245 ಬೂತ್‌ಗಳಲ್ಲೂ ಬಿಜೆಪಿ ನೋಂದಣಿ ಕಾರ್ಯ ಯಶಸ್ವಿ

| Published : Jan 16 2025, 12:45 AM IST

245 ಬೂತ್‌ಗಳಲ್ಲೂ ಬಿಜೆಪಿ ನೋಂದಣಿ ಕಾರ್ಯ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಜಿಲ್ಲೆಯಲ್ಲಿ ಹೊನ್ನಾಳಿ ತಾಲೂಕು ಮಂಡಲ ಸಂಘಟನಾ ಪರ್ವದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಇದಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಮುಖಂಡರು, ಕಾರ್ಯಕರ್ತರ ಶ್ರಮ ಕಾರಣವಾಗಿರುವುದು ಶ್ಲಾಘನೀಯ ಎಂದು ಹೊನ್ನಾಳಿ ಮಂಡಲ ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್ ಮಾಹಿತಿ - - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ದಾವಣಗೆರೆ ಜಿಲ್ಲೆಯಲ್ಲಿ ಹೊನ್ನಾಳಿ ತಾಲೂಕು ಮಂಡಲ ಸಂಘಟನಾ ಪರ್ವದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಇದಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಮುಖಂಡರು, ಕಾರ್ಯಕರ್ತರ ಶ್ರಮ ಕಾರಣವಾಗಿರುವುದು ಶ್ಲಾಘನೀಯ ಎಂದು ಹೊನ್ನಾಳಿ ಮಂಡಲ ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್ ಹೇಳಿದರು.

ಬುಧವಾರ ಸ್ವಗೃಹದಲ್ಲಿ ಪಕ್ಷದ ಜಿಲ್ಲಾ ಮತ್ತು ತಾಲೂಕು ಮಂಡಲ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಸಾಮಾಸ್ಯ ಸದಸ್ಯರ ನೋಂದಣೆ ನಂತರ ಸಕ್ರಿಯ ಸದಸ್ಯರ ಆನ್‌ಲೈನ್ ನೋಂದಣಿ ನಡೆದಿದೆ. ಅವಳಿ ತಾಲೂಕಿನ 245 ಬೂತ್‌ಗಳಿದ್ದು, ಈ ಬೂತ್‌ಗಳಲ್ಲಿ ಸಕ್ರಿಯವಾಗಿ ನೋಂದಣೆ ಕಾರ್ಯವನ್ನು ಎಲ್ಲ ಮುಖಂಡರ ಸಹಕಾರದೊಂದಿಗೆ ನಡೆದಿರುವುದು ಸಂತಸ ಸಂಗತಿ. ಈ ಸಾಧನೆ ಮಂಡಲದ ನೂತನ ಅಧ್ಯಕ್ಷರ ಆಯ್ಕೆಗೆ ಸಹಕಾರಿಯಾಗಿದೆ ಎಂದರು.

ಬಿಜೆಪಿ ಅಧ್ಯಕ್ಷರ ಚುನಾವಣಾ ತಂಡವು ಜಿಲ್ಲಾ ಮುಖಂಡರೊಂದಿಗೆ ಸೇರಿ ಜ.3ರಂದು ಸಂಘನಾ ಸಭೆ ನಡೆಸಿ, ಎಲ್ಲರ ಸಹಮತದೊಂದಿಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ನೂತನ ಮಂಡಲ ಆಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ. ರಾಜ್ಯ ಸಮಿತಿಯವರ ಸಹಕಾರದೊಂದಿಗೆ ಜಿಲ್ಲಾ ಸಮಿತಿಯವರು ತಾಲೂಕಿನ ಆರಕೆರೆ ಎ.ಎಂ. ನಾಗರಾಚ್ ಅವರನ್ನು ನೂತನ ಮಂಡಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಇದುವರೆಗೆ ಮಂಡಲ ಅಧ್ಯಕ್ಷನಾಗಿ ಸೇವೆ ಸಲ್ಲಿಸಿ, ನಿರ್ಗಮಿಸುತ್ತಿರುವ ತನಗೆ ನೀಡಿದ ಸಲಹೆ, ಸಹಕಾರಗಳನ್ನು ಇದೀಗ ನೂತನವಾಗಿ ಆಯ್ಕೆ ಆಗಿರುವ ಅರಕೆರೆಯ ಎ.ಎಂ. ನಾಗರಾಜ್ ಅವರಿಗೂ ನೀಡಬೇಕು. ಆ ಮೂಲಕ ಅವಳಿ ತಾಲೂಕಿನಲ್ಲಿ ಬಿಜೆಪಿಯನ್ನು ಅತ್ಯಂತ ಬಲಿಷ್ಠ ಪಕ್ಷವಾಗಿ ಸಂಘಟಿಸಬೇಕು. ಜೊತೆಗೆ ತಾಲೂಕಿನಲ್ಲಿ ನಡೆಯುವ ಯಾವುದೇ ಹಂತದ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಗುರುತರ ಜವಾಬ್ದಾರಿ ಮಂಡಲದ ಅಧ್ಯಕ್ಷರ ಜೊತೆಗೊಡಿ ಮುಖಂಡರು, ಕಾರ್ಯಕರ್ತರು ನಿಭಾಯಿಸಿಕೊಂಡು ಬರಬೇಕಾಗಿದೆ ಎಂದು ಸಲಹೆ ನೀಡಿದರು.

ಇತ್ತೀಚೆಗೆ ನಡೆದ ಪಿಎಲ್.ಡಿ. ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕರಾಗಿ ಲಿಂಗಾಪುರ ಕ್ಷೇತ್ರದ ಆಯ್ಕೆಯಾದ ಸಿ.ಎಚ್. ಸಿದ್ದಪ್ಪ ಹಾಗೂ ಚಟ್ನಹಳ್ಳಿ ವಿಎಸ್‌ಎಸ್‌ಎನ್‌ ಸಂಘಕ್ಕೆ ಸದಸ್ಯರಾಗಿ ಅವಿರೋಧ ಆಯ್ಕೆಯಾದ ರುದ್ರೇಶಪ್ಪ ಹಾಗೂ ಹೊನ್ನಾಳಿ ತಾಲೂಕು ಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಅರಕೆರೆ ಎ.ಎಂ,ನಾಗಾಜ್ ಅವರನ್ನು ಶಾಲು ಹೊಂದಿಸಿ, ಸನ್ಮಾನಿಸಲಾಯಿತು.

ಸಿ.ಆರ್. ಶಿವಾನಂದಪ್ಪ, ಪ್ರಸ್ತುತ ಅಧ್ಯಕ್ಷ ಅರಕೆರೆ ಎ.ಎಂ. ನಾಗರಾಜ್, ಕೆ.ರಂಗಪ್ಪ, ತರಗನಹಳ್ಳಿ ರಮೇಶ್‌ಗೌಡ, ಸುರೇಂದ್ರ ನಾಯ್ಕ, ಮಾರುತಿ ನಾಯ್ಕ, ನ್ಯಾಮತಿ ವಿಜಯಕುಮಾರ್, ಪೇಟೆ ಪ್ರಶಾಂತ್, ಹಿರೇಕಲ್ಮಠ ರಾಜು, ಅವಳಿ ತಾಲೂಕುಗಳ ಮುಖಂಡರು, ಕಾರ್ಯಕರ್ತರು ಇದ್ದರು.

- - -

ಕೋಟ್‌ ಬಿಜೆಪಿಯಲ್ಲಿ ಬಣ ಎಂಬುದು ಇಲ್ಲ. ಆದರೆ, ಕೆಲವರು ಸೇರಿಕೊಂಡು ಎಲ್ಲೋ ಸಭೆ ಮಾಡಿದರೆ ಅದು ಬಣ ಚಟುವಟಿಕೆ ಎಂದು ಪರಿಗಣಿಸಲಾಗದು

- ಜೆ.ಕೆ.ಸುರೇಶ್‌, ಮಾಜಿ ಅಧ್ಯಕ್ಷ

- - -

-15ಎಚ್.ಎಲ್.ಐ1:

ಹೊನ್ನಾಳಿಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್ ನಿವಾಸದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ನೂತನ ಅಧ್ಯಕ್ಷ ನಾಗರಾಜ್, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದವರನ್ನು ಸನ್ಮಾನಿಸಲಾಯಿತು.