ಬಾಡಿ ಬಿಲ್ಡಿಂಗ್ ಅಂತಾರಾಷ್ಟ್ರೀಯ ಪ್ರಮುಖ ಸ್ಪರ್ಧೆಗಳಲ್ಲಿ ಒಂದಾಗಿದೆ-ಶಾಸಕ ಶಿವಣ್ಣನವರ

| Published : Jan 30 2025, 12:32 AM IST

ಬಾಡಿ ಬಿಲ್ಡಿಂಗ್ ಅಂತಾರಾಷ್ಟ್ರೀಯ ಪ್ರಮುಖ ಸ್ಪರ್ಧೆಗಳಲ್ಲಿ ಒಂದಾಗಿದೆ-ಶಾಸಕ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ನಿರಂತರ ಅಭ್ಯಾಸದೊಂದಿಗೆ ದೇಹದಲ್ಲಿರುವ ಅನಗತ್ಯವಾದ ಕೊಬ್ಬಿನಂಶವನ್ನು ತೆಗೆದು ಹಾಕಿ ಬಲವಾದ ಸ್ನಾಯುಗಳ ಪ್ರದರ್ಶನ ನಡೆಸುವುದಕ್ಕೆ ದೇಹದಾರ್ಢ್ಯ ಎನ್ನಲಾಗುತ್ತದೆ. ಕಳೆದ 1901ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಇಂತಹದ್ದೊಂದು ದೇಹದಾರ್ಢ್ಯ ಪ್ರಥಮ ಸ್ಪರ್ಧೆ (ಬಾಡಿ ಬಿಲ್ಡಿಂಗ್) ನಡೆಯಿತು. ಇಂದು ಅಂತಾರಾಷ್ಟ್ರೀಯ ಪ್ರಮುಖ ಸ್ಪರ್ಧೆಗಳಲ್ಲಿ ಇದು ಕೂಡ ಒಂದಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ನಿರಂತರ ಅಭ್ಯಾಸದೊಂದಿಗೆ ದೇಹದಲ್ಲಿರುವ ಅನಗತ್ಯವಾದ ಕೊಬ್ಬಿನಂಶವನ್ನು ತೆಗೆದು ಹಾಕಿ ಬಲವಾದ ಸ್ನಾಯುಗಳ ಪ್ರದರ್ಶನ ನಡೆಸುವುದಕ್ಕೆ ದೇಹದಾರ್ಢ್ಯ ಎನ್ನಲಾಗುತ್ತದೆ. ಕಳೆದ 1901ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಇಂತಹದ್ದೊಂದು ದೇಹದಾರ್ಢ್ಯ ಪ್ರಥಮ

ಸ್ಪರ್ಧೆ (ಬಾಡಿ ಬಿಲ್ಡಿಂಗ್) ನಡೆಯಿತು. ಇಂದು ಅಂತಾರಾಷ್ಟ್ರೀಯ ಪ್ರಮುಖ ಸ್ಪರ್ಧೆಗಳಲ್ಲಿ ಇದು ಕೂಡ ಒಂದಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಭಗತಸಿಂಗ್ ಸೇವಾ ಸಂಸ್ಥೆ ಹಾಗೂ ಹೈಟೆಕ್ ಫಿಟ್ನೆಸ್ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚೀನ ಕಾಲದಲ್ಲಿ ಈಜಿಪ್ಟ್, ಗ್ರೀಸ್ ಇನ್ನಿತರ ದೇಶಗಳಲ್ಲಿ ಕಲ್ಲು ಎತ್ತುವ ಸ್ಪರ್ಧೆಗಳು ನಡೆಯುತ್ತಿದ್ದವು. ಬಳಿಕ ಭಾರ ಎತ್ತುವ (ವೈಟ್ ಲಿಫ್ಟಿಂಗ್) ಸ್ಪರ್ಧೆಗಳಾಗಿ ಪರಿವರ್ತನೆಗೊಂಡವು. ಅದರ ಮುಂದುವರಿದ ಭಾಗವೇ ಇದೀಗ ದೇಹದಾರ್ಢ್ಯ ಸ್ಪರ್ಧೆಯಾಗಿದೆ ಎಂದರು.ಯುಜೆನ್ ಸ್ಯಾಂಡೋ ಆಧುನಿಕ ದೇಹದಾರ್ಢ್ಯದ ಪಿತಾಮಹ: ಇಂಗ್ಲೆಂಡ್ ಯುಜೆನ್ ಸ್ಯಾಂಡೋ 19ನೇ ಶತಮಾನದ ಕೊನೆಯ ಭಾಗದಲ್ಲಿ ದೇಹದಾರ್ಢ್ಯದ ಪ್ರಚಾರಕ್ಕಿಳಿದರು. ಜನರಿಗೆ ಅರ್ಥವಾಗುವ ರೀತಿಯಲ್ಲಿ ಸ್ನಾಯು ಪ್ರದರ್ಶನಕ್ಕೆ ಯುಜೆನ್ ಸ್ಯಾಂಡೋ ಅವಕಾಶ ಮಾಡಿಕೊಟ್ಟರು, ಉತ್ತಮ ಮೈಕಟ್ಟು ನೋಡಿ ಯುವಕರು ಉತ್ತೇಜಿತರಾದರು. ಡಂಬೆಲ್ಸ್, ಸ್ಪ್ರಿಂಗ್ ಪುಲ್ಲಿಗಳು, ವ್ಯಾಯಾಮದ ಉಪಕರಣ ಕಂಡು ಹಿಡಿದ ಯುಜೆನ್ ಸ್ಯಾಂಡೋ ಬಾಡಿ ಬಿಲ್ಡಿಂಗ್ ಆಧುನಿಕ ಪಿತಾಮಹ ಎನಿಸಿದ್ದಾರೆ ಎಂದರು.ಉತ್ತಮ ಆರೋಗ್ಯಕ್ಕಾಗಿ ನಿಗದಿತ ವ್ಯಾಯಾಮ: ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಇತ್ತೀಚೆಗೆ ಬಹಳಷ್ಟು ಯುವಕರು ದುಶ್ಚಟಗಳಿಂದ ದೂರವಿರುವ ನಿಟ್ಟಿನಲ್ಲಿ ನಿಗದಿತ ಪ್ರಮಾಣದಲ್ಲಿ ವ್ಯಾಯಾಮ ಅವಶ್ಯವಿದೆ, ಅದನ್ನೇ ರೂಢಿಸಿಕೊಂಡವರು ಇಂದು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.53 ಸ್ಪರ್ಧಿಗಳು ಭಾಗಿ: ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಒಟ್ಟು 53 ಸ್ಪರ್ಧಿಗಳು ಭಾಗಿಯಾಗಿದ್ದು, ದಾವಣಗೆರೆ ಪವರ ಫಿಟ್ನೆಸ್‌ ಕ್ಲಬ್‌ನ ಸಂಜಯ ಬೆಸ್ಟ್‌ ಪೋಸರ್ ಪ್ರಶಸ್ತಿ, ದಾವಣಗೆರೆ ಅಜಯ್ ಫಿಟ್ನೆಸ್‌ ಕ್ಲಬನ ರಾಮ ಖೂಷಿ ಮೋಷ್ಟ ಮಸ್ಕೂಲರ್ ದಾವಣೆಗೆರೆ ಸ್ಟೈಲ್ ಫಿಟ್ನೆಸ ಕ್ಲಬನ ಸುಶೀಲ್ ಕುಮಾರ ಟೈಟಲ್ ವಿನ್ನರ್ ಆದರು. ವೇದಿಕೆಯಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ, ಉಪಾಧ್ಯಕ್ಷ ಸುಭಾಸ್ ಮಾಳಗಿ, ನ್ಯಾಯವಾದಿಗಳಾದ ಪ್ರಕಾಶ ಬನ್ನಿಹಟ್ಟಿ, ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಯೋಗಿ ಶಿರೂರ, ಮುಖಂಡರಾದ ಎಂ.ಎಸ್.ಪಾಟೀಲ, ಸುರೇಶಗೌಡ್ರ ಪಾಟೀಲ (ದಿಡಗೂರ) ಗಿರೀಶ ಇಂಡಿಮಠ ಇನ್ನಿತರರಿದ್ದರು.