ಬಿಜೆಪಿ ಹಣ ಪಡೆದ ಕಾಂಗ್ರೆಸ್ಸಿಗೆ ಮತ ನೀಡ್ತಾರೆ

| Published : Nov 06 2024, 12:40 AM IST

ಬಿಜೆಪಿ ಹಣ ಪಡೆದ ಕಾಂಗ್ರೆಸ್ಸಿಗೆ ಮತ ನೀಡ್ತಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಹಣ ಕೆಲಸ ಮಾಡುವುದಿಲ್ಲ ಎಂಬುವುದು ನನ್ನ ನಂಬಿಕೆ. ಹಾಗಾಗಿ ಬಿಜೆಪಿಯವರು ಹಂಚುವ ಹಣವನ್ನು ಮತದಾರರು ಪಡೆದು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.

ಹುಬ್ಬಳ್ಳಿ:

ರಾಜ್ಯದ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಹಣದ ಮೇಲೆ ಉಪ ಚುನಾವಣೆ ನಡೆಸುತ್ತಿದೆ. ಆದರೆ, ಜನ ಅವರಿಂದ ಹಣ ಪಡೆದು ಕಾಂಗ್ರೆಸ್ಸಿಗೆ ಮತ ಹಾಕಲಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಹಣ ಕೆಲಸ ಮಾಡುವುದಿಲ್ಲ ಎಂಬುವುದು ನನ್ನ ನಂಬಿಕೆ. ಹಾಗಾಗಿ ಬಿಜೆಪಿಯವರು ಹಂಚುವ ಹಣವನ್ನು ಮತದಾರರು ಪಡೆದು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಲಿದ್ದಾರೆ ಎಂಬ ವಿಶ್ವಾಸವಿದೆ. ನಮ್ಮ ಪಕ್ಷದಲ್ಲಿ ಸಾಮರಸ್ಯವಿದೆ. ಆದರೆ, ಬಿಜೆಪಿಯಲ್ಲಿ ಸಾಮರಸ್ಯವಿಲ್ಲ. ಈ ಬಾರಿ ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಇದರಲ್ಲಿ ಎರಡು ಮಾತಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತ ವಿರೋಧಿ ಕೆಲಸ ಮಾಡಲ್ಲ:

ವಕ್ಫ್‌ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರವು ಯಾವುದೇ ತಪ್ಪು ಮಾಡಿಲ್ಲ. ಈ ಹಿಂದೆ ಬಿಜೆಪಿಯವರು ನೀಡಿದ್ದ ನೋಟಿಸ್ ಪ್ರಕ್ರಿಯೆ ಈಗಲೂ ಮುಂದುವರಿದಿದೆಯಷ್ಟೆ. ಕಾಂಗ್ರೆಸ್ ಎಂದಿಗೂ ರೈತ ವಿರೋಧಿ ಕೆಲಸ ಮಾಡಿಲ್ಲ ಮುಂದೆಯೂ ಮಾಡುವುದಿಲ್ಲ. ವಿಜಯಪುರದಲ್ಲಿ ಆಗಿರುವ ಒಂದೆರಡು ಘಟನೆಗಳನ್ನು ಮುಂದಿಟ್ಟುಕೊಂಡು ರೈತರು ಧರಣಿ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಧರಣಿ ಮಾಡಲು ಅಧಿಕಾರವಿದೆ. ನೋಟಿಸ್ ಹಿಂಪಡೆಯುವ ಮೂಲಕ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.

ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ವಕ್ಫ್ ವಿಷಯವನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನೋಡುತ್ತಾ ಇರಿ, ಉಪಚುನಾವಣೆ ಮುಗಿದ ಬಳಿಕ ಪ್ರತಿಭಟನೆ ನಿಲ್ಲಿಸಿ ಮನೆಗೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.