ಸಾರಾಂಶ
ಸಂಸದ ಸಂಗಣ್ಣ ಕರಡಿ ಹೇಳಿಕೆ । ವಿಕಸಿತ ಭಾರತ ಸಂಕಲ್ಪ ಪತ್ರ ಅಭಿಯಾನದ ವಾಹನಗಳಿಗೆ ಚಾಲನೆ
ಕನ್ನಡಪ್ರಭ ವಾರ್ತೆ ಕೊಪ್ಪಳಸಾಮಾನ್ಯ ಪ್ರಜೆಯ ಅವಶ್ಯಕ ಯೋಜನೆಗಳನ್ನು ಆಧರಿಸಿ ಬಿಜೆಪಿ ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ವಿಕಸಿತ ಭಾರತ ಎಲ್.ಇ.ಡಿ ಪ್ರಚಾರ ವಾಹನಗಳ ಉದ್ಘಾಟನೆ ಹಾಗೂ ವಿಕಸಿತ ಭಾರತ ಸಂಕಲ್ಪ ಪತ್ರ ಅಭಿಯಾನದ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.ಸಾಮಾನ್ಯ ಪ್ರಜೆಯ ಭಾವನೆಗಳನ್ನು ಆಧರಿಸಿ ರೂಪಿಸುವುದು ಬಿಜೆಪಿ ಪ್ರಣಾಳಿಕೆ ಆಗಬೇಕು. ಅದು ದೇಶದ ಅಭಿವೃದ್ಧಿಯ ದಿಕ್ಕೂಚಿ ಆಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕಾಳಜಿ. ವಿಕಸಿತ ಭಾರತಕ್ಕಾಗಿ ಬಿಜೆಪಿ ಸಂಕಲ್ಪ ಪತ್ರ ಅಭಿಯಾನವನ್ನು ಆರಂಭಿಸಿದ್ದು ಅತ್ಯಂತ ಸರಳವಾಗಿ ಮಿಸ್ ಕಾಲ್ ಕೊಡುವ ಮೂಲಕ ಹಾಗೂ ವಾಯ್ಸ್ ರೆಕಾರ್ಡ್ ಮೂಲಕವೂ ಈ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ಭಾರತ ವಿಶ್ವಗುರು ಆಗುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವೇ ಕಾರಣ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಯೋಜನೆಯನ್ನು ಫಲಾನುಭವಿಗಳ ಮನೆಗೆ ತಲುಪಿಸಿದ್ದಾರೆ. ಆವರ ಆಡಳಿತದಿಂದ ಅಭಿವೃದ್ಧಿ ಕಾರ್ಯಗಳು ವೇಗ ಪಡೆದಿವೆ. ಅವರಿಂದ ಭಾರತ ರಾಷ್ಟ್ರಾಭಿವೃದ್ಧಿ ಆಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಮಾತನಾಡಿ, 9090902024 ಗೆ ಮಿಸ್ ಕಾಲ್ ಕೊಡುವ ನಂತರ ಬರುವ ಲಿಂಕ್ ಅನ್ನು ಬಳಸಿ, ನಮೋ ಆ್ಯಪ್ ಮೂಲಕ ಅಥವಾ ವಿಕಸಿತ ಭಾರತದ ಯಾತ್ರೆಯ ರಥ ತೆರಳುವ ಸ್ಥಳಗಳಲ್ಲಿ ಇರಿಸಲಾಗುವ ಪೆಟ್ಟಿಗೆಗಳಲ್ಲಿ ವಿವಿಧ ವರ್ಗಗಳ ಜನರು ತಮ್ಮ ಅಭಿಪ್ರಾಯಗಳನ್ನು ಬರೆದು ಸಲ್ಲಿಸಬಹುದು ಎಂದರು.ಬಿಜೆಪಿ ಮುಖಂಡೆ ಮಂಜುಳಾ ಅಂಬರೀಶ್ ಕರಡಿ, ಪ್ರಮುಖರಾದ ಚಂದ್ರಶೇಖರ ಹಲಗೇರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಹೆಸರೂರು, ಜಿಲ್ಲಾ ಉಪಾಧ್ಯಕ್ಷೆ ವೀಣಾ ಬನ್ನಿಗೋಳ, ಗ್ರಾಮೀಣ ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ್, ನಗರ ಮಂಡಲ ಅಧ್ಯಕ್ಷ ರಮೇಶ ಕವಲೂರು, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೀರ್ತಿ ಪಾಟೀಲ್, ಗೀತಾ ಪಾಟೀಲ್, ಮಂಡಲದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇತರರಿದ್ದರು.