ಬಿಜೆಪಿ ಗೆಲುವು, ಸಂಭ್ರಮದ ವಿಜಯೋತ್ಸವ

| Published : Jun 06 2024, 12:31 AM IST

ಸಾರಾಂಶ

ಕನ್ನಡಪ್ರಭವಾರ್ತೆ ಗುಳೇದಗುಡ್ಡ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಗಳವಾರ ಸಂಜೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಗಳವಾರ ಸಂಜೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.

ಪಟ್ಟಣದ ಹೊಸಪೇಟೆ ಮಾರ್ಕೆಟ್‌ ಸರ್ಕಲ್ ದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪರಸ್ಪರ ಗುಲಾಲು ಎರಚಿ, ಪಟಾಕಿ ಸಿಡಿಸಿ, ನರೇಂದ್ರ ಮೋದಿ, ಪಿ.ಸಿ.ಗದ್ದಿಗೌಡರ ಪರ ಜಯಘೋಷಣೆ ಕೂಗಿ ಸಂಭ್ರಮಿಸಿದರು.

ಪಟ್ಟಣದ ಭಂಡಾರಿ ಕಾಲೇಜು ಸರ್ಕಲ್, ಪವಾರ್ ಕ್ರಾಸ್, ಗುಲಾಬ್ ಟಾಕೀಸ್, ಅರಳಿಕಟ್ಟಿ, ಚೌಬಜಾರ್‌, ಗಚ್ಚಿನಕಟ್ಟಿ ಸೇರಿದಂತೆ ಹಲವು ಕಡೆಗಳಲ್ಲಿ ಬಿಜೆಪಿ ಮುಖಂಡರು ಜಯಘೋಷ ಹಾಕಿ ಗುಲಾಲು ಎರಚಿ, ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವಸಂತಸಾ ದೊಂಗಡೆ, ಪುರಸಭೆ ಸದಸ್ಯ ಪ್ರಶಾಂತ ಜವಳಿ, ಬಾಲಕೃಷ್ಣ ನಿರಂಜನ, ಭಾಗ್ಯಾ ಉದ್ನೂರ, ಸಂಗಪ್ಪ ಚೆಟ್ಟೇರ, ಮುತ್ತು ಚಿಕ್ಕನರಗುಂದ, ಲಕ್ಷ್ಮಣ ಹಾಲನ್ನವರ, ಶ್ರೀಕಾಂತ ಭಾವಿ, ರಾಜು ಗೌಡರ, ರವಿ ಬೀಳಗಿ, ಶ್ರೀಕಾಂತ ಸಲಕಿ, ಪ್ರಭು ಕಳ್ಳಿಗುಡ್ಡ, ರಘು ಹಣಗಿ, ರಾಜು ಕೊಣ್ಣೂರ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಪಕ್ಷದ ಕಾರ್ಯಕರ್ತರು ಇದ್ದರು.