ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠ: ಮರಿಬಸವರಾಜ ಸ್ವಾಮೀಜಿ

| Published : Feb 01 2024, 02:00 AM IST

ಸಾರಾಂಶ

ಕವಿತಾಳ ಸಮೀಪದ ಉಟಕನೂರು ಅಡವಿ ಸಿದ್ದೇಶ್ವರ ಮಠದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಕವಿತಾಳ

ರಕ್ತದಾನ ಮಾಡುವುದು ಉಳಿದೆಲ್ಲಾ ದಾನಗಳಿಗಿಂತ ಶ್ರೇಷ್ಠವಾದದ್ದು. ಅನೇಕ ತುರ್ತು ಸಂದರ್ಭಗಳಲ್ಲಿ ರಕ್ತ ದಾನ ಮಾಡುವ ಮೂಲಕ ಅಪಾಯದಲ್ಲಿರುವವವರ ಪ್ರಾಣ ರಕ್ಷಿಸಬಹುದು. ಈ ನಿಟ್ಟಿನಲ್ಲಿ ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅಡವಿ ಸಿದ್ದೇಶ್ವರ ಮಠದ ಪೀಠಾಧಿಪತಿ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಸಮೀಪದ ಉಟಕನೂರು ಅಡವಿ ಸಿದ್ದೇಶ್ವರ ಮಠದಲ್ಲಿ ಶ್ರೀಮಠ ಹಾಗೂ ಸಿಂಧನೂರಿನ ಶಕ್ತಿ ರಕ್ತ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿವರ್ಷ ಜಾತ್ರೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುತ್ತಿತ್ತು. ಅದೇ ರೀತಿ ಈ ವರ್ಷ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ 40 ಜನರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದರು.

ಮುಖಂಡರಾದ ಮಲ್ಲಿಕಾರ್ಜುನ ದಿದ್ದಗಿ, ದೇವರಾಜ ಪಾಟೀಲ, ಅಮರೇಶ, ಬಸವಕುಮಾರ, ಶಿವಕುಮಾರ ಉಟಕನೂರು, ವಿರೇಶ ಅಂಗಡಿ, ಮರಿಬಸವಲಿಂಗಪ್ಪ ಪೊಲೀಸ್ ಪಾಟೀಲ, ಮಹೇಶ ಬೆಳ್ಳಿಗನೂರು, ಸಿದ್ದಯ್ಯಸ್ವಾಮಿ, ನರಸಪ್ಪ ಯಾದವ, ಬಸವಲಿಂಗಪ್ಪ ಹೆಬ್ಬಾಳ, ಅಮರಯ್ಯಸ್ವಾಮಿ, ಚಂದ್ರಶೇಖರ, ಚನ್ನವೀರಯ್ಯಸ್ವಾಮಿ, ಮೌನೇಶ ಹುನಗುಂದ, ಮರಿಸವ ಪಾಟೀಲ ಇದ್ದರು.