ಸಾರಾಂಶ
ನಕ್ಸಲೀಯರು ಲೆಕ್ಕ ಸಿಗದಷ್ಟು ಕೃತ್ಯ ಎಸಗಿದ್ದಾರೆ, ಡಿಸಿ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಬಳಿ ಶರಣಾಗಿರುವ ನಕ್ಸಲರ ಹಿಂದಿನ ಅಪರಾಧಗಳ ಕುರಿತು ಎನ್ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮೂಲಕ ಕೇಂದ್ರದ ಗೃಹ ಸಚಿವರಿಗೆ ಗುರುವಾರ ಮನವಿ ಸಲ್ಲಿಸಿದರು.ರಾಜ್ಯದಲ್ಲಿ ನಕ್ಸಲರ ಚಟುವಟಿಕೆಗಳಿಂದ ಅನೇಕ ಜೀವ ಹಾಗೂ ಆಸ್ತಿ ಹಾನಿ ನಡೆದಿದೆ. ಕರ್ನಾಟಕದಲ್ಲಿ ತಲೆಯೆತ್ತಿದ್ದ ನಕ್ಸಲರ ಚಟುವಟಿಕೆಗಳು ನೆರೆಯ ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೂ ವ್ಯಾಪಿಸಿತ್ತು. ನಕ್ಸಲರಿಂದಾಗಿ ಹಲವು ಕೃಷಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜನ ಭಯದ ವಾತಾವರಣದಲ್ಲಿಯೇ ಬದುಕುವಂತಾಗಿತ್ತು. ನಕ್ಸಲರ ಗುಂಡೇಟಿಗೆ ಪೊಲೀಸರು ಬಲಿಯಾಗಿದ್ದಾರೆ. ಹೀಗಾಗಿ ನಕ್ಸಲರ ಮೇಲಿರುವ ಅಪರಾಧಗಳ ಕುರಿತು ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಅಕ್ರಮ ಆಯುಧದೊಂದಿಗೆ ಕಾನೂನುಬಾಹಿರ ಹಾಗೂ ಸಂವಿಧಾನ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದ ನಕ್ಸಲರು ಲೆಕ್ಕಕ್ಕೆ ಸಿಗದಷ್ಟು ಕೃತ್ಯಗಳನ್ನು ನಡೆಸಿದ್ದಾರೆ. ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಮಾರಕವಾದ ನಕ್ಸಲರ ವಿರುದ್ಧ ಕ್ರಮ ಕೈ ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.ರಾಜ್ಯ ಸರ್ಕಾರ ನಕ್ಸಲರಿಗೆ ಕ್ಷಮಾಧಾನ ನೀಡಲು ಮುಂದಾಗಿದೆ. ರಾಜ್ಯದಲ್ಲಿ ಹಲವು ಕಾನೂನುಬಾಹಿರ ಅಪರಾಧ ಪ್ರಕರಣ ಗಳು ಸಾಕಷ್ಟು ನಡೆದಿವೆ. ಇಂಥ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕ್ಷಮಾದಾನ ನೀಡಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಬಳಿ ಶರಣಾಗತರಾದ ನಕ್ಸಲರ ಕೃತ್ಯಗಳ ಬಗ್ಗೆ ತನಿಖೆ ನಡೆಸಲು ಎನ್ಐಎ ಸಂಸ್ಥೆ ನೇಮಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಪ್ರಕರಣಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪುಷ್ಪರಾಜ್, ಸೋಮಶೇಖರ್, ನರೇಂದ್ರ, ಹಿರೇಮಗಳೂರು ಪುಟ್ಟಸ್ವಾಮಿ, ಸಂತೋಷ್ ಕೋಟ್ಯಾನ್, ಸಚಿನ್ ಗೌಡ, ಅಂಕಿತ, ಮಧುಕುಮಾರ್ ರಾಜ್ ಅರಸ್ ಹಾಗೂ ಕಾರ್ಯಕರ್ತರು ಇದ್ದರು. --- ಬಾಕ್ಸ್ ----ಬಿಜೆಪಿ ಯುವ ಮೋರ್ಚಾ ಆಕ್ರೋಶಶರಣಾಗಿರುವ ನಕ್ಸಲೀಯರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡಿರುವುದಕ್ಕೆ ಬಿಜೆಪಿ ಯುವ ಮೋರ್ಚಾ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದಕರನ್ನ ಬ್ರದರ್ಸ್ ಅಂದಾಯ್ತು, ಈಗ ನಕ್ಸಲರ ಸರದಿ, ಕೊಲೆ ಮಾಡೋರು, ಮಾಡ್ಸೋರ ಪರ ಇರೋ ಸರ್ಕಾರ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಆರೋಪಿಸಿದ್ದಾರೆ.ಬಿಜೆಪಿ ಯುವ ಮೋರ್ಚಾದ ಮುಖಂಡ ಶಶಿ ಆಲ್ದೂರ್ ಅವರು ಫೇಸ್ ಬುಕ್‌ನಲ್ಲಿ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಆಸಮಧಾನ ಹೊರ ಹಾಕಿದ್ದಾರೆ. ನಮ್ಮ ಮೇಲೂ ಕೇಸ್‌ಗಳಿವೆ. ಅದನ್ನು ವಾಪಸ್ ತೆಗೆಯಿರಿ, ನಮಗೂ ಲಕ್ಷ ಲಕ್ಷ ಹಣ, ಕೃಷಿ ಭೂಮಿ ಕೊಡಬೇಕೆಂದು ಆಗ್ರಹಿಸಿದ್ದಾರೆ.
--ನಕ್ಸಲ್ ಶರಣಾಗತಿ: ಸುನೀಲ್ ಹೇಳಿಕೆಗೆ ಕಾಂಗ್ರೆಸ್ ಖಂಡನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಕ್ಸಲ್ ಶರಣಾಗತಿ ವಿಚಾರದಲ್ಲಿ ಸರ್ಕಾರವೇ ಶರಣಾಗಿದೆ ಎಂದಿರುವ ಶಾಸಕ ವಿ. ಸುನೀಲ್ ಕುಮಾರ್ ಹೇಳಿಕೆಯನ್ನು ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ ಖಂಡಿಸಿದ್ದಾರೆ. ಅವರ ಹೇಳಿಕೆ ಇಬ್ಬಗೆ ನೀತಿ ತೋರುತ್ತದೆ. ಅವರಿಗೆ ವಿವೇಕದ ಕೊರತೆ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.ಕಳೆದ ತಿಂಗಳು ಛತ್ತೀಸ್‌ಗಡದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನಕ್ಸಲರನ್ನು ಮುಖ್ಯವಾಹಿನಿಗೆ ಕರೆ ತಂದಿರುವುದು ಸುನೀಲ್‌ಕುಮಾರ್ ಅವರಿಗೆ ನೆನಪಿಲ್ಲವೇ ಎಂದು ಪ್ರಶ್ನಿಸಿದರು.ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಸರ್ಕಾರದ ಜವಾಬ್ದಾರಿ ಕೆಲಸ. ಅಂತಹ ಕಾರ್ಯಕ್ಕೆ ಅವಕಾಶ ಮಾಡಿ ಕೊಟ್ಟಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಭಿನಂದಿಸುತ್ತೇವೆ. ನಕ್ಸಲರ ವಿಚಾರಗಳನ್ನು ಮುಂದು ಮಾಡಿ ರಾಜಕಾರಣ ಮಾಡುವ ಇಂತಹ ರಾಜಕೀಯ ನೈತಿಕತೆಯಿಲ್ಲದ ಸುನೀಲ್ ಕುಮಾರ್ ಹೇಳಿಕೆಯನ್ನು ಖಂಡಿಸುತ್ತೇವೆ. ದತ್ತ ಪೀಠದ ವಿಚಾರದಲ್ಲಿ ಕೆಟ್ಟ ರಾಜಕಾರಣ ಮಾಡಿದ್ದನ್ನು ಈ ಜಿಲ್ಲೆ ಯಾವತ್ತಿಗೂ ಮರೆಯುವುದಿಲ್ಲ. ಇವರಿಗೆ ನಕ್ಸಲರು ಇಂದು ರಾಜಕೀಯ ದಾಳದಂತೆ ಕಾಣುತ್ತಾರೆ ಎಂದು ದೂರಿದರು.
1972ರಲ್ಲಿ ಸಮಾಜವಾದಿ ಜಯಪ್ರಕಾಶ್ ನಾರಾಯಣ್ ಮಧ್ಯಪ್ರದೇಶದಲ್ಲಿ ಡಕಾಯಿತರ ಹಾವಳಿ ಹೆಚ್ಚಾದಾಗ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಜೊತೆಗೆ ಕೌಶಲ ತರಬೇತಿ ನೀಡಲು ಕರೆಕೊಟ್ಟಾಗ ಅಂದಿನ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಡಕಾಯಿತರನ್ನು ಶರಣಾಗತಿ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತಂದಿರುವ ಚರಿತ್ರೆ ಇದೆ ಎಂದರು.ಹಾಗಾಗಿ ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಜೊತೆಗೆ ಅವರಿಗೆ ಕೌಶಲ ತರಬೇತಿ ಹಾಗೂ ಈ ಸಮಾಜದಲ್ಲಿ ಬದುಕ ಬಹುದಾದ ಎಲ್ಲಾ ಅರ್ಹತೆಗಳನ್ನು ಎಲ್ಲಾ ಸರ್ಕಾರಗಳು ಒದಗಿಸುವುದು ಅವರ ಕರ್ತವ್ಯವಾಗಿರುತ್ತದೆ ಎಂದರು.ಸುನೀಲ್ ಕುಮಾರ್ ಹೇಳಿಕೆಯನ್ನು ಯಾವ ಬಿಜೆಪಿ ನಾಯಕರು ಖಂಡಿಸದೇ ಇರುವುದನ್ನು ನೋಡಿದರೆ ಇವರು ಸಂವಿಧಾನ ವಿರೋಧಿಗಳಂತೆ ಕಾಣುತ್ತಾರೆ. ಹಾಗಾಗಿ ಪ್ರದೇಶ ಕಾಂಗ್ರೆಸ್ ಇಂತಹ ಬಿಜೆಪಿ ಇಬ್ಬಂದಿ ನಡೆಯನ್ನು ಖಂಡಿಸುತ್ತದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ವಿಜಯ್ ಕುಮಾರ್, ಸಿಡಿಎ ಸದಸ್ಯ ಪ್ರದೀಪ್, ಸಂತೋಷ್ ಲಕ್ಯಾ ಉಪಸ್ಥಿತರಿದ್ದರು.
9 ಕೆಸಿಕೆಎಂ 5ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯದಲ್ಲಿ ಮುಖ್ಯಮಂತ್ರಿ ಬಳಿ ಶರಣಾಗಿರುವ ನಕ್ಸಲರ ಹಿಂದಿನ ಅಪರಾಧಗಳ ಕುರಿತು ಎನ್ಐಎ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.