ಸಾರಾಂಶ
ದಾವಣಗೆರೆ : ಬಿಜೆಪಿ ಜಗತ್ತಿನ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ದೇಶಾದ್ಯಂತ ಈಗ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಪ್ರಜಾಪ್ರಭುತ್ವದ ಮಾದರಿಯಲ್ಲಿ ಕೆಲಸ ಮಾಡುವ ಅಪರೂಪದ ಕ್ಷಣ ಇದಾಗಿದೆ ಎಂದು ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಹೇಳಿದರು.
ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಳೇ ಭಾಗದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಕೇವಲ 8 ದಿನದಲ್ಲಿ 2 ಕೋಟಿಗೂ ಅಧಿಕ ಸದಸ್ಯತ್ವ ಮಾಡಿಕೊಳ್ಳುವ ಮೂಲಕ ಪಕ್ಷವು ಹೊಸ ದಾಖಲೆ ಸ್ಥಾಪಿಸಿದೆ ಎಂದರು.
ಸದಸ್ಯತ್ವ ಹೆಚ್ಚಾಗಬೇಕು:
ಮಹಾ ಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳ ಪ್ರಮುಖರು ಇನ್ನಷ್ಟು ಚುರುಕಾಗಬೇಕು. ಬೂತ್ ಅಧ್ಯಕ್ಷರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ದೂರವಾಣಿ: 8800002024 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಬಿಜೆಪಿ ಸದಸ್ಯತ್ವ ಪಡೆಯಬಹುದು. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪಕ್ಷದ ಸದಸ್ಯರಾಗಲು ಅರ್ಹತೆ ಹೊಂದಿದ್ದೀರಿಂದ ಲಿಂಗ, ಜಾತಿ, ಧರ್ಮ ಯಾವುದೇ ಬೇಧವಿಲ್ಲದೇ ಪ್ರತಿಯೊಬ್ಬರನ್ನು ಪಕ್ಷದ ಸದಸ್ಯರನ್ನಾಗಿಸಲು ಮುಂದಾಗಬೇಕು ಎಂದ ಅವರು, ಭಾರತವನ್ನು ವಿಶ್ವಗುರುವಾಗಿಸಲು ಶ್ರಮಿಸುತ್ತಿರುವ ಪ್ರಧಾನಿ ಕೈಬಲಪಡಿಸಬೇಕಿದೆ. ಈ ದಿಶೆಯಲ್ಲಿ ಕಾರ್ಯಕರ್ತರು ತಮ್ಮದೇ ರೀತಿ ಕೊಡುಗೆ ನೀಡಬೇಕು ಎಂದು ಹೇಳಿದರು.
ಬಿಜೆಪಿ ಹಿರಿಯ ಮುಖಂಡರಾದ ರಾಜನಹಳ್ಳಿ ಶಿವಕುಮಾರ, ವೈ.ಮಲ್ಲೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್, ಮಾಜಿ ಉಪ ಮೇಯರ್ ಗಾಯತ್ರಿ ಖಂಡೋಜಿರಾವ್, ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ, ಹರೀಶ್ ಹೊನ್ನೂರು, ಆರ್.ರವಿಕುಮಾರ, ಟಿಂಕರ್ ಮಂಜಣ್ಣ, ದೇವಣ್ಣ, ಎಚ್.ಎನ್. ಜಗದೀಶ, ಯರಗುಂಟೆ ನಾಗಪ್ಪ, ಕಿಶೋರಕುಮಾರ, ಸಂತೋಷ ಕೋಟಿ, ಮಹಾರುದ್ರಪ್ಪ, ಅಜಯ್, ಶಿವನಗೌಡ ಪಾಟೀಲ್, ಬೂತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.
ಟಾಪ್ ಕೋಟ್‌ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹುರುಪಿನಿಂದ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಪ್ರತಿ ಬೂತ್‍ನಿಂದ ಕನಿಷ್ಠ 300 ಸದಸ್ಯರಾದರೂ ಸೇರ್ಪಡೆ ಆಗಬೇಕು. ಬಿಜೆಪಿ ಸದಸ್ಯತ್ವ ಅಭಿಯಾನದಿಂದ ದಾವಣಗೆರೆ ದಕ್ಷಿಣ ಕ್ಷೇತ್ರ ರಾಜ್ಯ ಮಟ್ಟದಲ್ಲಿ ಗುರುತಿಸುವ ರೀತಿ ಕೆಲಸ ಮಾಡಬೇಕು
- ಯಶವಂತ ರಾವ್ ಜಾಧವ್, ಬಿಜೆಪಿ ಮುಖಂಡ