ಸಾರಾಂಶ
ನಗರದಲ್ಲಿ ಶುಕ್ರವಾರ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ನಂತರ ನಡೆದ ಬಹಿರಂಗ ಸಭೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ರೈಲ್ವೆ ಇಲಾಖೆ ಕಾಮಗಾರಿಗಳ ಕುರಿತು ತಮ್ಮ ಶ್ರಮವನ್ನು ವಿವರಿಸುವಾಗ ಕೊಂಚಕಾಲ ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ನಡೆಯಿತು.
ಸಿಂಧನೂರು: ನಗರದಲ್ಲಿ ಶುಕ್ರವಾರ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ನಂತರ ನಡೆದ ಬಹಿರಂಗ ಸಭೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ರೈಲ್ವೆ ಇಲಾಖೆ ಕಾಮಗಾರಿಗಳ ಕುರಿತು ತಮ್ಮ ಶ್ರಮವನ್ನು ವಿವರಿಸುವಾಗ ಕೊಂಚಕಾಲ ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ನಡೆಯಿತು.
ದುಃಖ ಉಮ್ಮಳಿಸುತ್ತಿದ್ದಂತೆ ತಮ್ಮ ಕರವಸ್ತ್ರದಿಂದ ಕಣ್ಣೀರು ವರೆಸಿಕೊಳ್ಳುತ್ತಾ ಮಾತನಾಡಲು ಪ್ರಯತ್ನಿಸುತ್ತಿದ್ದಾಗ ಕಣ್ಣಿರು ಹಾಕಿದ ಘಟನೆ ನಡೆಯಿತು.ಬಿಜೆಪಿ ಹೈಕಮಾಂಡ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಅನುಮೋದಿಸದೆ ಕೊಪ್ಪಳದ ವೈದ್ಯ ಡಾ.ಕೆ.ಬಸವರಾಜ ಅವರ ಹೆಸರನ್ನು ಫೈನಲ್ ಮಾಡಿದೆ. ಟಿಕೆಟ್ ಕೆಲವು ಬಾರಿ ನಿರೀಕ್ಷಿಸಿದಂತೆ ಸಿಗುವುದಿಲ್ಲ. ಇವು ಎಲ್ಲಾ ಪಕ್ಷಗಳಲ್ಲೂ ನಡೆಯುತ್ತವೆ. ಯಾವ ಕಾರಣಕ್ಕೆ ಹಾಗೂ ಯಾವ ಮಾನದಂಡದ ಮೇಲೆ ಟಿಕೇಟ್ ಕಟ್ ಆಗಿದೆಯೋ ಗೊತ್ತಿಲ್ಲ. ಆದರೆ ಸೌಜನ್ಯಕ್ಕಾದರೂ ಬಿಜೆಪಿ ಮುಖಂಡರು ಫೋನ್ ಮಾಡಿ ಮಾತನಾಡಿಸಿಲ್ಲ ಎಂದು ಸಂಗಣ್ಣ ನೋವನ್ನು ಹೊರಹಾಕಿದರು.
ಕಾಂಗ್ರೆಸ್ ಪಕ್ಷದ ನಾಯಕರು ಬಹಳ ಜನ ಫೋನ್ ಮಾಡಿ ಟಿಕೇಟ್ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿ ಸೌಜನ್ಯದ ಮಾತುಗಳನ್ನಾಡಿದ್ದಾರೆ. ಸೀನಿಯರ್ ಇದ್ದ ನಿಮಗೆ ಟಿಕೆಟ್ ಕಟ್ ಆಗಿರುವ ಬಗ್ಗೆ ಬೇಸರವಾಗಿದೆ ಎಂದು ಸಾಂತ್ವನ ಹೇಳಿದ್ದಾರೆ. ಅವರಿಗೆಲ್ಲ ನನ್ನ ಬ್ಯಾಡ್ಲಕ್ ಟಿಕೆಟ್ ಸಿಕ್ಕಿಲ್ಲ ಎಂದು ಉತ್ತರಿಸಿದ್ದೇನೆ ಎಂದು ಸಂಗಣ್ಣ ಕರಡಿ ಮನದಾಳದ ಮಾತುಗಳನ್ನು ಹಂಚಿಕೊಂಡರು.ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ. ಕಾಂಗ್ರೆಸ್ ಮುಖಂಡರ ಸಾಂತ್ವನದ ಮಾತುಗಳಿಗೆ ಋಣಿಯಾಗಿದ್ದೇನೆ. ಬಿಜೆಪಿಯಲ್ಲಿ ಈಗಲೂ ಇದ್ದೇನೆ. ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುತ್ತೇನೆ ಎಂದು ಹೇಳಿದರು.