ಸಾರಾಂಶ
ಹುಲಿವೇಷದ ಊದುಪೂಜೆಯ ಪದ್ಧತಿಯನ್ನು ವೀಕ್ಷಿಸಿದ ಸಂಜಯ್‌ದತ್ ಈ ಸಂಪ್ರದಾಯದ ಕುರಿತು ಮಾಹಿತಿ ಪಡೆದರು. ಸಂಜಯ್ ದತ್ ಅವರಿಗೆ ಹುಲಿ ವೇಷದ ಮುಖವಾಡವನ್ನು ನೀಡಲಾಯಿತು
ಕನ್ನಡಪ್ರಭ ವಾರ್ತೆ ಮಂಗಳೂರುಹೆಸರಾಂತ ಬಾಲಿವುಡ್ ನಟ ಸಂಜಯ್ ದತ್ ಶನಿವಾರ ಮಂಗಳೂರಿಗೆ ಆಗಮಿಸಿದ್ದರು.
ಬಿರುವೆರ್ ಕುಡ್ಲ ವತಿಯಿಂದ ಹುಲಿ ವೇಷದ ಊದುಪೂಜೆಯಲ್ಲಿ ಭಾಗವಹಿಸಲು ಮುಂಬೈನಿಂದ ಆಗಮಿಸಿದ ಸಂಜಯ್ ದತ್ ಅವರನ್ನು ನೋಡಲು ಭಾರೀ ಜನಸಾಗರವೇ ತುಂಬಿತ್ತು.ಹುಲಿವೇಷದ ಊದುಪೂಜೆಯ ಪದ್ಧತಿಯನ್ನು ವೀಕ್ಷಿಸಿದ ಸಂಜಯ್‌ದತ್ ಈ ಸಂಪ್ರದಾಯದ ಕುರಿತು ಮಾಹಿತಿ ಪಡೆದರು. ಸಂಜಯ್ ದತ್ ಅವರಿಗೆ ಹುಲಿ ವೇಷದ ಮುಖವಾಡವನ್ನು ನೀಡಲಾಯಿತು. ಈ ವೇಳೆ ಚಿತ್ರವೊಂದರ ಡೈಲಾಗ್‌ನ್ನು ಹೇಳಿ ಸಂಜಯ್ ದತ್ ಜನರನ್ನು ರಂಜಿಸಿದರು.ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಸುನಿಲ್ ಕುಮಾರ್, ಮೇಯರ್ ಮನೋಜ್, ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್., ಯು.ಟಿ. ಇಫ್ತಿಕರ್ ಅಲಿ, ಬಿರುವೆರ್ ಕುಡ್ಲದ ಉದಯ ಪೂಜಾರಿ ಮತ್ತಿತರರು ಇದ್ದರು.