ ಪಾರು ಮಾಡಿತ್ತು.
ಈ ನಡವಳಿಕೆ ಕೋಮುವಾದಿ ಶಕ್ತಿಗಳ ಅಪರಾಧ ರಕ್ಷಿಸುವ ಮತ್ತು ಬೆಂಬಲಿಸುವ ಭಾಗವಾಗಿತ್ತು. ಬಿಲ್ಕಿಸ್‌ಬಾನು ಪ್ರಕರಣದ ಈ ತೀರ್ಪಿನಿಂದ ಸಂವಿಧಾನದ ಮೇಲೆ ನಂಬಿಕೆ ಬಂದಂತಾಗಿದೆ. ಬಿಲ್ಕಿಸ್‌ಬಾನು ಪ್ರಕರಣದ ತೀರ್ಪು ಎಲ್ಲ ಜನದ್ರೋಹಿಗಳಿಗೆ ಅತ್ಯಾಚಾರಿಗಳಿಗೆ ಒಂದು ಎಚ್ಚರಿಕೆ ಎಂದು ತಿಳಿಸಿದ್ದಾರೆ.10ಎಂಡಿಜಿ1ಎ: ಬಿ.ರುದ್ರಯ್ಯ