ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿಷ್ಠೆಯ ಕಣವಾಗಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ರಂಗೇರಿದೆ. ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರ ಹುಟ್ಟೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಮಿಂಚಿನ ಸಂಚಾರದ ಮೂಲಕ ಮತಬೇಟೆ ನಡೆಸಿದರು.ಹುಣಸೂರಿನಲ್ಲಿರುವ ಮಾಜಿ ಸಿಎಂ ಡಿ. ದೇವರಾಜ ಅರಸು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಯದುವೀರ್ ಹಾಗೂ ಶಾಸಕ ಜಿ.ಡಿ. ಹರೀಶ್ ಗೌಡ, ನಂತರ ಅರಸು ಕಲ್ಲಹಳ್ಳಿ ಗ್ರಾಮಕ್ಕೆ ತೆರಳಿ, ಡಿ. ದೇವರಾಜ ಅರಸು ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಸಾಮಾಜಿಕ ನ್ಯಾಯದ ಹರಿಕಾರನಿಗೆ ಗೌರವ ಸಲ್ಲಿಸಿದರು.
ಇದೇ ವೇಳೆ ಕಲ್ಲಹಳ್ಳಿ ಗ್ರಾಮದಲ್ಲಿರುವ ಡಿ. ದೇವರಾಜ ಅರಸು ಅವರು ವಾಸವಿದ್ದ ಮನೆಗೆ ಭೇಟಿ ನೀಡುವ ಮೂಲಕ ಗಮನ ಸೆಳೆದ ಯದುವೀರ್, ಕ್ಷೇತ್ರದ ಹಲವೆಡೆ ತೆರಳಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದರು. ಜನ ನನ್ನನ್ನು ಸ್ವೀಕರಿಸಿದ್ದಾರೆಡಿ. ದೇವರಾಜ ಅರಸು ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಯದುವೀರ್, ಜನರು ನನ್ನ ರಾಜಕೀಯ ಅವತಾರವನ್ನು ಸ್ವೀಕಾರ ಮಾಡಿದ್ದಾರೆ. ರಾಜಪ್ರಭುತ್ವ ಹಾಗೂ ಪ್ರಜಾಪ್ರಭುತ್ವ ಬೇರೆ ಬೇರೆಯಾಗಿದ್ದು, ನಾನು ಅಭ್ಯರ್ಥಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ. ನನಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಾನು ಚುನಾವಣೆಗೋಸ್ಕರ ದೇವರಾಜ ಅರಸು ಅವರ ಸಮಾಧಿಗೆ ಪೂಜೆ ಮಾಡುವ ಗಿಮಿಕ್ ಮಾಡುತ್ತಿಲ್ಲ, ಚುನಾವಣೆಗಾಗಿ ತಂತ್ರಗಾರಿಕೆ ಮಾಡುತ್ತಿಲ್ಲ. ದೇವರಾಜ ಅರಸು ಅವರು ಒಳ್ಳೆಯ ಕೆಲಸ ಮಾಡಿರುವ ಕಾರಣ ನಾವು ಗೌರವಿಸುತ್ತಿದ್ದೇವೆ. ದೇವರಾಜ ಅರಸು ಅವರು ನಮ್ಮ ಸಮುದಾಯ, ಸಂಬಂಧಿಕರೂ ಆಗಿದ್ದಾರೆ. ನಮಗೆ ಎಲ್ಲರೂ ಬೆಂಬಲ ನೀಡುವ ವಿಶ್ವಾಸವಿದ್ದು, ಗೆಲ್ಲುವ ಭರವಸೆ ಹೆಚ್ಚಿದೆ. ಹೆಚ್ಚಿನ ಲೀಡ್ನಲ್ಲಿ ಗೆಲ್ಲುವ ನಂಬಿಕೆ ಇದೆ ಎಂದರು.
25 ಸಾವಿರ ಲೀಡ್ ಕೊಡಬೇಕುಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಹುಣಸೂರು ಕ್ಷೇತ್ರದಲ್ಲೇ 25 ಸಾವಿರ ಲೀಡ್ ಕೊಡಬೇಕು. ಆ ನಿಟ್ಟಿನಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ಮೈಸೂರು ಅರಸರು ಕೃಷಿ ಭೂಮಿಗೆ ನೀರಾವರಿ ಒದಗಿಸಿದ್ದು, ಅಂತಹ ಕುಟುಂಬಕ್ಕೆ ಮತ ಹಾಕುವುದು ನಮ್ಮ ಪುಣ್ಯ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ನಾರಾಯಣ, ನಿಕಟಪೂರ್ವ ಅಧ್ಯಕ್ಷ ನಾಗಣ್ಣಗೌಡ, ಜೆಡಿಎಸ್ ಅಧ್ಯಕ್ಷ ದೇವರಾಜ ಒಡೆಯರ್, ಮುಖಂಡರಾದ ಹೇಮಂತ್ಕುಮಾರ್ಗೌಡ, ನಾಗರಾಜ ಮಲ್ಲಾಡಿ, ಆಸ್ವಾಳ್ ಕೆಂಪೇಗೌಡ, ಹರವೆ ಶ್ರೀಧರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ವಸಂತ್ಕುಮಾರ್ಇದ್ದರು.ಅದ್ದೂರಿ ಬೈಕ್ ರ್ಯಾಲಿ
ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಪಟ್ಟಣಕ್ಕೆ ಆಗಮಿಸಿದ ಯದುವೀರ್ಅವರಿಗೆ ಸ್ಥಳೀಯರಿಂದ ಅದ್ದೂರಿ ಸ್ವಾಗತ ನೀಡಲಾಯಿತು. ಡಿ. ದೇವರಾಜ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ, ಅರಸು ಕಲ್ಲಹಳ್ಳಿ ಗ್ರಾಮಕ್ಕೆ ತೆರಳಿದ ಅಭ್ಯರ್ಥಿ ಯದುವೀರ್, ಶಾಸಕ ಜಿ.ಡಿ. ಹರೀಶ್ಗೌಡ ಅವರ ಪರವಾಗಿ ಸ್ಥಳೀಯ ಜೆಡಿಎಸ್ಹಾಗೂ ಬಿಜೆಪಿ ಕಾರ್ಯಕರ್ತರು, ಘೋಷಣೆಗಳನ್ನು ಕೂಗುತ್ತಾ ಬೈಕ್ರ್ಯಾಲಿ ನಡೆಸಿದರು.ದೇವರಾಜ ಅರಸರ ಮೊಮ್ಮಗನ ಬಲ
ಹುಣಸೂರು ತಾಲೂಕು ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಯದುವೀರ್ಒಡೆಯರ್ಅವರಿಗೆ ಮಾಜಿ ಸಿಎಂ ದೇವರಾಜ ಅರಸು ಅವರ ಮೊಮ್ಮಗ ಮಂಜುನಾಥ್ಅರಸ್ಬೆಂಬಲ ನೀಡಿದರು. ಪಟ್ಟಣದಲ್ಲಿ ದೇವರಾಜ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ಯದುವೀರ್ಅವರ ಜತೆ ಕಾಣಿಸಿಕೊಂಡ ಮಾಜಿ ಸಂಸದೆ ದಿ. ಚಂದ್ರಪ್ರಭಾ ಅರಸು ಅವರ ಪುತ್ರ ಮಂಜುನಾಥ್ ಅರಸು, ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆ ಆಗಿಲ್ಲ. ಮಹಾರಾಜರ ಕುಟುಂಬದ ಮೇಲೆ ಅಪಾರ ಗೌರವವಿದ್ದು, ಆ ಕಾರಣಕ್ಕೆ ಯದುವೀರ್ ಅವರಿಗೆ ಬೆಂಬಲ ಸೂಚಿಸುತ್ತಿದ್ದೇನೆ. ಕಾಲ ಪಕ್ವವಾದ ಬಳಿಕ ನಾನು ಬಿಜೆಪಿ ಸೇರುತ್ತೇನೆ. ಬಿಜೆಪಿ ಬಾವುಟ ಹಾಕಿದ್ದೇನೆ. ಮುಂದೆ ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ. ನನಗೆ ಮೋದಿ ಅವರ ಸಿದ್ಧಾಂತ ಇಷ್ಟವಾಗಿದೆ. ಪ್ರಪಂಚದಲ್ಲೇ ಭಾರತವನ್ನು ಗುರುತಿಸುವಂತೆ ಮಾಡಿದ್ದಾರೆ. ಹಲವು ಯೋಜನೆಗಳು ನನಗೆ ಇಷ್ಟವಾಗಿವೆ. ದೇವರಾಜ ಅರಸು ಅವರನ್ನು ಕೊನೇಗಾಲದಲ್ಲಿ ಕೆಟ್ಟದಾಗಿ ನಡೆಸಿಕೊಂಡರು. ನಮ್ಮ ಕುಟುಂಬಕ್ಕೆ ಕಾಂಗ್ರೆಸ್ ನವರು ಏನು ಮಾಡಿದ್ದಾರೆ? ಪೋಸ್ಟರ್ ನಲ್ಲಿ ಅವರ ಹೆಸರು ಬೇಕು, ಕಾರ್ಯಕ್ರಮಗಳಲ್ಲಿ ಅವರ ಫೋಟೋ ಬಳಸಿಕೊಳ್ಳಬೇಕು. ಅಷ್ಟೇ ಅವರ ಉದ್ದೇಶ ಎಂದು ವಾಗ್ದಾಳಿ ನಡೆಸಿದರು.