ಸಾರಾಂಶ
ಬಿಜೆಪಿ ಸದಸ್ಯರು ಪಕ್ಷದಿಂದ ದೂರ । ಪಕ್ಷೇತರ ಸದಸ್ಯ ಬಿಜೆಪಿಯಿಂದ ಅಂತರ । ಸದಸ್ಯರೆಲ್ಲರೂ ಬಿಜೆಪಿ ಜೊತೆ ಇದ್ದಾರೆ: ಗಿರೀಶ್
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಗೊಂಡಿದೆ. ಪುರಸಭೆ ಅಧಿಕಾರಕ್ಕೆ ಬಿಜೆಪಿಗೆ ಬಹುಮತವಿದೆ. ಆದರೂ ಬಿಜೆಪಿ ಅಧಿಕಾರ ಹಿಡಿಯಲು ಭಾರಿ ಸರ್ಕಸ್ ನಡೆಸಬೇಕಿದೆ.
ಪುರಸಭೆಯಲ್ಲಿ ೨೩ ಸದಸ್ಯರಲ್ಲಿ ೧೩ ಮಂದಿ ಬಿಜೆಪಿ ಸದಸ್ಯರ ಜತೆಗೆ ಪಕ್ಷೇತರ ಸದಸ್ಯ ಪಿ.ಶಶಿಧರ್ (ದೀಪು) ಬೆಂಬಲವಾಗಿ ನಿಂತ ಕಾರಣ ಬಿಜೆಪಿ ಸದಸ್ಯರ ಸಂಖ್ಯೆ ೧೪ ಕ್ಕೆ ಏರಿತ್ತು. ಆದರೀಗ ಬಿಜೆಪಿ ಪುರಸಭೆ ಸದಸ್ಯರೂ ಆದ ಪುರಸಭೆ ಮಾಜಿ ಅಧ್ಯಕ್ಷ ರಮೇಶ್ ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ದೂರ ಸರಿದು ಕಾಂಗ್ರೆಸ್ ಬೆಂಬಲಿಸಿದರು. ಪಕ್ಷೇತರ ಸದಸ್ಯ ಪಿ.ಶಶಿಧರ್ (ದೀಪು) ೨೦೨೩ ರ ವಿಧಾನಸಭೆ ಚುನಾವಣೆಯ ಬಳಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ.ಮತ್ತೊಬ್ಬ ಬಿಜೆಪಿ ಸದಸ್ಯೆ ರಾಣಿ ಲಕ್ಷ್ಮೀ ದೇವಿಯ ಪತಿ ಪುರಸಭೆ ಮಾಜಿ ಸದಸ್ಯ ಬಸವರಾಜು ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಆದರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ನೂತನ ಸಂಸದ ಸುನೀಲ್ ಬೋಸ್ ಆಯ್ಕೆಯಾಗಿದ್ದಾರೆ. ಇಂಥ ಸುಸಮಯದಲ್ಲಿ ಪುರಸಭೆ ಅಧಿಕಾರ ಹಿಡಿಯದೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಬಿಡುತ್ತಾರೆಯೇ ಎಂಬ ಪ್ರಶ್ನೆ ಬಿಜೆಪೀಲಿ ಎದ್ದಿದೆ.
ಸದ್ಯಕ್ಕೆ ಬಿಜೆಪಿ ಅಧಿಕಾರ ಹಿಡಿಯಲು ಒಂದು ಮತದ ಕೊರತೆ ಎದ್ದು ಕಾಣುತ್ತಿದೆ. ಆದರೆ ಪುರಸಭೆ ಬಿಜೆಪಿ ಸದಸ್ಯ ರಮೇಶ್ ಬಿಜೆಪಿಗೆ ಮತ ಚಲಾಯಿಸಲಿದ್ದಾರೆ ಎಂಬ ಆಸೆಯನ್ನು ಬಿಜೆಪಿ ಇಟ್ಟುಕೊಂಡಿದೆ.೧೪ ಮಂದಿ ಬಿಜೆಪಿ ಸದಸ್ಯರಿದ್ದ ಬಿಜೆಪಿಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ರಮೇಶ್, ಪಕ್ಷೇತರರಾಗಿ ಆಯ್ಕೆಯಾಗಿ ಬೆಂಬಲಿಸಿದ್ದ ಪಿ.ಶಶಿಧರ್ (ದೀಪು) ಬಿಜೆಪಿಯಿಂದ ಒಂದು ಕಾಲು ಆಚೆ ಇಟ್ಟಾಗಿದೆ. ಇನ್ನೂ ಪುರಸಭೆ ಸದಸ್ಯೆ ರಾಣಿ ಲಕ್ಷ್ಮೀದೇವಿ ಅವರ ಪತಿ ಪುರಸಭೆ ಮಾಜಿ ಸದಸ್ಯ ಬಸವರಾಜು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಾರೆ.
ಪುರಸಭೆ ಸದಸ್ಯ ರಮೇಶ್, ಪಕ್ಷೇತರ ಸದಸ್ಯ ಪಿ.ಶಶಿಧರ್ (ದೀಪು) ಬಿಜೆಪಿಯಿಂದ ದೂರವಾಗಿದ್ದಾರೆ. ಈಗ ಬಿಜೆಪಿ ಸದಸ್ಯೆ ರಾಣಿ ಲಕ್ಷ್ಮೀ ದೇವಿ ದೂರವಾಗದರೆ ೧೪ ಸದಸ್ಯ ಬಲದ ಬಿಜೆಪಿಯಲ್ಲಿ ೧೧ಕ್ಕೆ ಇಳಿಯಲಿದೆ.ಇತ್ತ ಕಾಂಗ್ರೆಸ್ ಗೆ ಬೆಂಬಲಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಲ್ಲ.ಇದು ಬಿಜೆಪಿಗೆ ತುಸು ನೆಮ್ಮದಿ ಸದ್ಯಕ್ಕೆ ತಂದಿದೆ ಎನ್ನಲಾಗಿದೆ.
‘೧೩ ಮಂದಿ ಬಿಜೆಪಿ ಪುರಸಭೆ ಸದಸ್ಯರಲ್ಲಿ ಪುರಸಭೆ ಸದಸ್ಯ ರಮೇಶ್ ಬಿಜೆಪಿಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ.ಉಳಿದೆಲ್ಲ ಸದಸ್ಯರು ಬಿಜೆಪಿಯಲ್ಲಿಯೇ ಇದ್ದಾರೆ.ಪುರಸಭೆ ಸದಸ್ಯರಾದ ರಮೇಶ್‌ಗೆ ಪಕ್ಷದಿಂದ ವಿಫ್ ನೀಡುವ ಕಾರಣ ಬಿಜೆಪಿಗೆ ಬೆಂಬಲಿಸಿದ್ದಾರೆ.ವಿಫ್ ಉಲ್ಲಂಘಿಸುವ ಸಾಧ್ಯತೆ ಕಡಿಮೆ.ಈ ಬಾರಿ ಬಿಜೆಪಿಯೇ ಪುರಸಭೆ ಅಧಿಕಾರ ಹಿಡಿಯಲಿದೆ.
-ಪಿ.ಗಿರೀಶ್, ಪುರಸಭೆ ಮಾಜಿ ಅಧ್ಯಕ್ಷ