ಸಾರಾಂಶ
ಮಂಗಳವಾರ ಬೆಳಗಿನ ಜಾವ ಮೊಟ್ಟೆಗಳಿಂದ ಹೊರಬಂದ ೯೫ ಮರಿಗಳನ್ನು ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ನಾಯ್ಕ, ಅರಣ್ಯ ಸಿಬ್ಬಂದಿ ಚಂದ್ರಕಾಂತ್ ಅವರ ನೇತೃತ್ವದಲ್ಲಿ ಹೊನ್ನಾವರ ಫೌಂಡೇಶನ್ ಸಹಕಾರದೊಂದಿಗೆ ಸಮುದ್ರಕ್ಕೆ ಬಿಡಲಾಯಿತು.
ಹೊನ್ನಾವರ: ಕಾಸರಕೋಡಿನ ಟೊಂಕ ಕಡಲತೀರದಲ್ಲಿ ಆಲೀವ್ ರಿಡ್ಲೆ ಆಮೆಯ ಮೊಟ್ಟೆಯಿಂದ ಮರಿಯಾಗಿ ಹೊರಬಂದಿವೆ.
ಕಳೆದ ಡಿ. ೨೪ರಂದು ಕಡಲಾಮೆಯು ಮೊಟ್ಟೆಯನ್ನು ಇಟ್ಟಿತ್ತು. ೧೨೪ ಮೊಟ್ಟೆಗಳನ್ನು ಸ್ಥಳೀಯ ಮೀನುಗಾರರ ಮುಖಂಡರಾದ ರಾಜು ತಾಂಡೇಲ್, ರಮೇಶ್ ತಾಂಡೇಲ್ ಹಾಗೂ ಭಾಸ್ಕರ್ ತಾಂಡೇಲ್ ಅವರು ಗುರುತಿಸಿ, ಅರಣ್ಯ ಇಲಾಖೆ ಸಹಕಾರದೊಂದಿಗೆ ಮೊಟ್ಟೆಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿ, ಅವುಗಳಿಗೆ ನೆಟ್ ಬಲೆಯಿಂದ ಸುತ್ತ ಬೇಲಿಯನ್ನು ಹಾಕಿ ಇತರೆ ಪ್ರಾಣಿ, ಪಕ್ಷಿಗಳಿಂದ ರಕ್ಷಿಸಿದ್ದರು.ಇದೀಗ ಮಂಗಳವಾರ ಬೆಳಗಿನ ಜಾವ ಮೊಟ್ಟೆಗಳಿಂದ ಹೊರಬಂದ ೯೫ ಮರಿಗಳನ್ನು ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ನಾಯ್ಕ, ಅರಣ್ಯ ಸಿಬ್ಬಂದಿ ಚಂದ್ರಕಾಂತ್ ಅವರ ನೇತೃತ್ವದಲ್ಲಿ ಹೊನ್ನಾವರ ಫೌಂಡೇಶನ್ ಸಹಕಾರದೊಂದಿಗೆ ಸಮುದ್ರಕ್ಕೆ ಬಿಡಲಾಯಿತು.
ಅಳಿವಿನ ಅಂಚಿನಲ್ಲಿರುವ ಆಮೆಗಳ ಸಂರಕ್ಷಣೆ ಶ್ರಮ ವಹಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಮೀನುಗಾರ ಮುಖಂಡರು, ಸ್ಥಳೀಯ ಮೀನುಗಾರ ಗಣಪತಿ ತಾಂಡೇಲ್, ಸಂತೋಷ್ ತಾಂಡೇಲ್, ಹೊನ್ನಾವರ ಫೌಂಡೇಶನ್‌ನ ಗುರುಪ್ರಸಾದ್ ಎನ್.ಎಂ. ಇತರರು ಇದ್ದರು.ಗ್ಯಾಸ್ ಟ್ಯಾಂಕರ್ ಪಲ್ಟಿ: ಚಾಲಕ, ಕ್ಲೀನರ್ ಪಾರುಹೊನ್ನಾವರ: ತಾಲೂಕಿನ ಕಾಸರಕೋಡಿನ ರೋಷನ್ ಮೊಹಲ್ಲಾ ಸಮೀಪ ಗ್ಯಾಸ್ ಟ್ಯಾಂಕರ್ ಮಂಗಳವಾರ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಅಲ್ಲದೇ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿಲ್ಲ.ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಟ್ಯಾಂಕರ್ ಪಲ್ಟಿ ಹೊಡೆದಿದೆ. ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದೆ. ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಟ್ಯಾಂಕರ್‌ನಿಂದ ಯಾವುದೇ ಅನಿಲ ಸೋರಿಕೆ ಆಗಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಇದರಿಂದ ಸುತ್ತಲಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ.ಮರಕ್ಕೆ ಬಸ್ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯಯಲ್ಲಾಪುರ: ಶಿರಸಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮರಕ್ಕೆ ಡಿಕ್ಕಿ ಹೊಡೆದು, ಉರುಳಿ ಬಿದ್ದ ಘಟನೆ ಫೆ. ೧೧ರಂದು ಬೆಳಗ್ಗೆ ತಾಲೂಕಿನ ಕಣ್ಣಿಗೇರಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.೪೦ಕ್ಕಿಂತ ಅಧಿಕ ಸಂಖ್ಯೆಯ ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ೧೭ಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಸಾಮಾನ್ಯ ಗಾಯವಾಗಿದ್ದು, ಚಾಲಕನನ್ನೂ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಘಟನೆಯ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.