ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಡಾ. ಅಂಬೇಡ್ಕರ್ ಜಯಂತ್ಯುತ್ಸವ

| Published : Apr 15 2024, 01:24 AM IST

ಸಾರಾಂಶ

ಡಾ. ಬಿ. ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಭಾರತೀಯ ಜನತಾ ಪಕ್ಷದ ಯಾದಗಿರಿ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಡಾ. ಬಿ. ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಭಾರತೀಯ ಜನತಾ ಪಕ್ಷದ ಯಾದಗಿರಿ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಡಾ. ಬಿ. ಅರ್. ಅಂಬೇಡ್ಕರ್ ಅವರ ಮುಂದಾಲೋಚನೆಯ ಸಂವಿಧಾನ ರಚನೆಯಿಂದಾಗಿ ಇಂದು ದೇಶದ ಒಬ್ಬ ಸಾಮಾನ್ಯ ಪ್ರಜೆಯೂ ಕೂಡ ದೇಶದ ಪ್ರಧಾನಿ,ರಾಷ್ಟ್ರಪತಿ ಮುಂತಾದ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಡಾ. ಬಿ. ಆರ್‌. ಅಂಬೇಡ್ಕರ್ ಅವರ ವಿಚಾರಗಳಿಗೆ ಅಪಾರ ಗೌರವ ನೀಡಿದೆ ಎಂದು ತಿಳಿಸಿದರು.

ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ದೇವಿಂದ್ರನಾಥ ನಾದ, ಖಂಡಪ್ಪ ದಾಸನ, ವೆಂಕಟರಡ್ಡಿ ಅಬ್ಬೆತುಮಕೂರು, ಶರಣುಗೌಡ ಬಾಡಿಯಾಳ, ಹೆಚ್. ಕೆ. ಕುರಕುಂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಿ, ಬಸವರಾಜ ವಿಭೂತಹಳ್ಳಿ, ಲಿಂಗಪ್ಪ ಹತ್ತಿಮನಿ, ರಾಜಶೇಖರ ಕಾಡಂನೋರ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಮಲ್ಲಿಕಾರ್ಜುನ ಕಟ್ಟಿಮನಿ, ಗೋಪಾಲ ದಾಸನಕೇರ, ಮಂಜುನಾಥ ಜೋಡಿ, ವೀಣಾ ಮೋದಿ, ಶಕುಂತಲಾ, ಸುನಿತಾ ಚೌವಾಣ್, ಚಂದ್ರಕಲಾ ಮಸಿಮಠ, ಭೀಮಬಾಯಿ ಶಂಡಿಗಿ, ಶರಣುಗೌಡ ಅಲಿಪುರ, ಸಿ. ಮಲ್ಲು ಕೋಲಿವಾಡ, ಶಿವರಾಜ್ ದಾಸನಕೇರಿ, ಹಣಮಂತ ವಲ್ಯಪುರ, ಶ್ರೀಧರ್ ರಾಯಚೂರು, ಮಹೇಶ ನಕ್ಕಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.