ಕ್ರೀಡೆಗಳಿಂದ ದೇಹ ಸದೃಢ: ಉಮೇಶ

| Published : Feb 08 2024, 01:33 AM IST

ಸಾರಾಂಶ

ಅರಕೇರಾ ಕೆ. ಮಿತ್ರ ಬಳಗದ ವತಿಯಿಂದ ನಡೆದ ಓಪನ್ ಹಾಗೂ ಗ್ರಾಮೀಣ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ತಾಲೂಕಿನ ಅರಕೇರಾ (ಕೆ) ಗ್ರಾಮದಲ್ಲಿ ಅರಕೇರಾ ಕೆ. ಮಿತ್ರ ಬಳಗದ ವತಿಯಿಂದ ನಡೆದ ಓಪನ್ ಹಾಗೂ ಗ್ರಾಮೀಣ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ, ಕ್ರೀಡೆಯಿಂದ ದೇಹ ಸದೃಢವಾಗುತ್ತದೆ. ದುಶ್ಚಟಗಳು ದೂರವಾಗುತ್ತವೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಅನೇಕ ಉತ್ತಮ ಕ್ರೀಡೆಗಳು ಇವೆ. ಕಬಡ್ಡಿ, ಖೋಖೋ, ಲಗೋರಿ ಸೇರಿ ಅನೇಕ ಕ್ರೀಡೆಗಳು ಇತ್ತೀಚೆಗೆ ನಶಿಸಿ ಹೋಗುತ್ತಿವೆ. ಇವುಗಳನ್ನು ಸಹ ಉಳಿಸಿ, ಬೆಳೆಸುವ ಕೆಲಸ ಆಗಬೇಕಾಗಿದೆ ಎಂದರು.

ಸಂಜೀವಕುಮಾರ ಮಾತನಾಡಿ, ಗ್ರಾಮದ ಯುವಕರು, ಹಿರಿಯರು ಸೇರಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆ. ಗುಜರಾತಿನ ಉದ್ಯಮಿ ಹಣಮಂತ ಯಾದಗಿರಿ ಪ್ರಥಮ ಬಹುಮಾನ, ದ್ವಿತೀಯ ಬಹುಮಾನ ಕೆಎಸ್‌ಆರ್‌ಟಿಸಿ ನಿವೃತ್ತ ಚಾಲಕ ನಾಗರಾಜ ಎಂ. ಶೇಷಗಿರಿ ನೀಡಿ ಯುವಕರಿಗೆ ಪ್ರೋತ್ಸಾಹಿಸಿದ್ದಾರೆ ಎಂದರು.

ರುದ್ರಗೌಡ ಮಾಲಿಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಶ್ರೀರಾಮ, ಲಕ್ಷ್ಮಣ, ಸೀತಾ, ಆಂಜನೇಯ ಭಾವಚಿತ್ರಕ್ಕೆ ಸಿದ್ದಲಿಂಗಯ್ಯ ಸ್ವಾಮಿ ಅವರು ಪೂಜೆ ಸಲ್ಲಿಸಿದರು.

ಶಿಕ್ಷಕರಾದ ಮುರುಳಿ, ಸಂತೋಷ, ಚಾಂದಪಾಷಾ, ಡಾ. ಸಿದ್ದಲಿಂಗರೆಡ್ಡಿ ಮಾಲಿ ಪಾಟೀಲ್, ಚಂದ್ರಪ್ಪ, ಶಾಂತಗೌಡ ಪೊಲೀಸ್ ಪಾಟೀಲ್, ದೇವರಾಜ ಸಾಹುಕಾರ, ಭೋಜಣಗೌಡ, ಲಕ್ಷ್ಮಣ ಬಡಿಗೇರ, ಸೂಗಪ್ಪ ಬಿರಾದಾರ್, ಸಾಹೇಬರಡ್ಡಿ ಭಂಡಾರಿ, ರುದ್ರಪ್ಪ ಭಂಡಾರಿ, ನಾಗಪ್ಪ, ಸಂತೋಷ ಸಾಹುಕಾರ ಇತರರಿದ್ದರು. ಮಾಳಪ್ಪ ನಿರೂಪಿಸಿದರು. ತಾಯಪ್ಪ ವಂದಿಸಿದರು.