ಸಾರಾಂಶ
ಸುಜಲಾನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ವಿಂಡ್ ಮ್ಯಾನ್ ಆಫ್ ಇಂಡಿಯಾದ ತುಳಸಿತಂತಿ ಯವರ ಜನ್ಮದಿನದ ಪ್ರಯುಕ್ತ ಮಂಗಳವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಮಂಗಳವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ತುಳಸಿತಂತಿರ ಜನ್ಮದಿನ ಪ್ರಯುಕ್ತ ಆಯೋಜನೆ । 47 ಯೂನಿಟ್ ರಕ್ತ ನೀಡಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆಸುಜಲಾನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ವಿಂಡ್ ಮ್ಯಾನ್ ಆಫ್ ಇಂಡಿಯಾದ ತುಳಸಿತಂತಿ ಯವರ ಜನ್ಮದಿನದ ಪ್ರಯುಕ್ತ ಮಂಗಳವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಮಂಗಳವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರೋಟರಿ ಸಂಸ್ಥೆ, ಸುಜಲಾನ್ ಸಂಸ್ಥೆ, ರಿದ್ದಿ-ಸಿದ್ಧಿ ಫೌಂಡೇಷನ್, ಲಯನ್ಸ್ ಕ್ಲಬ್, ದಾವಣಗೆರೆ, ಗೋಗ್ರೀನ್ ಫೌಂಡೇಷನ್ ಬೆಂಗಳೂರು ಹಾಗೂ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಇವರುಗಳ ಸಹಯೋಗದಲ್ಲಿ ನಡೆದ ಈ ರಕ್ತದಾನ ಶಿಬಿರ ನಡೆಯಿತು.ಸುಜಲಾನ್ ಸಂಸ್ಥೆಯ ಸಿಬ್ಬಂದಿ, ಸಾರ್ವಜನಿಕರು ಸುಮಾರು 47 ಯೂನಿಟ್ ರಕ್ತದಾನವನ್ನು ಮಾಡಿದರು.
ಸುಜಲಾನ್ ಸಂಸ್ಥೆಯ ಪಿ.ಸುರೇಶ್, ರೋಟರಿ ಸಂಸ್ಥೆಯ ಕಾರ್ಯದರ್ಶಿ ಬ್ರಿಜೇಶ್ ಪಿ.ವರ್ಣೇಕರ್, ರೆಡ್ ಕ್ರಾಸ್ ಸಂಸ್ಥೆಯ ವೈದ್ಯಾಧಿಕಾರಿ ಡಾ.ಪಿ.ಕೆ. ಬಸವರಾಜ್, ರೋಟರಿ ಸಂಸ್ಥೆಯ ನಾಗರಾಜ್ ಕೆ. ಜಾಧವ್, ಪವನ್ ಪಡಗಲ್, ರಾಜಶೇಖರ್, ರಿದ್ದಿ-ಸಿದ್ಧಿ ಸಂಸ್ಥೆಯ ರಾಜು ಭಂಡಾರಿ, ಶ್ರೀಕಾಂತ್ ಬಗರೆ, ಅನಿಲ್ ಬಾರೆಂಗಳ್, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಉಳವಯ್ಯ, ಕೋರಿ ಶಿವಕುಮಾರ್, ಸತೀಶ್ ಶೆಟ್ಟಿ, ಗೋ-ಗ್ರೀನ್‌ನ ಮಹಮ್ಮದ್ ಗೌಸ್, ಸುಜಲಾನ್ ಸಂಸ್ಥೆಯ ಪಿ.ಸುರೇಶ್, ದೀಪಕ್, ಸಂತೋಷ್, ಕುಮಾರ್, ಲೋಕಪ್ಪ, ದೀಪಕ್, ಡಾ.ಆಫ್ರೀದ್, ಜಗದೀಶ್, ಇಮ್ರಾನ್, ಬಿ.ಸಿ.ಶಿವರಾಜ್, ಸಿಂಧು, ಜ್ಯೋತಿ, ಪುಟ್ಟರಾಜ್, ಸುಕನ್ಯಾ, ಸಂಜನಾ, ಅವಿನಾಶ್, ಜನಾರ್, ರೇವಪ್ಪ ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))