ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲೆ ಮತ್ತೊಮ್ಮೆ ಬಿಜೆಪಿ ಭದ್ರಕೋಟೆ ಎಂಬುದು ಸಾಬೀತಾಗಿದೆ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ 1,49,208 ಮತಗಳ ಅಂತರದಿಂದ ಜಯಗಳಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 1991ರ ಬಳಿಕ ಸತತ 9 ಬಾರಿ ಗೆಲುವು ದಾಖಲಿಸುವ ಮೂಲಕ ಬಿಜೆಪಿ ದ.ಕ.ದಲ್ಲಿ ತನ್ನ ಕೋಟೆ ಭದ್ರ ಎಂಬುದನ್ನು ಸಾಬೀತುಪಡಿಸಿದೆ.ಕ್ಯಾ.ಬ್ರಿಜೇಶ್ ಚೌಟ ಅವರು 7,64,132 ಮತಗಳನ್ನು ಪಡೆದಿದ್ದರೆ, ಪದ್ಮರಾಜ್ ಆರ್. ಪೂಜಾರಿ 6,14,924 ಮತಗಳನ್ನು ಪಡೆದಿದ್ದಾರೆ. ಲೋಕಸಭೆಗೆ ಪ್ರಥಮ ಪ್ರಯತ್ನದಲ್ಲೇ ಪ್ರವೇಶಿಸುವ ಮೂಲಕ ಕಳೆದ 33 ವರ್ಷಗಳ ಬಿಜೆಪಿ, ಹಿಂದುತ್ವದ ಭದ್ರಕೋಟೆಯ ಸಾರಥ್ಯ ವಹಿಸಿಕೊಂಡಿದ್ದಾರೆ. ಪ್ರತಿ ಸುತ್ತಿನಲ್ಲೂ ಕ್ಯಾ.ಚೌಟ ಮುನ್ನಡೆ: ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಸುರತ್ಕಲ್‌ನ ಎನ್‌ಐಟಿಕೆ ಕೇಂದ್ರದಲ್ಲಿ ಬೆಳಗ್ಗೆ 7 ಗಂಟೆಯ ಸುಮಾರಿಗೆ ಭದ್ರತಾ ಕೊಠಡಿಗಳನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ನೇತೃತ್ವದಲ್ಲಿ ತೆರೆಯುವ ಮೂಕ ಆರಂಭಗೊಂಡಿತು.
ಚುನಾವಣಾ ಏಜೆಂಟರ ಆಗಮನ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಗೆ ಆರಂಭವಾಗಬೇಕಿದ್ದ ಪ್ರಕ್ರಿಯೆ 7ರ ಸುಮಾರಿಗೆ ಆರಂಭಗೊಂಡಿತ್ತು. ಬೆಳಗ್ಗೆ 8 ಗಂಟೆ ವೇಳೆಗೆ ಅಂಚೆ ಮತಗಳ ಎಣಿಕೆ ಆರಂಭಗೊಂಡಿದ್ದು, ಬಳಿಕ 8.30ಕ್ಕೆ ಇವಿಎಂಗಳ ಎಣಿಕೆ ಕಾರ್ಯ ಆರಂಭಿಸಲಾಯಿತು.ಆರಂಭದ ಮತ ಎಣಿಕೆಯ ಫಲಿತಾಂಶ ಹೊರಬಿದ್ದಾಗ ಬೃಜೇಶ್ ಚೌಟ ಅವರು 9,080 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದರು. ಅಲ್ಲಿಂದ 19 ಸುತ್ತಿಗಳ ಎಣಿಕೆ ವರೆಗೂ ಕ್ಯಾ.ಚೌಟ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ 18ನೇ ಸುತ್ತಿನಲ್ಲಿ ಮಾತ್ರ ಕಾಂಗ್ರೆಸ್‌ನ ಪದ್ಮರಾಜ್ ಅವರು 460 ಮತಗಳ ಮುನ್ನಡೆ ಪಡೆದಿದ್ದರು.
ಅಂಚೆ ಮತಗಳಲ್ಲೂ ಕ್ಯಾ.ಚೌಟ ಮುನ್ನಡೆ: ಒಟ್ಟು 8,773 ಅಂಚೆ ಮತಗಳ ಎಣಿಕೆಯಲ್ಲಿ 2,821 ಪದ್ಮರಾಜ್‌ಗೆ ಹಾಗೂ 4,002 ಮತಗಳು ಕ್ಯಾ.ಚೌಟ ಅವರಿಗೆ ದೊರಕಿತ್ತು. ಈ ಸಂದರ್ಭ 1,741 ಅಂಚೆ ಮತಗಳು ತಿರಸ್ಕೃತಗೊಂಡಿತ್ತು.ನೋಟಾಗೆ 3ನೇ ಸ್ಥಾನ!ದ.ಕ. ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನೋಟಾಗೆ 23,576 ಚಲಾವಣೆಯಾಗಿದ್ದು, ಮೂರನೇ ಸ್ಥಾನ ಪಡೆದು ಗಮನ ಸೆಳೆದಿದೆ. ಚುನಾವಣೆ ವೇಳೆ ನೋಟಾಗೂ ಅಭಿಯಾನ ನಡೆದಿತ್ತು. ಬೆಳ್ತಂಗಡಿಯಲ್ಲಿ ಗರಿಷ್ಠ 7,691 ಹಾಗೂ ಸುಳ್ಯದಲ್ಲಿ 4,541 ನೋಟಾ ಚಲಾವಣೆಯಾಗಿದೆ. ಮೂಡುಬಿದಿರೆಯಲ್ಲಿ 2,166, ಮಂಗಳೂರು ದಕ್ಷಿಣ 2,019, ಬಂಟ್ವಾಳ 2,353, ಪುತ್ತೂರು 2,302 ನೋಟಾ ಚಲಾವಣೆಗೊಂಡಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಮೇಲಿನ ಅಸಮಾಧಾನದಿಂದ 7,380 ನೋಟಾ ಮತ ಚಲಾವಣೆಯಾಗಿತ್ತು.ಬಾಕ್ಸ್----ಫಲಿತಾಂಶ ವಿವರ:
ಒಟ್ಟು ಚಲಾವಣೆಯಾದ ಮತಗಳು-14,15,770, ಅಂಚೆ ಮತಪತ್ರ-6,971, ತಿರಸ್ಕೃತ-1,741ಒಟ್ಟು 9 ಮಂದಿ ಕಣದಲ್ಲಿದ್ದು, ಅವರು ಪಡೆದ ಮತಗಳು-
ಕಾಂತಪ್ಪ ಆಲಂಗಾರು(ಬಿಎಸ್‌ಪಿ)-4,232ಪದ್ಮರಾಜ್ ಆರ್.ಪೂಜಾರಿ(ಕಾಂಗ್ರೆಸ್)-6,14,924
ಕ್ಯಾ.ಬ್ರಿಜೇಶ್ ಚೌಟ(ಬಿಜೆಪಿ)-7,64,132ದುರ್ಗಾ ಪ್ರಸಾದ್(ಕರುನಾಡ ಸೇವಕರ ಪಕ್ಷ)-2,592
ಮನೋಹರ(ಉತ್ತಮ ಪ್ರಜಾಕೀಯ ಪಕ್ಷ)-971ರಂಜಿನಿ ಎಂ.(ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ)-776
ದೀಪಕ್ ರಾಜೇಶ್ ಕುವೆಲ್ಲೊ(ಪಕ್ಷೇತರ)-976ಮ್ಯಾಕ್ಸಿಂ ಪಿಂಟೋ(ಪಕ್ಷೇತರ)-1,690
ಸುಪ್ರೀತ್ ಕುಮಾರ್ ಪೂಜಾರಿ(ಪಕ್ಷೇತರ)-1,901ನೋಟಾ-23,576ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟಗೆ ಮಂಗಳೂರು ಉತ್ತರದಲ್ಲಿ ಗರಿಷ್ಠ 1,08,137 ಮತಗಳ ಲೀಡ್ ಸಿಕ್ಕಿದರೆ, ಕನಿಷ್ಠ ಲೀಡ್ ಸಿಕ್ಕಿರುವುದು 64,870 ಮಂಗಳೂರಲ್ಲಿ. ಕಾಂಗ್ರೆಸ್‌ನ ಪದ್ಮರಾಜ್‌ಗೆ ಗರಿಷ್ಠ ಮತ 97,933 ಮಂಗಳೂರು ಕ್ಷೇತ್ರದಲ್ಲಿ ಸಿಕ್ಕಿದರೆ, ಅತೀ ಕನಿಷ್ಠ 63,615 ಮತ ಸುಳ್ಯದಲ್ಲಿ ಲಭಿಸಿದೆ.