ಸಾರಾಂಶ
BJP membership campaign for a strong party: Anapura
-ಬಿಜೆಪಿ ಮಂಡಲ ಕಾರ್ಯಾಗಾರದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಲಲಿತಾ ಅನಪೂರ
-------ಕನ್ನಡಪ್ರಭ ವಾರ್ತೆ ಗುರುಮಠಕಲ್
ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬಲಿಷ್ಠಗೊಳಿಸಬೇಕಾದರೆ ಪಕ್ಷಕ್ಕೆ ಹೆಚ್ಚಿನ ಮತದಾರರನ್ನು ಕರೆತರುವ ಕೆಲಸ ಕಾರ್ಯಕರ್ತರು ಮಾಡುವುದರ ಜೊತೆಗೆ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನಿಸಬೇಕು. ಪಕ್ಷದ ಕಾರ್ಯಕರ್ತರೇ ಪಕ್ಷದ ಜೀವಾಳ ಎಂದು ರಾಜ್ಯ ಕಾರ್ಯದರ್ಶಿ ಲಲಿತಾ ಅನಪೂರ ಹೇಳಿದರು.ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ-2024ರ ಕಾರ್ಯಕ್ರಮ ಹಿನ್ನೆಲೆ ಬಿಜೆಪಿ ಮಂಡಲ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿ, ಕಳೆದ ಸಲ ಗುರುಮಠಕಲ್ ಮತ ಕ್ಷೇತ್ರವು ಬಿಜೆಪಿ ಸದಸ್ಯತ್ವದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದು, ಪ್ರಸ್ತುತವು ಸಹ ನಮ್ಮ ಕ್ಷೇತ್ರವೇ ಮುಂಚೂಣಿಯಲ್ಲಿರಬೇಕು ಎಂದರು.
ಕಳೆದ ದಶಕಗಳಿಂದ ಗುರುಮಠಕಲ್ ಮತಕ್ಷೇತ್ರವು ಬಿಜೆಪಿ ಪಕ್ಷವು ಲೋಕಸಭೆಗೆ ಹೆಚ್ಚಿನ ಮತದಾನ ನೀಡುತ್ತಾ ಬಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಮಗೆ ಸಹಾಯ ಮಾಡಿರುವ ಎಲ್ಲರನ್ನೂ ಗುರುತಿಸಿ, ಬಿಜೆಪಿ ಸದಸ್ಯತ್ವ ಮಾಡಲು ಅವರ ಮನವೊಲಿಸಬೇಕು. ಕ್ಷೇತ್ರದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ತಮಗೆ ನೀಡಿದ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಮಾಡಿದರೆ ಪಕ್ಷದ ಲಾಭದ ಜೊತೆಗೆ ಮುಂದೆ ಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಮತ್ತು ಪುರಸಭೆಯಲ್ಲಿ ಪಕ್ಷದ ಹಿಡಿತ ಸಧೃಡವಾಗುತ್ತದೆ ಎಂದರು.ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಿಸಬೇಕು. ದೇಶದ ಪ್ರಧಾನ ಮಂತ್ರಿ ಹುಟ್ಟುಹಬ್ಬಕ್ಕೆ ಜಿಲ್ಲೆಯಿಂದ ಅತಿ ಹೆಚ್ಚು ಸದಸ್ಯತ್ವ ನೊಂದಾಯಿಸಿ ಅವರಿಗೆ ಶುಭ ಕೋರಬೇಕಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಪಣ್ಣ ಗುಳಗಿ, ಗುರು ಕಾಮಾ, ಪರುಶರಾಮ್ ಕುರುಕುಂದಿ, ಜಿಲ್ಲಾ ಉಪಾಧ್ಯಕ್ಷ ಕೆ. ದೇವದಾಸ್, ಮಂಡಲ ಅಧ್ಯಕ್ಷ ನರಸಿಂಹಲು ನಿರೇಟಿ, ಮಂಡಲ ಕಾರ್ಯದರ್ಶಿ ವಿನಾಯಕರಾವ್ ಜನಾರ್ಧನ, ಲಕ್ಷ್ಮಣ ಹೊಬಲಪೂರ, ರಾಜೇಂದ್ರ ಕಲಾಲ್, ಪ್ರವೀಣ ಜೋಶಿ, ಜಗದೀಶ ಮೆಂಜಿ, ಮಾಜಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಹೊನಗೇರಾ, ಚಂದುಲಾಲ್ ಚೌದ್ರಿ, ಭಾಸ್ಕರ್ ರೆಡ್ಡಿ, ಭೀಮಣ್ಣ ಮಡಿವಾಳ, ಜಲಪ್ಪ ಚಿಂತನಹಳ್ಳಿ ಇತರರಿದ್ದರು.----
30ವೈಡಿಆರ್4: ಗುರುಮಠಕಲ್ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ-2024ರ ಕಾರ್ಯಕ್ರಮ ಹಿನ್ನೆಲೆ ನಡೆದ ಬಿಜೆಪಿ ಮಂಡಲ ಕಾರ್ಯಾಗಾರದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಲಲಿತಾ ಅನಪೂರ ಮಾತನಾಡಿದರು.