ಮತ್ತೊಬ್ಬರ ಜೀವ ಉಳಿಸುವ ರಕ್ತದಾನ: ಡಾ.ಎಚ್.ಇ.ಜ್ಞಾನೇಶ್

| Published : Aug 19 2025, 01:00 AM IST

ಮತ್ತೊಬ್ಬರ ಜೀವ ಉಳಿಸುವ ರಕ್ತದಾನ: ಡಾ.ಎಚ್.ಇ.ಜ್ಞಾನೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್ ಇಲಾಖೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಾಮಾಜಿಕ ಕಳಕಳಿಯೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಿರುವುದು ಮಾದರಿಯಾಗಿದೆ. ಅಪಘಾತ, ಕಾಯಿಲೆಯಂತಹ ಸಂದರ್ಭದಲ್ಲಿ ರಕ್ತದ ಅವಶ್ಯತೆ ಇರುವವರಿಗೆ ರಕ್ತದಾನ ಮಾಡುವುದರಿಂದ ಜೀವ ಉಳಿಸಿದಂತಾಗುತ್ತದೆ ಎಂದು ಡಾ.ಎಚ್.ಇ.ಜ್ಞಾನೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ. ಆದ್ದರಿಂದ ಯುವ ಜನತೆ ರಕ್ತದಾನಕ್ಕೆ ಮುಂದಾಗಬೇಕು. ಪೊಲೀಸರು ಒತ್ತಡದ ಬದುಕಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ನಡುವೆ ರಕ್ತದಾನ ಶಿಬಿರ ಏರ್ಪಡಿಸುವ ಜೊತೆಗೆ ರಕ್ತದಾನವನ್ನು ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದರು.

ರಕ್ತದಾನಿಗಳಿಗೆ ಹಣ್ಣು, ತಂಪು ಪಾನೀಯ ನೀಡಿ ಉಪಚರಿಸಲಾಯಿತು. ಪೊಲೀಸರು ಸೇರಿದಂತೆ ಒಟ್ಟು ೭೦ ಜನ ರಕ್ತದಾನ ಮಾಡಿದರು.

ಪಿಎಸ್‌ಐ ಎಂ.ಎಚ್.ನವೀನ್, ಸಿಪಿಐ ಎಲ್.ರಾಜಶೇಖರ್, ರೆಡ್ ಕ್ರಾಸ್ ಸಂಜೀವಿನಿ ರಕ್ತಕೇಂದ್ರದ ಡಾ. ದಿನಕರ್, ಹಿರಿಯ ಸಹಾಯಕ ಧರಣೇಂದ್ರ ದಿನಕರ್, ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹಾಲೇಶಪ್ಪ, ಸೊರಬ ಠಾಣೆ ಸಿಬ್ಬಂದಿ ನಾಗೇಶ್, ಗಿರೀಶ್, ರಾಜು ನಾಯ್ಕ್, ಪ್ರಭುಗೌಡ, ಸುಧಾಕರ, ಹನುಮಂತಪ್ಪ, ಲೋಕೇಶ್, ರಾಘವೇಂದ್ರ, ವಿನಯ್, ಶಶಿಧರ, ವಿಶ್ವನಾಥ್, ಉಮೇಶ್, ಕಿರಣಾಚಾರಿ ಇತರರು ಇದ್ದರು.