ಸಾರಾಂಶ
ಲೊಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ದಡ ಸೇರುತ್ತಿರುವ ಸಂಗತಿ ಸಹಿಸಿಕೊಳ್ಳಲಾಗದೆ ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮೂರ್ಚೆ ಹೋದ ಘಟನೆ ಕಲಬುರಗಿ ವಿವಿ ಮತ ಎಣಿಕೆ ಕೇಂದ್ರದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಲೊಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ದಡ ಸೇರುತ್ತಿರುವ ಸಂಗತಿ ಸಹಿಸಿಕೊಳ್ಳಲಾಗದೆ ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮೂರ್ಚೆ ಹೋದ ಘಟನೆ ಕಲಬುರಗಿ ವಿವಿ ಮತ ಎಣಿಕೆ ಕೇಂದ್ರದಲ್ಲಿ ನಡೆದಿದೆ.ಮಂಗಳವಾರ ಕಲಬುರಗಿ ವಿಶ್ವ ವಿದ್ಯಾಲಯದಲ್ಲಿ ನಡೆಯುತ್ತಿದ್ದ ಲೊಕಸಭೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದ ವಿಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಪರ ಮತಗಳ ದಾಖಲೆ ಪಟ್ಟಿ ಮಾಡಿಕೊಳ್ಳುತ್ತಿದ್ದ ವಾಡಿ ನಗರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರು ಏಕಾ ಏಕಿ ಕುಳಿತಲ್ಲೆ ಕುಸಿದು ಬಿದ್ದಿದ್ದಾರೆ.
ಬಿಜೆಪಿ ಅಭ್ಯರ್ಥಿಯ ಹಿನ್ನಡೆ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗದೇ ಮೂರ್ಚೆ ಹೋಗಿದ್ದಾರೆ. ತಕ್ಷಣ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೃದಯಕ್ಕೆ ಸಂಬಂದಿಸಿದಂತೆ ಇನ್ನಿತರ ಪರೀಕ್ಷೆಗಳನ್ನು ನಡೆಸಲು ವೈದ್ಯರು ಮುಂದಾಗಿದ್ದಾರೆ ಎಂದು ಸ್ಥಳದಲ್ಲಿರುವ ಬಿಜೆಪಿ ಇಂಗಳಗಿ ಮಂಡಲ ಅಧ್ಯಕ್ಷ ಸೋಮು ಚವ್ವಾಣ ತಿಳಿಸಿದ್ದಾರೆ.ದೇಶದಲ್ಲಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎಂಬುದು ವೀರಣ್ಣ ಯಾರಿ ಗುರಿಯಾಗಿತ್ತು. ನರೇಂದ್ರ ಮೋದಿ ಕಲಬುರಗಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಿತ್ತಾಪುರ ತಾಲೂಕಿನಿಂದ ಮೋದಿ ಭೇಟಿಗೆ ವೀರಣ್ಣ ಆಯ್ಕೆಯಾಗಿದ್ದರು. ವಿಮಾನ ನಿಲ್ದಾಣದಲ್ಲಿ ಮೋದಿಗೆ ಹಸ್ತಲಾಘವ ನೀಡಿ ಪುಳಕಿತಗೊಂಡಿದ್ದರು.
ಈ ಸಲ ಕಲಬುರಗಿಯಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ದೆಹಲಿಗೆ ಕಳಿಸಲು ಶಕ್ತಿ ಮೀರಿ ಶ್ರಮಿಸುವುದಾಗಿ ಮೋದಿಗೆ ಮಾತು ಕೊಟ್ಟಿದ್ದರು. ಆದರೆ ಫಲಿತಾಂಶ ಮಾತ್ರ ಕಾಂಗ್ರೆಸ್ ಪರ ವಾಲುತ್ತಿರುವುದನ್ನು ಗಮನಿಸಿ ತೀವ್ರ ಬೇಸರಕ್ಕೊಳಗಾದ ಯಾರಿ ಕುಳಿತ ಜಾಗದಲ್ಲೆ ಮೂರ್ಚೆ ಹೋಗಿದ್ದಾರೆಂದು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ.;Resize=(128,128))
;Resize=(128,128))
;Resize=(128,128))