ಸಾರಾಂಶ
ಕೂಡ್ಲಿಗಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಇತಿಹಾಸ ತೊಡೆದು ಹಾಕಿ ಕಾಂಗ್ರೆಸ್ ಇತಿಹಾಸ ನಿರ್ಮಿಸಿದೆ.
ಕೂಡ್ಲಿಗಿ: ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 25 ವರ್ಷಗಳಿಂದ ಲೋಕಸಭೆ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ 25 ಸಾವಿರ ಮತಗಳ ಲೀಡ್‌ನಿಂದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿತ್ತು. ಈ ಬಾರಿ ಬಿಜೆಪಿಯ ಈ ಇತಿಹಾಸ ಮುರಿದು ಕೂಡ್ಲಿಗಿ ಕ್ಷೇತ್ರದಿಂದ 8ರಿಂದ 10 ಸಾವಿರ ಮತಗಳ ಲೀಡ್ ಪಡೆದು ಕಾಂಗ್ರೆಸ್ ಅಭ್ಯರ್ಥಿ ತುಕಾರಾಂಗೆ ಗೆದ್ದಿದ್ದಾರೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ ಹೇಳಿದರು.
ಅವರು ಮಂಗಳವಾರ ರಾತ್ರಿ ಕನ್ನಡಪ್ರಭದೊಂದಿಗೆ ಮಾತನಾಡಿ, 2004ರಿಂದ ನಿರಂತರವಾಗಿ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ನಿರಂತರವಾಗಿ 18 ರಿಂದ 25ಸಾವಿರದವರೆಗೂ ಲೀಡ್ ಬಿಜೆಪಿ ಪಕ್ಷದಿಂದ ಬರುತಿತ್ತು. ಆದರೆ ಈ ಬಾರಿ 25 ಸಾವಿರ ಬಿಜೆಪಿ ಲೀಡ್ ನ್ನು ಮೆಟ್ಟಿನಿಂತ 8ರಿಂದ 10 ಸಾವಿರ ಲೀಡ್ ಪಡೆದಿರುವುದು ಬಳ್ಳಾರಿ ಜಿಲ್ಲೆಯ ಜನತೆಗೆ ಸಂದ ಜಯವಾಗಿದೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜಯವಾಗಿದೆ ಎಂದು ಬಣ್ಣಿಸಿದರು.ಜನರ ತೀರ್ಪಿಗೆ ತಲೆಬಾಗುವೆ:
ಕೂಡ್ಲಿಗಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಇತಿಹಾಸ ತೊಡೆದು ಹಾಕಿ ಕಾಂಗ್ರೆಸ್ ಇತಿಹಾಸ ನಿರ್ಮಿಸಿದೆ. ಇದಕ್ಕೆ ಕೂಡ್ಲಿಗಿ ಕ್ಷೇತ್ರವಲ್ಲದೇ ಅಖಂಡ ಬಳ್ಳಾರಿ ಜಿಲ್ಲೆ ಜನತೆಯ ಆಶೀರ್ವಾದ ಕಾರಣ. ಜನತೆ ಏನು ತೀರ್ಪು ನೀಡುತ್ತಾರೋ ಅದನ್ನು ಸ್ವೀಕರಿಸುತ್ತೇನೆ. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಭೇದ ಮಾಡದೇ ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಸಂಸದರ ಜೊತೆ ಶ್ರಮಿಸುವುದಾಗಿ ಡಾ.ಎನ್.ಟಿ. ಶ್ರೀನಿವಾಸ್ ತಿಳಿಸಿದರು.