ಸಾರಾಂಶ
ಡೇರಿಯ ಹೊಸ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಬಿ.ಎನ್.ರವಿ, ಶಾಂತ ಯೋಗೇಶ್ ಹೊರತುಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರು ಸಹ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷರಾಗಿ ಬಿ.ಎನ್.ರವಿ ಹಾಗೂ ಉಪಾಧ್ಯಕ್ಷೆಯಾಗಿ ಶಾಂತಯೋಗೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬಿಂಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಬಿ.ಎನ್.ರವಿ ಹಾಗೂ ಶಾಂತ ಯೋಗೇಶ್ ಅವಿರೋಧವಾಗಿ ಆಯ್ಕೆಯಾದರು.ಡೇರಿಯ ಹೊಸ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದು ಬಿ.ಎನ್.ರವಿ, ಶಾಂತ ಯೋಗೇಶ್ ಹೊರತುಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರು ಸಹ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷರಾಗಿ ಬಿ.ಎನ್.ರವಿ ಹಾಗೂ ಉಪಾಧ್ಯಕ್ಷೆಯಾಗಿ ಶಾಂತಯೋಗೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಆನಂದನಾಯ್ಕ ಘೋಷಿಸಿದರು.
ಸಂಘದ ನೂತನ ಅಧ್ಯಕ್ಷ ಬಿ.ಎನ್.ರವಿ, ಉಪಾಧ್ಯಕ್ಷೆ ಶಾಂತಯೋಗೇಶ್ ಅವರನ್ನು ಎಲ್ಲಾ ಮುಖಂಡರು, ನಿರ್ದೇಶಕರು ಅಭಿನಂಧಿಸಿದರು. ಸಿಹಿಹಂಚಿ ಸಂಭ್ರಮಿಸಿದರು. ಡೇರಿ ಗೌರವ ಅಧ್ಯಕ್ಷರಾದ ಯಜಮಾನ್ ಬಸವರಾಜು, ತೆಂಡೆ ಯಜಮಾನರಾದ ಕರೀಸ್ವಾಮಿ, ಮಹೇಂದ್ರ, ಬಿ.ರವಿಕುಮಾರ, ಅಂಗಡಿ ಭದ್ರೇಗೌಡ, ಡೇರಿ ನಿರ್ದೇಶಕರಾದ ಈರೇಗೌಡ, ಗೌಡೇಗೌಡ, ತಿಮ್ಮೇಗೌಡ, ಕೃಷ್ಣೇಗೌಡ, ರಮೇಶ್, ವಸಂತಕುಮಾರ್, ಶೋಭಾಕುಮಾರ್, ಬಿ.ವಿ.ಅರುಣ, ಡೇರಿ ಕಾರ್‍ಯದರ್ಶಿ ಅಭಿಷೇಕ್, ಪರೀಕ್ಷಕ ರಾಘವೇಂದ್ರ, ಸಹಾಯಕ ಲೋಕೇಶ್ ಸೇರಿದಂತೆ ಜೆಡಿಎಸ್ ಪಕ್ಷದ ಕಾರ್‍ಯಕರ್ತರು, ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.ಬಿಎಸ್ಪಿ ತಾಲೂಕು ಅಧ್ಯಕ್ಷರಾಗಿ ಬಿಲ್ಲೇನಹಳ್ಳಿ ನವೀನ್ ಆಯ್ಕೆಕೆ.ಆರ್.ಪೇಟೆ: ಬಹುಜನ ಸಮಾಜ ಪಕ್ಷದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಬಿಲ್ಲೇನಹಳ್ಳಿ ನವೀನ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಡಿ.ಜಿ.ಗಂಗಾಧರ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಜೆ.ಪ್ರದೀಪ್, ಕಾರ್ಯದರ್ಶಿಯಾಗಿ ಜಯರಾಂ ಖಜಾಂಚಿಯಾಗಿ ಮಮತಾ, ತಾಲೂಕು ಸಂಯೋಜಕರಾಗಿ ಗೋವಿಂದರಾಜು, ಉಸ್ತುವಾರಿಯಾಗಿ ಬಿ.ಡಿ.ಪ್ರದೀಪ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೆ.ಆರ್.ಪೇಟೆ ನಗರ ಘಟಕದ ಅಧ್ಯಕ್ಷರಾಗಿ ಹೊಸಹೊಳಲು ಎಚ್.ಕೆ.ಮಂಜುನಾಥ್, ಕಸಬಾ ಕಾರ್ಯದರ್ಶಿಯಾಗಿ ಅಜಿತ್, ಅಕ್ಕಿಹೆಬ್ಬಾಳು ಹೋಬಳಿ ಕಾರ್ಯದರ್ಶಿಯಾಗಿ ಐಪನಹಳ್ಳಿ ಪ್ರಕಾಶ್, ಸಂತೇಬಾಚಹಳ್ಳಿ ಹೋಬಳಿ ಕಾರ್ಯದರ್ಶಿಯಾಗಿ ಹುಬ್ಬನಹಳ್ಳಿ ಲೋಕೆಶ್ ಆಯ್ಕೆಯಾಗಿದ್ದಾರೆಂದು ತಾಲೂಕು ಬಿಎಸ್ಪಿ ಘಟಕ ತಿಳಿಸಿದೆ. ಪಕ್ಷದ ನೂತನ ಪದಾಧಿಕಾರಿಗಳನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂಧಿಸಿದರು.