ಸಾರಾಂಶ
ಯಾವುದೇ ಭ್ರಷ್ಟಾಚಾರ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಸಹಾಯಧನ ತಲುಪಿಸಿದೆ
ಡಂಬಳ: ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 10 ವರ್ಷದ ಆಡಳಿತದಲ್ಲಿ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ,ಯುವಕರಿಗೆ ಉದ್ಯೋಗ ಕೊಡುವಲ್ಲಿ ವಿಫಲ, ರೈತರ ಸಾಲ ಮನ್ನಾ ಮಾಡದೆ ಇರುವುದು ಬಿಜೆಪಿ ದೊಡ್ಡ ಸಾಧನೆಯಾಗಿದೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಡಂಬಳ ಹೋಬಳಿ ರೋಣ ಮತಕ್ಷೇತ್ರದ ಅತ್ತಿಕಟ್ಟಿ, ದಿಂಡೂರ, ಡೋಣಿ ತಾಂಡಾ, ಶಿಂಗಟರಾಯನಕೇರಿ ತಾಂಡಾ ಗ್ರಾಮದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಮತಯಾಚನೆ ಮಾಡಿ ಮತ್ತು ಬಿಜೆಪಿ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಲಕ್ಷಾಂತರ ಬಡ ಕುಟುಂಬಗಳು ಆರ್ಥಿಕ ಮುಖ್ಯ ಪ್ರವಾಹಿನಿಗೆ ಬಂದು ನಿಲ್ಲುವಂತೆ ಮಾಡಿವೆ. ಯಾವುದೇ ಭ್ರಷ್ಟಾಚಾರ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಸಹಾಯಧನ ತಲುಪಿಸಿದೆ. ದೇಶದಲ್ಲಿ ಮೋದಿ ವಿರೋಧಿ ಅಲೆ ಇದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಪ್ರತಿ ಬಡಕುಟುಂಬದ ಮಹಿಳೆಗೆ ವರ್ಷಕ್ಕೆ ಲಕ್ಷ, ಕೇಂದ್ರ ಸರ್ಕಾರದ ಹೊಸ ನೇಮಕಾತಿಗಳಲ್ಲಿ ಅರ್ಧ ಮಹಿಳೆಯರಿಗೆ ಮೀಸಲು, ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ,ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವುದು ಸೇರಿದಂತೆ ಹಲವು ಜನಪರ ಯೋಜನೆ ಜಾರಿಗೆ ತರುತ್ತೇವೆ ಎಂದರು.ಕೋಮವಾದಿ ಜಾತಿವಾದಿ ಬಿಜೆಪಿ ಪಕ್ಷ ಸಂವಿಧಾನ ವಿರೋಧಿ ಆಗಿದ್ದು, ದೇಶದ ಹಿತದೃಷ್ಠಿಯಿಂದ ಪ್ರತಿಯೊಬ್ಬರು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಕಾಂಗ್ರೆಸ್ ಪಕ್ಷದ ಗುರುತಿಗೆ ಮತ ಹಾಕಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ವಿ.ಬಿ. ಸೋಮನಕಟ್ಟಿಮಠ, ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ, ವಿ.ಎಸ್. ಯರಾಶಿ, ಶಂಕ್ರಪ್ಪ ಲಮಾಣಿ, ಶಾಂತಮ್ಮ ಕಾರಭಾರಿ, ಬಸವರಡ್ಡಿ ಬಂಡಿಹಾಳ, ಶರಣು ಬಂಡಿಹಾಳ, ಬಾಬುಸಾಬ ಮೂಲಿಮನಿ, ಮರಿಯಪ್ಪ ಸಿದ್ದಣ್ಣವರ, ಜಾಕೀರ ಮೂಲಿಮನಿ, ರಮೇಶ ಪವಾರ, ಜಂತ್ರೆಮ್ಮ ನಾಯಕ, ಮುದಿಯಪ್ಪ ಗದಗಿನ, ಶಿವಾನಂದ ಚಾಕಲಬ್ಬಿ, ರಾಮಣ್ಣ ಮೇಗಳಮನಿ, ರಮೇಶ ಪವಾರ, ಕುಬೇರ ನಾಯಕ, ಗೋಪಾಲ ಚವ್ಹಾಣ, ಅಜ್ಜಪ್ಪ ರಾಠೋಡ, ಮಹಾಂತೇಶ ಚವ್ಹಾಣ, ಶೇಖರ ಪವಾರ, ಬಸವರಾಜ ಪೂಜಾರ, ಸುರೇಶ ಗಡಗಿ, ಮುತ್ತಣ್ಣ ಕೊಂತಿಕಲ್, ಮಲ್ಲಿಕಾರ್ಜುನ ಪ್ಯಾಟಿ, ವಿ.ಎಂ.ಪಾಟೀಲ, ಅನಿಲ ಪಲ್ಲೇದ ಸೇರಿದಂತೆ ಪಕ್ಷದ ಮುಖಂಡರು, ಮಹಿಳೆಯರು, ಕಾರ್ಯಕರ್ತರು ಇದ್ದರು.