ಇಡಿ ದುರ್ಬಳಕೆಗೆ ದೆಹಲಿ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಸುಳ್ಳಿನ ವಿರುದ್ಧ ಸತ್ಯಕ್ಕೆ ಬಹುದೊಡ್ಡ ಗೆಲುವು ದೊರೆತಿದೆ

ಕನ್ನಡಪ್ರಭ ವಾರ್ತೆ ಮೈಸೂರುನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಬಿಜೆಪಿಯು ಇಡಿ ಬಳಸಿಕೊಂಡು ಕಾಂಗ್ರೆಸ್ ವರಿಷ್ಠ ನಾಯಕರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಬ್ಯಾರಿಕೇಡ್ ಅಳವಡಿಸಿ ತಡೆಯಲು ಪ್ರಯತ್ನಿಸಿದರು ತಳ್ಳಿಕೊಂಡ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬಿಜೆಪಿ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಲು ಕರೆ ನೀಡಲಾಗಿತ್ತು. ಅದರಂತೆ ರಾಮಸ್ವಾಮಿ ವೃತ್ತದಲ್ಲಿ ಜಮಾಯಿಸಿ ಪ್ರತಿಭಟಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಇಡಿ ದುರ್ಬಳಕೆಗೆ ದೆಹಲಿ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಸುಳ್ಳಿನ ವಿರುದ್ಧ ಸತ್ಯಕ್ಕೆ ಬಹುದೊಡ್ಡ ಗೆಲುವು ದೊರೆತಿದೆ ಎಂಬಿತ್ಯಾದಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟಿಸಿದರು.ನಂತರ ರಾಮಸ್ವಾಮಿ ವೃತ್ತದಿಂದ ಜಯಲಕ್ಷ್ಮೀ ವಿಲಾಸ್ ರಸ್ತೆ ಮಾರ್ಗವಾಗಿ ಬಿಜೆಪಿ ಕಚೇರಿಯತ್ತ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ತೊಲಗಲಿ, ಬಿಜೆಪಿಗೆ ಧಿಕ್ಕಾರ ಘೋಷಣೆ ಕೂಗುತ್ತಾ ಸಾಗಿದರು. ಬಿಜೆಪಿ ಕಚೇರಿ 100 ಮೀಟರ್ ದೂರದಲ್ಲಿ 3 ಹಂತದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ, ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.ಆದರೆ, ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿಕೊಂಡು ಬಿಜೆಪಿ ಕಚೇರಿ ನುಗ್ಗಲು ಯತ್ನಿಸಿದರು. ಬಿಜೆಪಿ ಕಚೇರಿಯ ದೇವ ಪಾರ್ಥಿವ ರಸ್ತೆಯಲ್ಲೂ ಪೊಲೀಸರು ಬ್ಯಾರಿಕೇಡ್ ಹಾಕಿದ್ದರಿಂದ ಕಚೇರಿ ಮುತ್ತಿಗೆ ಯತ್ನವನ್ನು ತಡೆದರು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋಗಿ, ಎಲ್ಲರ ಮಾಹಿತಿ ಸಂಗ್ರಹಿಸಿದ ಬಳಿಕ ಬಿಡುಗಡೆ ಮಾಡಿದರು.ಬಿಜೆಪಿಯ ಕಚೇರಿ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದ ಪೊಲೀಸರು, ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್‌ ರಾಜ್ ನೇತೃತ್ವದಲ್ಲಿ ಎಸಿಪಿಗಳು, ಇನ್ಸ್ ಪೆಕ್ಟರ್ ಗಳು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಮೂಡಾ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಮಾಜಿ ಮೆಯರ್ ಗಳಾದ ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಮುಖಂಡರಾದ ಲತಾ ಮೋಹನ್, ಭಾಸ್ಕರ್ ಗೌಡ, ನಾಗಭೂಷಣ್, ರವಿ ಮಂಚೇಗೌಡನಕೊಪ್ಪಲು, ಈಶ್ವರ್ ಚಕ್ಕಡಿ, ಶಿವಪ್ರಸಾದ್, ತೊರೆಮಾವು ಗಿರೀಶ್, ಮೋಸಿನ್ ಖಾನ್, ನಾಗೇಶ್, ವೆಂಕಟೇಶ್, ಮೋಹನ್, ಕೆ. ಮಹೇಶ್, ರಾಹುಲ್ ಕುಂಬರಹಳ್ಳಿ, ರಮೇಶ್, ನಾಗೇಶ್, ಮಹದೇವ್, ನಾಗರಾಜ್, ಅಬ್ರಾರ್, ಚಂದನ್ ಕುಮಾರ್, ಹೊಯ್ಸಳ, ಮಲ್ಲೇಶ್ , ಶಶಿಕುಮಾರ್, ದರ್ಶನ್, ಕೆ.ವಿ. ಮಲ್ಲೇಶ್, ಸುನಿಲ್, ಚಂದ್ರಕಲಾ ಮೊದಲಾದವರು ಇದ್ದರು.----ಬಾಕ್ಸ್...ಕಚೇರಿಗೆ ಮುತ್ತಿಗೆ ಯತ್ನ ಖಂಡಿಸಿ ಬಿಜೆಪಿ ಪ್ರತಿಭಟನೆಫೋಟೋ- 19ಎಂವೈಎಸ್7----ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸಹ ಪ್ರತಿಭಟಿಸಿದರು.ಕಾಂಗ್ರೆಸ್ ಗೂಂಡಾಗಿರಿಗೆ ಧಿಕ್ಕಾರ, ಹಲ್ಲೆ ಮಾಡಲು ಬರುತ್ತಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಧಿಕ್ಕಾರ ಕೂಗಿದರು. ಕಾಂಗ್ರೆಸ್ ಪ್ರತಿಭಟನಾಕಾರರ ಬಳಿಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು. ಬಿಜೆಪಿ ಪರವಾಗಿ ಘೋಷಣೆ ಕೂಗಿದರು.ಈ ವೇಳೆ ಬಿಜೆಪಿ ಮುಖಂಡ ಬಿ.ಎಂ. ರಘು ಮಾತನಾಡಿ, ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನಿಸಿದ ಸ್ವಾಗತ ಕೋರಲಿದ್ದೇವು. ಕಚೇರಿಗೆ ಬಂದವರಿಗೆ ಶಾಲು ಹಾಕಲಿದ್ದೇವೆ. ಆದರೆ ಅವರು ಬರಲಿಲ್ಲ ಎಂದು ಕುಟುಕಿದರು.ಮುಖಂಡರಾದ ಎಸ್. ಮಹದೇವಯ್ಯ, ರುದ್ರಮೂರ್ತಿ, ಎಂ. ರಾಮಕೃಷ್ಣ, ನಾರಾಯಣ ಲೋಲಪ್ಪ, ಕೃಷ್ಣನಾಯಕ, ಎಂ. ಮಹೇಶ್, ಎಸ್. ತ್ಯಾಗರಾಜ, ಉಮೇಶ್, ನಂದೀಶ್, ಲೋಕೇಶ್, ಹಿನಕಲ್ ಚಂದ್ರ, ಬಾಲಕೃಷ್ಣ, ಸಿದ್ದರಾಜು, ರಾಜನಾಯಕ, ರಾಕೇಶ್ ಭಟ್, ವಿ. ಶೈಲೇಂದ್ರ, ಕಾರ್ತಿಕ್ ಮರಿಯಪ್ಪ, ರಶ್ಮಿ, ಕವಿತಾ ಸಿಂಗ್ ಮೊದಲಾದವರು ಇದ್ದರು.