ಕೊಪ್ಪ ಸ್ವಚ್ಛತೆಗೆ ಬಿಜೆಪಿಯಿಂದ ಪಪಂ ಮುಖ್ಯಾಧಿಕಾರಿಗೆ ಮನವಿ

| Published : Jun 21 2024, 01:06 AM IST

ಕೊಪ್ಪ ಸ್ವಚ್ಛತೆಗೆ ಬಿಜೆಪಿಯಿಂದ ಪಪಂ ಮುಖ್ಯಾಧಿಕಾರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ ಪಟ್ಟಣದ ಸ್ವಚ್ಛತೆ ಕಾಪಾಡಲು ಕೊಪ್ಪ ಬಿಜೆಪಿ ನಗರ ಘಟಕದಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ, ಕೊಪ್ಪ

ಕೊಪ್ಪ ಪಟ್ಟಣದ ಸ್ವಚ್ಛತೆ ಕಾಪಾಡಲು ಕೊಪ್ಪ ಬಿಜೆಪಿ ನಗರ ಘಟಕದಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪಟ್ಟಣದ ಹಲವಾರು ಕಡೆ ಈಗಾಗಲೇ ಸುಮಾರು ಡೆಂಘೀ ಜ್ವರದ ಪ್ರಕರಣಗಳು ಪತ್ತೆಯಾಗಿವೆ. ಇದು ಇನ್ನೂ ಹೆಚ್ಚಾಗುವ ಸಂಭವವಿರುವುದರಿಂದ, ಕೊಪ್ಪ ಪಟ್ಟಣದ ಎಲ್ಲಾ ವಾರ್ಡಗಳಲ್ಲೂ ಸಹ ಮುನ್ನೆಚ್ಚರಿಕಾ ಕ್ರಮವಾಗಿ ಸೊಳ್ಳೆ ನಾಶಕ ಸಿಂಪಡಣೆ ಮಾಡಿ ಚರಂಡಿಗಳನ್ನು ಸ್ವಚ್ಛ ಗೊಳಿಸಿ, ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡ ಹಾಗೂ ಕಳೆಯನ್ನು ತೆಗೆಯಲು ಅದರ ಮಾಲೀಕರಿಗೆ ಸ್ಪಷ್ಟ ಸೂಚನೆ ನೀಡಬೇಕು. ಕೊಪ್ಪ ಪಟ್ಟಣದಲ್ಲಿ ರಸ್ತೆ ಬದಿ ವ್ಯಾಪಾರ ನಡೆಸುವ ಹಣ್ಣು ತರಕಾರಿ ಮಾರಾಟ ಮಾಡುವವರು ಪಾದಚಾರಿಗಳಿಗೆ ತೊಂದರೆ ಉಂಟು ಮಾಡುತ್ತಿದ್ದು ಫುಟ್ ಪಾತ್ ಮೇಲೆ ವ್ಯಾಪಾರ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಬಹಳ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಕೂಡಲೇ ಇದರ ಬಗ್ಗೆ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಖೋರಲಾಯಿತು.

ವ್ಯಾಪಾರ ವಹಿವಾಟು ಮುಗಿದ ನಂತರ ತರಕಾರಿ ಹಣ್ಣು ಮುಂತಾದವುಗಳ ಸಿಪ್ಪೆ ಕಸವನ್ನು ರಸ್ತೆ ಮೇಲೆ ಬಿಸಾಡುವುದರಿಂದ ಕೊಪ್ಪ ಪಟ್ಟಣದ ಸ್ವಚ್ಛತೆಗೆ ದಕ್ಕೆ ಉಂಟಾಗುತ್ತಿದ್ದು ತಕ್ಷಣವೇ ರಸ್ತೆ ಬದಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿ ಇದರ ಬಗ್ಗೆ ಗಮನ ಹರಿಸಬೇಕು. ಕೊಪ್ಪ ಬಸ್ ನಿಲ್ದಾಣದ ಆವರಣದಲ್ಲಿ ಕಸದ ಡಬ್ಬಿಗಳು ಈ ಹಿಂದೆ ಇದ್ದು ಇತ್ತೀಚೆಗೆ ಕಸದ ಡಬ್ಬಿ ಇಲ್ಲದೆ ಪ್ರಯಾಣಿಕರು ಕಸ ಹಾಕಲು ತೊಂದರೆ ಉಂಟಾಗಿರುತ್ತದೆ ಆದ್ದರಿಂದ ಈ ಕೂಡಲೆ ಇದರ ಬಗ್ಗೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿ ನೀಡಿದ ಸಂದರ್ಭದಲ್ಲಿ ಕೊಪ್ಪ ಬಿಜೆಪಿ ನಗರ ಘಟಕದ ಅಧ್ಯಕ್ಷ ಎ.ದಿವಾಕರ್, ಪ್ರಧಾನ ಕಾರ್ಯದರ್ಶಿ ಸಿ.ಎಚ್.ಪ್ರಕಾಶ್, ಉದಯಕುಮಾರ್ ಜೈನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಇದ್ದಿನಬ್ಬ ಇಸ್ಮಾಯಿಲ್, ಗಾಯಿತ್ರಿ ವಸಂತ್, ಗಾಯಿತ್ರಿ ಶೆಟ್ಟಿ, ರೇಖಾ ಪ್ರಕಾಶ್, ಹೇಮಾವತಿ ಉಪಸ್ಥಿತರಿದ್ದರು.