ಸಾರಾಂಶ
ರಕ್ತದಿಂದ ಬೇರೆ ಬೇರೆ ಉಪಯೋಗವಿದ್ದು ಆಸ್ಪತ್ರೆಗಳಲ್ಲಿ ಅವುಗಳಲ್ಲಿನ ವಿವಿಧ ಅಂಶ ಬೇರ್ಪಡಿಸಿ ಅವುಗಳನ್ನು ರೋಗಿಗಳಿಗೆ ನೀಡುವ ಕಾರ್ಯ ಮಾಡುತ್ತಾರೆ
ಲಕ್ಷ್ಮೇಶ್ವರ: ರಕ್ತದಾನವು ಶ್ರೇಷ್ಠ ದಾನವಾಗಿದೆ. ರಕ್ತದಾನದಿಂದ ಅಮೂಲ್ಯವಾದ ಜೀವ ಉಳಿಸಲು ಸಾಧ್ಯವಾಗುತ್ತದೆ. ರಕ್ತದಾನ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ಎಂದು ಡಾ.ಬಿ.ಜೆ.ಅಂಗಡಿ ಹೇಳಿದರು.
ಸಮೀಪದ ಸೂರಣಗಿ ಗ್ರಾಮದಲ್ಲಿ ನವಚೇತನ ಯುವಕ ಮಂಡಳದ ವತಿಯಿಂದ 20ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಶನಿವಾರ ಗದಗ ಜಿಮ್ಸ್, ತಾಲೂಕು ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಅಪಘಾತ, ಹೆರಿಗೆ ಮತ್ತು ಇತರೆ ತುರ್ತು ಸಂದರ್ಭಗಳಲ್ಲಿ ರಕ್ತ ಅತಿ ಅವಶ್ಯವಾಗಿ ಬೇಕಾಗಿರುವ ಜೀವದಾತುವಾಗಿ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ರಕ್ತದಾನವು ಪವಿತ್ರ ಕಾರ್ಯವಾಗಿದೆ. ರಕ್ತದಾನ ಮಾಡುವುದರಿಂದ ದೇಹದ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತದೆ, ರಕ್ತದಿಂದ ಬೇರೆ ಬೇರೆ ಉಪಯೋಗವಿದ್ದು ಆಸ್ಪತ್ರೆಗಳಲ್ಲಿ ಅವುಗಳಲ್ಲಿನ ವಿವಿಧ ಅಂಶ ಬೇರ್ಪಡಿಸಿ ಅವುಗಳನ್ನು ರೋಗಿಗಳಿಗೆ ನೀಡುವ ಕಾರ್ಯ ಮಾಡುತ್ತಾರೆ.ಆದ್ದರಿಂದ ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ ಎಂದು ಹೇಳಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಚನ್ನಮ್ಮ ಕಳ್ಳಿಹಾಳ, ತಾಪಂ ಮಾಜಿ ಸದಸ್ಯೆ ಚನ್ನಮ್ಮ ಹಿರೇಮಠ, ಕೋಟೆಪ್ಪ ವರ್ದಿ, ಡಾ. ಎನ್.ವಿ.ಹೆಬಸೂರ, ದೀಪಾ ಕಾಶಿಕೋವಿ, ರಾಘವೇಂದ್ರ ಗುತತ್ತೆಮ್ಮನವರ, ಹುಸೇನಸಾಬ್ ಕೋಲಕಾರ, ಕುಮಾರ ಬೆಟಗೇರಿ, ಸಚಿನ್ ಮೇಲ್ಮುರಿ, ಕೃಷ್ಣಾ ಲಮಾಣಿ, ಡಾ. ಮಂಜುನಾಥ ಗುಡಿಮನಿ, ಎಫ್.ಬಿ. ಹೂಗಾರ, ಶಕೀಲಾಬಾನು ಮುರ್ತುಜಾನವರ, ಜಿ.ಎಸ್. ಮೂಲಿಮನಿ, ಜಯಶ್ರೀ ಲಕ್ಕುಂಡಿ, ವೆಂಕಟೇಶ ಟೆಂಕೆಪ್ಪನವರ, ಎಸ್.ಎಸ್. ಗಂಗೂರ, ಸಿಂಧೂ ವಿ, ಸುಜಾತಾ ನಡುವಿಲಕೇರಿ ಸೇರಿದಂತೆ ನವಚೇತನ ಯುವಕ ಮಂಡಳದ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.