ಪೊದೆಯಲ್ಲಿ ಹೊಳೆನರಸೀಪುರದ ಯುವಕನ ದೇಹ ಪತ್ತೆ

| Published : Oct 13 2025, 02:00 AM IST

ಪೊದೆಯಲ್ಲಿ ಹೊಳೆನರಸೀಪುರದ ಯುವಕನ ದೇಹ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ತಾಲೂಕಿನ ಎಸ್.ಅಂಕನಹಳ್ಳಿ ಸಮೀಪದ ಹೆದ್ದಾರಿ ಪಕ್ಕದಲ್ಲಿ ದ್ವಿಚಕ್ರ ವಾಹನ ಹಾಗೂ ಯುವಕನೊಬ್ಬನ ಮೃತದೇಹವನ್ನು ಗಿಡಗಂಟಿಗಳಿಂದ ಮುಚ್ಚಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆಯೋ ಅಥವಾ ಅಪಘಾತವೋ ಎಂದು ಪೊಲೀಸರ ತನಿಖೆಯಿಂದ ಪತ್ತೆಯಾಗಬೇಕಿದೆ. ಆದರೆ ಮೃತದೇಹ ಮೇಲಿನ ಗಾಯದ ಗುರುತು ಕಂಡ ಪ್ರತ್ಯಕ್ಷದರ್ಶಿಗಳು ಇದು ಭೀಕರ ಕೊಲೆ ಎಂದು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಡಿವೈಎಸ್ಪಿ ಶಾಲು, ವೃತ್ತ ನಿರೀಕ್ಷಕ ಪ್ರದೀಪ್ ಹಾಗೂ ಪಿಎಸ್ಸೈಗಳಾದ ರಮೇಶ್ ಹಾಗೂ ನವ್ಯ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಮತ್ತು ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನಕ್ಕೆ ಕಳುಹಿಸಲಾಯಿತು. ಸುದೀಪ್‌ಗೆ ತಂದೆ, ತಾಯಿ, ಹಿರಿಯ ಸಹೋದರ, ಸಹೋದರಿ ಇದ್ದಾರೆ.

ಹೊಳೆನರಸೀಪುರ: ತಾಲೂಕಿನ ಎಸ್.ಅಂಕನಹಳ್ಳಿ ಸಮೀಪದ ಹೆದ್ದಾರಿ ಪಕ್ಕದಲ್ಲಿ ದ್ವಿಚಕ್ರ ವಾಹನ ಹಾಗೂ ಯುವಕನೊಬ್ಬನ ಮೃತದೇಹವನ್ನು ಗಿಡಗಂಟಿಗಳಿಂದ ಮುಚ್ಚಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆಯೋ ಅಥವಾ ಅಪಘಾತವೋ ಎಂದು ಪೊಲೀಸರ ತನಿಖೆಯಿಂದ ಪತ್ತೆಯಾಗಬೇಕಿದೆ. ಆದರೆ ಮೃತದೇಹ ಮೇಲಿನ ಗಾಯದ ಗುರುತು ಕಂಡ ಪ್ರತ್ಯಕ್ಷದರ್ಶಿಗಳು ಇದು ಭೀಕರ ಕೊಲೆ ಎಂದು ತಿಳಿಸಿದ್ದಾರೆ.

ಪಟ್ಟಣದ ಚಿಕ್ಕಅಂಬೇಡ್ಕರ್‌ನಗರದ ನಿವಾಸಿ ದಾಸಪ್ರಕಾಶ್ ಗೀತಾ ದಂಪತಿ ಪುತ್ರ ಸುದೀಪ್(೨೪) ಮೃತಪಟ್ಟಯುವಕ. ಹಳ್ಳಿಮೈಸೂರು ಹೋಬಳಿಯ ಎಸ್.ಅಂಕನಹಳ್ಳಿ ಸಮೀಪದ ರಕ್ಷಿತ ಅರಣ್ಯ ಪ್ರದೇಶ ಸಮೀಪದ ಹೆದ್ದಾರಿ ಪಕ್ಕದಲ್ಲಿ ದ್ವಿಚಕ್ರ ವಾಹನವನ್ನು ಗಿಡಗಂಟೆಗಳಿಂದ ಮುಚ್ಚಿರುವ ಸ್ಥಿತಿಯಲ್ಲಿ ಕಂಡ ಪ್ರತ್ಯಕ್ಷದರ್ಶಿಗಳು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಿಡಗಳನ್ನು ತೆಗೆದು ನೋಡಿದಾಗ ಯುವಕನ ಮೃತದೇಹ ಕಂಡು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಡಿವೈಎಸ್ಪಿ ಶಾಲು, ವೃತ್ತ ನಿರೀಕ್ಷಕ ಪ್ರದೀಪ್ ಹಾಗೂ ಪಿಎಸ್ಸೈಗಳಾದ ರಮೇಶ್ ಹಾಗೂ ನವ್ಯ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಮತ್ತು ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನಕ್ಕೆ ಕಳುಹಿಸಲಾಯಿತು. ಸುದೀಪ್‌ಗೆ ತಂದೆ, ತಾಯಿ, ಹಿರಿಯ ಸಹೋದರ, ಸಹೋದರಿ ಇದ್ದಾರೆ.