ಸಾರಾಂಶ
ಬಾಳೆಹೊನ್ನೂರು, ಬಿಜೆಪಿ ವಿಶ್ವದಲ್ಲಿ ದೇಶ, ಧರ್ಮಕ್ಕಾಗಿ ಕಾರ್ಯನಿರ್ವಹಿಸುವ ರಾಷ್ಟ್ರಭಕ್ತರ ಏಕೈಕ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಮಾಲತೇಶ್ ಸಿಗಸೆ ಹೇಳಿದರು.
ಖಾಂಡ್ಯ ಹೋಬಳಿ ಬಿಜೆಪಿ ಘಟಕ ಆಯೋಜಿಸಿದ್ದ ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಬಿಜೆಪಿ ವಿಶ್ವದಲ್ಲಿ ದೇಶ, ಧರ್ಮಕ್ಕಾಗಿ ಕಾರ್ಯನಿರ್ವಹಿಸುವ ರಾಷ್ಟ್ರಭಕ್ತರ ಏಕೈಕ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಮಾಲತೇಶ್ ಸಿಗಸೆ ಹೇಳಿದರು.ಸಂಗಮೇಶ್ವರಪೇಟೆ ಸಮುದಾಯ ಭವನದಲ್ಲಿ ಖಾಂಡ್ಯ ಹೋಬಳಿ ಬಿಜೆಪಿ ಘಟಕ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಪಕ್ಷದ ಕಾರ್ಯಕರ್ತರನ್ನು ಗೌರವಿಸುವುದು ನಾಯಕರ ಕರ್ತವ್ಯ. ಚುನಾವಣೆ ಸಂದರ್ಭದಲ್ಲಿ ಪಕ್ಷ ಎಲ್ಲೆಲ್ಲಿ ಸೋಲು ಕಂಡಿದೆಯೋ ಅದು ವಿರೋಧ ಪಕ್ಷದಿಂದ ಉಂಟಾದ ಸೋಲಲ್ಲ ಕಾರ್ಯಕರ್ತರ ಕಡೆಗಣನೆ, ಕಾರ್ಯಕರ್ತರ ಹತಾಶೆ ಕಾರಣದಿಂದ ಉಂಟಾದ ಸೋಲಾಗಿದೆ ಎಂದರು.
ದೇಶ, ರಾಜ್ಯದಲ್ಲಿ ಬಲಿಷ್ಠ ಕಾರ್ಯಕರ್ತರ ನಿರ್ಮಾಣ ನಮ್ಮ ಗುರಿ ಆಗಿರಬೇಕು. ಅಂತಹ ಉದ್ದೇಶಕ್ಕಾಗಿ ಆಯೋಜಿಸಿರುವ ಖಾಂಡ್ಯ ಹೋಬಳಿ ಅಭಿನಂದನಾ ಸಮಾರಂಭ ಇತರರಿಗೂ ಪ್ರೇರಣೆಯಾಗಿದೆ. ಇಂದಿನ ಕ್ಲಿಷ್ಟಕರ ಸಮಯದಲ್ಲಿ ರಾಜ್ಯದ ನಾಯಕತ್ವ ವಹಿಸಿಕೊಂಡಿರುವ ಬಿ.ವೈ.ವಿಜಯೇಂದ್ರ ರಾಜ್ಯದ ಮೂಲೆ ಮೂಲೆಗೂ ಪ್ರವಾಸ ಮಾಡಿ ಕಾರ್ಯಕರ್ತರಲ್ಲಿ ಭರವಸೆ ಮತ್ತು ಉತ್ಸಾಹ ತುಂಬುತ್ತಾ ಪುನಃ ಅಧಿಕಾರದೆಡೆಗೆ ಪಕ್ಷ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.ಬಜರಂಗದಳದ ಮಾಜಿ ಮುಖಂಡ ಪ್ರವೀಣ್ ಖಾಂಡ್ಯ ಮಾತನಾಡಿ, ಕ್ಷೇತ್ರದ ಬಿಜೆಪಿ ಪಕ್ಷದ ಹಿರಿಯರು ಕೆಲವರ ಚಾಡಿ ಮಾತು ಕೇಳುವುದನ್ನು ಬಿಟ್ಟು ಸ್ವಾಭಿಮಾನಿ ಕಾರ್ಯಕರ್ತರನ್ನು ಬೆಳೆಸಬೇಕು. ಬಿಜೆಪಿ ಜನಬೆಂಬಲ ಕೇವಲ ಅಭಿವೃದ್ಧಿಯ ಹೆಸರಿಗಾಗಿ ಅಲ್ಲ. ಹಿಂದುತ್ವ, ರಾಷ್ಟ್ರೀಯತೆ, ಭಾರತದ ಸಾರ್ವಭೌಮತ್ವಕ್ಕೆ ಬಿಜೆಪಿ ದೃಷ್ಟಿಕೋನವನ್ನು ಜನ ಬೆಂಬಲಿಸು ತ್ತಾರೆಯೇ ಹೊರತು ಕೇವಲ ಅಭಿವೃದ್ಧಿಗಾಗಿ ಅಲ್ಲ ಎಂದು ಹಿರಿಯರು ತಿಳಿದುಕೊಳ್ಳಬೇಕಿದೆ ಎಂದರು. ಬಿಜೆಪಿ ಮುಖಂಡ ವಾಸು ಹುಯಿಗೆರೆ ಮಾತನಾಡಿ, ಚಾಡಿ ಮಾತಿನಿಂದ ಶೃಂಗೇರಿ ಕ್ಷೇತ್ರ ಪಕ್ಷದ ಕೈ ತಪ್ಪಿದೆ. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕ ಕಾರ್ಯಕರ್ತರನ್ನು ಗೌರವಿಸುವುದನ್ನು ಹಿರಿಯರು ಕಲಿಯಬೇಕು ಎಂದರು.ಇತ್ತೀಚೆಗೆ ನಡೆದ ಸಹಕಾರ ಸಂಘಗಳ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಬೆಂಬಲಿತ ಕಾರ್ಯಕರ್ತರನ್ನು ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.ದೇವದಾನ ಗ್ರಾಪಂ ಅಧ್ಯಕ್ಷ ಸಂಪತ್, ಮುಖಂಡರಾದ ಸಾರಗೋಡು ಜಗದೀಶ್, ಜಯಶೀಲ್ ಉಜ್ಜಿನಿ, ರವಿ, ಸುಧಾಕರ್, ಮಾಗಲು ಪ್ರವೀಣ್, ವೆಂಕಟೇಶ್, ನಂದೀಶ್ ಮತ್ತಿತರರು ಹಾಜರಿದ್ದರು.೨೦ಬಿಹೆಚ್‌ಆರ್ ೧:ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿ ಬಿಜೆಪಿಯಿಂದ ಸಹಕಾರ ಸಂಘಗಳ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಬೆಂಬಲಿತ ಕಾರ್ಯಕರ್ತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಮಾಲತೇಶ್ ಸಿಗಸೆ, ಪ್ರವೀಣ್ ಖಾಂಡ್ಯ, ವಾಸು ಹುಯಿಗೆರೆ, ಸಂಪತ್, ಜಗದೀಶ್ ಇದ್ದರು.