ಜೀವ ಉಳಿಸುವ ಜತೆಗೆ ಆರೋಗ್ಯ ಸುಧಾರಣೆಗೆ ರಕ್ತದಾನ: ಡಾ.ಸಮೃದ್ಧಿ

| Published : Apr 22 2024, 02:15 AM IST

ಸಾರಾಂಶ

ಕಾಲೇಜು ಪ್ರಾಂಶುಪಾಲ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಮಾತನಾಡಿ , ರಕ್ತದಾನದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯುವಂತಾಗಬೇಕು ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಕ್ತ ದಾನವು ಸಹಜೀವಿಯ‌ ಜೀವವನ್ನು ಉಳಿಸುವುದರ ಜತೆಗೆ ಸ್ವಯಂ ರಕ್ತದಾನಿಯ ಆರೋಗ್ಯವನ್ನೂ ಸುಧಾರಿಸುತ್ತದೆ ಎಂದು ಕೆ.ಎಂ.ಸಿ ಅತ್ತಾವರ ಇಲ್ಲಿನ ವೈದ್ಯಕೀಯ ಅಧಿಕಾರಿ ಡಾ.ಸಮೃದ್ಧಿ ಹೇಳಿದರು.

ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜು, ಯೂತ್ ರೆಡ್ ಕ್ರಾಸ್ ಯೂನಿಟ್ ಸಂಯೋಜನೆಯಲ್ಲಿ ಕೆಎಂಸಿ ಆಸ್ಪತ್ರೆ ಸಹಕಾರದೊಂದಿಗೆ ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜು ಉರ್ವ ,ಮಂಗಳೂರು ಇಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಾಲೇಜು ಪ್ರಾಂಶುಪಾಲ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಮಾತನಾಡಿ , ರಕ್ತದಾನದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯುವಂತಾಗಬೇಕು ಎಂದರು.

ರೆಡ್ ಕ್ರಾಸ್ ವಿದ್ಯಾರ್ಥಿ ನಾಯಕಿ ಭವ್ಯಶ್ರೀ ಕುಲಾಲ್ ಇದ್ದರು.

ಯೂತ್ ರೆಡ್ ಕ್ರಾಸ್ ಸಂಯೋಜಕ ಪ್ರೊ.ಚರಣ್ ರಾಜ್ ಸ್ವಾಗತಿಸಿದರು. ಸಹ ಸಂಯೋಜಕ ಪ್ರೊ.ರೂಪಾ ರಾವ್ ವಂದಿಸಿದರು. ವಿದ್ಯಾರ್ಥಿ ವೃಂದಾ ನಿರೂಪಿಸಿದರು.