ದೆಹಲಿಯಲ್ಲಿ ಬಿಜೆಪಿ ಜಯಭೇರಿ; ಗುಬ್ಬಿ ಕಾರ್ಯಕರ್ತರ ಸಂಭ್ರಮಾಚರಣೆ

| Published : Feb 09 2025, 01:16 AM IST

ಸಾರಾಂಶ

ಈ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿರುವ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿಯೇ ಸರ್ವನಾಶವಾಗುವುದು. ದೆಹಲಿಯ ಮತದಾರರು ನರೇಂದ್ರ ಮೋದಿಯವರ ಮೇಲೆ ವಿಶ್ವಾಸವಿಟ್ಟು ಮತದಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಇತರೆ ರಾಜ್ಯಗಳಲ್ಲಿಯೂ ನಡೆಯುವ ಚುನಾವಣೆಗಳಲ್ಲಿ ಜಯಭೇರಿ ಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.ಮುಖಂಡ ಗುಡ್ಡದಹಳ್ಳಿ ಬಸವರಾಜು ಮಾತನಾಡಿ, ವಿರೋಧ ಪಕ್ಷಗಳ ಯಾವುದೇ ತಂತ್ರಗಾರಿಕೆ ಹಾಗೂ ಸುಳ್ಳು ಆ

ಕನ್ನಡಪ್ರಭ ವಾರ್ತೆ ಗುಬ್ಬಿ

ಸುಮಾರು ಎರಡು ದಶಕಗಳ ನಂತರ ಬಿಜೆಪಿ ರಾಷ್ಟ್ರದ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಜಯ ಯಾತ್ರೆಯನ್ನು ಮುಂದುವರಿಸಿರುವುದು ಸಂತೋಷದ ವಿಚಾರವಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮಯ್ಯ ತಿಳಿಸಿದರು.

ಗುಬ್ಬಿ ಪಟ್ಟಣದಲ್ಲಿ ಶನಿವಾರ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ ಮಾತನಾಡಿದರು.

ಈ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿರುವ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿಯೇ ಸರ್ವನಾಶವಾಗುವುದು. ದೆಹಲಿಯ ಮತದಾರರು ನರೇಂದ್ರ ಮೋದಿಯವರ ಮೇಲೆ ವಿಶ್ವಾಸವಿಟ್ಟು ಮತದಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಇತರೆ ರಾಜ್ಯಗಳಲ್ಲಿಯೂ ನಡೆಯುವ ಚುನಾವಣೆಗಳಲ್ಲಿ ಜಯಭೇರಿ ಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.

ಮುಖಂಡ ಗುಡ್ಡದಹಳ್ಳಿ ಬಸವರಾಜು ಮಾತನಾಡಿ, ವಿರೋಧ ಪಕ್ಷಗಳ ಯಾವುದೇ ತಂತ್ರಗಾರಿಕೆ ಹಾಗೂ ಸುಳ್ಳು ಆಶ್ವಾಸನೆಗಳಿಗೆ ಮರುಳಾಗದ ದೆಹಲಿಯ ಮತದಾರರು ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖಂಡರ ಮೇಲೆ ವಿಶ್ವಾಸ ಇಟ್ಟು ಮತ ಚಲಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿಯೂ ಇದು ಮರುಕಳಿಸಲಿದ್ದು ಮತ್ತೊಮ್ಮೆ ಬಿಜೆಪಿಯು ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಅಧಿಕಾರಕ್ಕೆ ಬರುವುದು ಶತಸಿದ್ಧ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯಿಂದ ಬೇಸತ್ತಿರುವ ಜನರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ದೇಶದ ಅಭಿವೃದ್ಧಿಗಾಗಿ ಮೋದಿ ಆಯ್ಕೆಗೆ ಮತದಾರ ಒಲವು ತೋರುತ್ತಿರುವುದು ಭವಿಷ್ಯದ ಭಾರತದ ಬದಲಾವಣೆಗೆ ನಾಂದಿಯಾಗಲಿದೆ ಎಂದು ಹೇಳಿದರು.

ಮುಖಂಡರಾದ ಸಿದ್ದರಾಮಯ್ಯ, ಯತೀಶ್ , ಕುಮಾರ್, ಬಸವರಾಜು, ಕೃಷ್ಣಮೂರ್ತಿ, ಜಿ. ಹೊಸಹಳ್ಳಿ ಬಸವರಾಜು, ಸಿದ್ದರಾಮಯ್ಯ, ಕುಮಾರಣ್ಣ ಹಾಗೂ ಹಲವಾರು ಕಾರ್ಯಕರ್ತರು ಹಾಜರಿದ್ದರು