ದೆಹಲಿಯಲ್ಲಿ ಬಿಜೆಪಿ ಜಯಭೇರಿ: ಕಾರ್ಯಕರ್ತರ ವಿಜಯೋತ್ಸವ

| Published : Feb 09 2025, 01:16 AM IST

ಸಾರಾಂಶ

ರಾಷ್ಟ್ರದ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯು ದೇಶದ ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ. ದೇಶದ ರಕ್ಷಣೆ, ಅಭಿವೃದ್ಧಿಗೆ ಬಿಜೆಪಿಯೇ ಪರಿಹಾರ ಎಂದು ದೇಶದ ಜನರು ಪಕ್ಷದ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಪಕ್ಷ ಹಾಗೂ ನಮ್ಮ ನಾಯಕರು ಜನರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆಯಾಗದಂತೆ ದೇಶದ ಸುರಕ್ಷತೆ, ಪ್ರಗತಿಗೆ ಶ್ರಮಿಸುತ್ತಾರೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿರುವುದಕ್ಕೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆರಾಜ್ಯ ಸಚಿವ ವಿ.ಸೋಮಣ್ಣನವರ ನೇತೃತ್ವದಲ್ಲಿ ಶನಿವಾರ ತುಮಕೂರಿನಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಪಟಾಕಿ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಸಚಿವ ವಿ.ಸೋಮಣ್ಣ, ದೆಹಲಿ ಚುನಾವಣಾ ಪ್ರಚಾರದಲ್ಲಿ ತಾವೂ ಪಾಲ್ಗೊಂಡಿದ್ದು, ಎಲ್ಲೆಡೆ ಬಿಜೆಪಿ ಪರವಾಗಿ ಜನರ ಒಲವು ಕಂಡುಬಂದಿತ್ತು, ಎಲ್ಲಾ ಧರ್ಮೀಯರೂ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಮೆಚ್ಚಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ ಎಂದರು.

ಪ್ರತಿಪಕ್ಷಗಳ ಆಮಿಷಗಳಿಗೆ ಬೆಲೆ ಕೊಡದೇ ದೆಹಲಿ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಷ್ಟ್ರದ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯು ದೇಶದ ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ. ದೇಶದ ರಕ್ಷಣೆ, ಅಭಿವೃದ್ಧಿಗೆ ಬಿಜೆಪಿಯೇ ಪರಿಹಾರ ಎಂದು ದೇಶದ ಜನರು ಪಕ್ಷದ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಪಕ್ಷ ಹಾಗೂ ನಮ್ಮ ನಾಯಕರು ಜನರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆಯಾಗದಂತೆ ದೇಶದ ಸುರಕ್ಷತೆ, ಪ್ರಗತಿಗೆ ಶ್ರಮಿಸುತ್ತಾರೆ ಎಂದು ಹೇಳಿದರು.

ನನಗೆ ಉಸ್ತುವಾರಿ ಕೊಟ್ಟಿದ್ದ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು: ದೆಹಲಿಯ ನಾಗಲೋಯಿ ಜಾಟ್ ಕ್ಷೇತ್ರದ ಜವಾಬ್ದಾರಿ ನನಗೆ ವಹಿಸಿದ್ದು ಈವರೆಗೆ ಗೆಲ್ಲದ ಆ ಕ್ಷೇತ್ರವನ್ನು ಈ ಬಾರಿ ಗೆದ್ದಿದ್ದಾಗಿ ಕೇಂದ್ರ ಸಚಿವ ವಿ.‌ಸೋಮಣ್ಣ ತಿಳಿಸಿದರು.ಇನ್ನು ಮೂರು ವರ್ಷಗಳಲ್ಲಿ ದೆಹಲಿ‌ ಅಭಿವೃದ್ಧಿ ಆಗಲಿದೆ. ಅಣ್ಣ ಹಜಾರೆ ಹೆಸರಿನಲ್ಲಿ‌ ಹೋದ ಕ್ರೇಜಿವಾಲ್ ಅವರ ಬಗ್ಗೆ ಜನರಿಗೆ ಅರ್ಥವಾಗಿದೆ. ಇನ್ಮುಂದೆ ಬಿಜೆಪಿ ಆಡಳಿತದಲ್ಲಿ ದೇಶದ ರಾಜಧಾನಿ ಮೇಲ್ಪಂಕ್ತಿಯಲ್ಲಿ‌ ಇರಬೇಕೆಂದು ಜನರು ತೋರಿಸಿದ್ದಾರೆ ಎಂದರು.ಪ್ರಯಾಗ್ ರಾಜ್ ನ ಕುಂಭಮೇಳ ಐತಿಹಾಸಿಕ ‌ಕಾರ‍್ಯಕ್ರಮವಾಗಿದ್ದು ಒಬ್ಬನೇ ಹೋಗಿ ರೈಲಿನಲ್ಲಿ ನೋಡಿದೆ. ಯಾರಿಗೂ ಯಾವುದೇ ಕಾಯಿಲೆ ಇಲ್ಲ ಎಂದ ಅವರು, ಕೇವಲ 450 ಜನರು‌ ಮಾತ್ರ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಗೊಂಡಿದ್ದಾರೆ. ಕಾಂಗ್ರೆಸ್ ನವರು ಕೂಡ ಹೋಗಿ ಕುಂಭಮೇಳದಲ್ಲಿ‌ ಮಿಂದು ಬರುತ್ತಿದ್ದಾರೆ ಎಂದ ಅವರು, ಭಗವಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ರವರ ಜೊತೆ ಇದ್ದಾನೆ ಎಂದರು.ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಚೇತನ್, ನಗರ ಅಧ್ಯಕ್ಷ ಧನುಷ್, ಮುಖಂಡರಾದ ಟಿ.ಎಚ್.ಹನುಮಂತರಾಜು, ಹನುಮಂತರಾಯಪ್ಪ, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್ ಮೊದಲಾದವರು ಭಾಗವಹಿಸಿದ್ದರು.