ಆಂತರಿಕ ಪ್ರಜಾಪ್ರಭುತ್ವ ಹುಟ್ಟು ಹಾಕಿದ ಬಿಜೆಪಿ

| Published : Mar 06 2024, 02:20 AM IST

ಸಾರಾಂಶ

ಆಂತರಿಕ ಪ್ರಜಾಪ್ರಭುತ್ವ ಗಟ್ಟಿಯಾಗಿ ಹುಟ್ಟು ಹಾಕಿದ್ದು ಬಿಜೆಪಿ. ಪಕ್ಷದೊಳಗೆ ಸಹಮತದ ಮೂಲಕ ಚುನಾವಣೆ ನಡೆಸಿ ಪದಾಧಿಕಾರಿ ಆಯ್ಕೆ ಮಾಡಿ ನಿಜವಾದ ಪ್ರಜಾಪ್ರಭುತ್ವ ಸಾರುತ್ತಿದೆ.

ಯಲ್ಲಾಪುರ:

ಆಂತರಿಕ ಪ್ರಜಾಪ್ರಭುತ್ವ ಗಟ್ಟಿಯಾಗಿ ಹುಟ್ಟು ಹಾಕಿದ್ದು ಬಿಜೆಪಿ. ಪಕ್ಷದೊಳಗೆ ಸಹಮತದ ಮೂಲಕ ಚುನಾವಣೆ ನಡೆಸಿ ಪದಾಧಿಕಾರಿ ಆಯ್ಕೆ ಮಾಡಿ ನಿಜವಾದ ಪ್ರಜಾಪ್ರಭುತ್ವ ಸಾರುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಹೇಳಿದರು.

ಪಟ್ಟಣದಲ್ಲಿ ನಡೆದ ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘಟನಾ ಪರ್ವ ಮತ್ತು ಚುನಾವಣಾ ಪರ್ವ ಪಕ್ಷದ ವ್ಯವಸ್ಥೆಯಾಗಿದೆ. ಬಿಜೆಪಿ ಕೇವಲ ರಾಜಕೀಯಕ್ಕೆ ಹುಟ್ಟಿದ ಪಕ್ಷವಲ್ಲ, ದೇಶದಲ್ಲಿ ಬದಲಾವಣೆ ಮೂಲಕ ಅಭಿವೃದ್ಧಿ ಪರ್ವ ಆರಂಭಿಸಲು ಅಧಿಕಾರ ಬೇಕು. ಅದಕ್ಕಾಗಿ ಚುನಾವಣೆ ಗೆಲ್ಲುವುದು ಅನಿವಾರ್ಯ ಎಂದರು.

ನೂತನ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ ಮಂಡಲಾಧ್ಯಕ್ಷ ಹುದ್ದೆಗೆ ಏರಿದ್ದೇನೆ. ಪಕ್ಷದ ಹಿರಿಯರ ಆದರ್ಶ ನನ್ನಲ್ಲಿ ಸಾಕಷ್ಟು ಕಲಿಯಲು ಸಿಕ್ಕಿತ್ತು. ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸುವ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಎಂಬ ಭರವಸೆ ನೀಡಿದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಮುಖರಾದ ರೇಖಾ ಹೆಗಡೆ ಮಾತನಾಡಿ, ಜವಾಬ್ದಾರಿ ತೆಗೆದುಕೊಂಡಾಗ ಜನರ ಜತೆ ಹೇಗೆ ಇರುತ್ತೇವೆ ಎನ್ನುವುದು, ಆನಂತರವೂ ಜನ ತೋರುವ ಪ್ರೀತಿ ಆತನ ನಾಯಕತ್ವ ಗುಣ ತೋರಿಸುತ್ತದೆ ಎಂದರು.

ಪಕ್ಷದ ಹಿರಿಯರಾದ ರಾಮು ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ ಮಾತನಾಡಿದರು. ಬಿಜೆಪಿ ಪ್ರಮುಖರಾದ ಚಂದ್ರಕಲಾ ಭಟ್ಟ, ಶಿವಲಿಂಗಯ್ಯ ಅಲ್ಲಯ್ಯನಮಠ, ಶ್ಯಾಮಿಲಿ ಪಾಟಣಕರ್ ವೇದಿಕೆಯಲ್ಲಿದ್ದರು. ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಡಾ. ರವಿ ಭಟ್ಟ ಬರಗದ್ದೆ ಸ್ವಾಗತಿಸಿದರು, ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ ಪ್ರಾಸ್ತಾವಿಕ ಮಾತನ್ನಾಡಿದರು. ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ ನಿರೂಪಿಸಿದರು, ರವಿ ಕೈಟ್ಕರ್ ವಂದಿಸಿದರು.