ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ

ಕನ್ನಡಪ್ರಭ ವಾರ್ತೆ ಚಾಮರಾಜನಗರ

2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದು, ವಿಧಾನಸೌಧದೊಳಗೆ ಭಾರತ್ ಮಾತಾಕಿ ಜೈ ಎಂದು ಅಧಿಕಾರ ಸ್ವೀಕರಿಸಿ ಪ್ರಮಾಣ ಸ್ವೀಕರಿಸುತ್ತಾರೆ. ಅದನ್ನು ನೀವು ಬರೆದಿಟ್ಟುಕೊಳ್ಳಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.

ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಜೆಎಸ್ ಎಸ್ ಸಭಾಂಗಣದಲ್ಲಿ ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾ ವತಿಯಿಂದ ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿಗೆ ಸೋಲು ಗೆಲುವು ರಾಜಕೀಯ ಒಂದು ಭಾಗ. ನಮ್ಮ ಹೋರಾಟ, ಶ್ರಮದಲ್ಲಿ ಬಿಜೆಪಿ ಹೆಚ್ಚಿನ ಮತಗಳನ್ನು ಪಡೆದಿದೆ. ನಮಗೆ ಅಧಿಕಾರ ಇರಲಿ, ಇಲ್ಲದಿರಲಿ ಜನರ ಮಧ್ಯದಲ್ಲಿ ದೊಡ್ಡಪಕ್ಷದ ತಂಡ ನಮ್ಮಲ್ಲಿ ಇದೆ ಎಂದರು.


ವಿಧಾನಸೌಧದೊಳಗೆ ಪಾಕಿಸ್ತಾನಕ್ಕೆ ಜೈ ಎಂದು ಹೇಳಿದ ಮೇಲೆ ಕಾಂಗ್ರೆಸ್‌ಗೆ ಏನು ಉಳಿದಿಲ್ಲ. ಅದ್ಯಾವುದೋ ಜಿರಲೆ ಪಕ್ಷವನ್ನಿಟ್ಟುಕೊಂಡು ಬಿಜೆಪಿ ಛೇಡಿಸಲಿಕ್ಕೆ ಜಿರಲೆ, ಸೊಳ್ಳೆ, ಹೆಗ್ಗಣಗಳಿಗೆ ಹೆದರುವ ಕಾಲ ಇದಲ್ಲ. ಅವೆಲ್ಲವನ್ನೂ ನಿರ್ಲಕ್ಷ್ಯಿಸಿ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಯಾವ ವಿಧಾನಸೌಧದೊಳಗೆ ಪಾಕಿಸ್ತಾನಕ್ಕೆ ಜೈ ಎಂದು ಕೂಗಿದ ಅದೇ ವಿಧಾನಸೌಧದೊಳಗೆ ಭಾರತ್ ಮಾತಾಕಿ ಜೈ ಎಂದು ಅಧಿಕಾರ ಸ್ವೀಕರಿಸಿ ಪ್ರಮಾಣ ಸ್ವೀಕರಿಸುತ್ತಾರೆ. ಅದನ್ನು ನೀವು ಬರೆದಿಟ್ಟುಕೊಳ್ಳಿ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಪಂಡಿತ ದೀನದಯಾಳ್ ಜೀ ಅವರು ಬಿಜೆಪಿ ಸಂಘಟನಾತ್ಮಕ ಸಂಬಂಧ ಪ್ರಶಿಕ್ಷಣದ ಕಲ್ಪನೆ ಕೊಟ್ಟಿದ್ದಾರೆ. ಜೊತೆಗೆ ಅಂತ್ಯೋದಯ ಅಗತ್ಯತೆ ಪಕ್ಷಕ್ಕೆ ಮನವರಿಕೆ ಮಾಡಿದ್ದಾರೆ ಅವರು ಅಂದು ಪ್ರಶಿಕ್ಷಣಕ್ಕೆ ಕೊಟ್ಟ ಚಾಲನೆ ಇಂದು ಬಿಜೆಪಿಯಾಗಿ ಪರಿವರ್ತನೆಯಾಗಿದ್ದು, ಪ್ರಪಂಚದಲ್ಲಿ ಬಹುದೊಡ್ಡ ರಾಜಕೀಯ ಪಕ್ಷವಾಗಿದೆ. ಬಿಜೆಪಿ ತನ್ನ ಕಾರ್ಯಕರ್ತರಿಗೆ ಪ್ರಶಿಕ್ಷಣ ಕೊಡುವ ವ್ಯವಸ್ಥೆ ಮಾಡಿದೆ ಎಂದರು.

ಭಾರತದಲ್ಲಿ ರಾಷ್ಟ್ರದ ಮಟ್ಟದಲ್ಲಿ ಮನ್ನಣೆ ಪಡೆದಂತಹ ರಾಜಕೀಯ ಪಕ್ಷಗಳ ಸಂಖ್ಯೆ ಸುಮಾರು 6 ಪಕ್ಷಗಳು. ರಾಜ್ಯದಲ್ಲಿ ಮಟ್ಟದಲ್ಲಿ ಚುನಾವಣೆ ಆಯೋಗದ ಮೂಲಕ ಮಾನ್ಯತೆ ಪಡೆದ ಸುಮಾರು 62ಕ್ಕೂ ಹೆಚ್ಚು ನೋಂದಾಯಿಸಲ್ಪಟ್ಟಿವೆ. ರಾಜಕೀಯ ಪಕ್ಷಗಳ ನಡುವೆ ತನ್ನ ಕಾರ್ಯಕರ್ತರಿಗೆ ಸೈದ್ಧಾಂತಿಕ ವಿಚಾರಗಳು, ಅಭಿವೃದ್ಧಿಗಳ ಬಗ್ಗೆ ರಾಜಕಾರಣಿ, ಕಾರ್ಯಕರ್ತರು ಹೇಗಿದ್ದರೆ ಚೆನ್ನಾ ಅಂಥಾ ಹೇಳಿ ಪ್ರಶಿಕ್ಷಣದ ಮೂಲಕ ತರಬೇತಿ ಕೊಡುವ ಪ್ರಸ್ತುತ ಏಕೈಕ ರಾಜಕೀಯ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರವೇ. ಅ ಹಿನ್ನೆಲೆಯಲ್ಲಿ ಮೈಸೂರು ಗ್ರಾಮಾಂತರ ಜಿಲ್ಲೆ ನಮ್ಮ ಪ್ರಮುಖ ಕಾರ್ಯಕರ್ತರಿಗೆ ಪ್ರಶಿಕ್ಷಣ ಮಾಡುತ್ತಿದೆ. ಪ್ರಶಿಕ್ಷಣದಲ್ಲಿ ನಮ್ಮ ಕಾರ್ಯಪದ್ದತಿ ಏನು, ನಮ್ಮ ವೈಚಾರಿಕ ವಿಚಾರಗಳೇನು, ನಮ್ಮ ಪಂಚಸೂತ್ರಗಳೇನು ಎಂದು ಅದರ ಬಗ್ಗೆ ಚೆರ್ಚೆ ಮಾಡಲಾಗುವುದು ಎಂದರು.

ಕೇಂದ್ರ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡುತ್ತಾ, ಪಕ್ಷದ ವಿರುದ್ದ ನಡೆಯುವ ಷಡ್ಯಂತ್ರ ಮನನ ಮಾಡುತ್ತದೆ. ಅದನ್ನ ಸಾಮಾನ್ಯ ಜನರಿಗೆ ತಿಳಿಸುವಂತೆ ಒಟ್ಟಾರೆ ಒಂದೂವರೆ ದಿನಗಳ ಕಾಲ ಅತ್ಯಂತ ಅರ್ಥಪೂರ್ಣವಾಗಿ ದೇಶ ಕಟ್ಟುವ ಭಾಗವಾಗಿ ನನ್ನ ಜಾತಿ, ಧರ್ಮ, ಬದುಕಿಗಿಂತ ದೇಶ ದೊಡ್ಡದು ಎಂದು ರಾಷ್ಟ್ರಭಕ್ತರ ನಿರ್ಮಾಣ ಮಾಡಿ ಬಿಜೆಪಿ ರಾಷ್ಟ್ರೀಯತೆಗೆ ಒತ್ತು ನೀಡಿ ಕಾರ್ಯಕರ್ತರಿಗೆ ಹೊಸ ಉತ್ಸಾಹ, ಅನುಭವ ತುಂಬುವುದಕ್ಕೆ ಪ್ರಶಿಕ್ಷಣ ಆರಂಭವಾಗಿದೆ. ಮೈಸೂರು ಗ್ರಾಮಾಂತರ ಜಿಲ್ಲಾ ಸಮಿತಿ ತುಂಬಾ ಚೆನ್ನಾಗಿ ಕಾರ್ಯಕ್ರಮ ಅಯೋಜಿಸಿರುವುದು ತುಂಬಾ ಸಂತಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಸಚಿವ ಎನ್.ಮಹೇಶ್ ಮಾತನಾಡಿದರು. ಮೈಸೂರು ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಬಾಲರಾಜು, ಹರ್ಷವರ್ಧನ್, ವಿಭಾಗ ಸಹ ಸಂಯೋಜಕ ಬಾಲಸುಬ್ರಹ್ಮಣ್ಯಂ, ಮಾಜಿ ಅಧ್ಯಕ್ಷ ಸೋಮಶೇಖರ, ವಿಭಾಗ ಪ್ರಭಾರಿ ಸ್ವಾಮಿ ಮರುಳಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ಪರೀಕ್ಷಿತರಾಜ ಹಾಜರಿದ್ದರು.25ಸಿಎಚ್ಎನ್‌9

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಜೆಎಸ್ ಎಸ್ ಸಭಾಂಗಣದಲ್ಲಿ ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾ ವತಿಯಿಂದ ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿದರು.

ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿದರು.