ಧಾರವಾಡ: ಇಲ್ಲಿಯ ಜಿಲ್ಲಾ ನ್ಯಾಯಾಲಯಕ್ಕೆ ವಾರದ ಅಂತರದಲ್ಲಿ ಎರಡನೇ ಬಾರಿಗೆ ಬಾಂಬ್ ಇಟ್ಟಿರುವುದಾಗಿ ಸಂದೇಶ ಬಂದಿದ್ದು, ಮತ್ತದೇ ನ್ಯಾಯಾಲಯದ ಕಲಾಪ ಬಂದ್ ಮಾಡಿ ಪೊಲೀಸರು ತಪಾಸಣೆ ಮಾಡಲಾಯಿತು.
ಕಳೆದ ಜೂನ್ 19ರ ಶುಕ್ರವಾರವಷ್ಟೇ ಇಮೇಲ್ ಮೂಲಕ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಸಂದೇಶ ಬಂದಿತ್ತು. ಇದೀಗ ಅದೇ ಮಾದರಿಯಲ್ಲಿಯೇ ಬಂದ ಬಾಂಬ್ ಬೆದರಿಕೆಯು ತುಸು ಹೊತ್ತು ನ್ಯಾಯಾಲಯದ ಆವರಣದಲ್ಲಿ ಆತಂಕ ಸೃಷ್ಟಿಸಿತ್ತು. ಪೊಲೀಸರು ಕೂಡಲೇ ಆಗಮಿಸಿ ನ್ಯಾಯಾಧೀಶರು, ನ್ಯಾಯವಾದಿಗಳು, ಕಕ್ಷಿದಾರರು ಸೇರಿದಂತೆ ಸಾರ್ವಜನಿಕರನ್ನು ಆವರಣದಿಂದ ಹೊರ ಕಳುಹಿಸಿ ತಪಾಸಣೆ ಮಾಡಿದರು. ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಸಹ ಆಗಮಿಸಿ ಪರಿಶೀಲಿಸಿದರು.ಪದೇ ಪದೇ ಬಾಂಬ್ ಇರುವುದಾಗಿ ಇ-ಮೇಲ್ ಮೂಲಕ ಸಂದೇಶ ಕಳುಹಿಸುತ್ತಿದ್ದು, ತಪಾಸಣೆಯ ವೇಳೆ ಯಾವುದೇ ಸ್ಪೋಟಕಗಳು ಪತ್ತೆಯಾಗಿಲ್ಲ. ಈ ಹುಸಿ ಸಂದೇಶಗಳನ್ನು ಕಳುಹಿಸುತ್ತಿರುವವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ವಾರದ ಅಂತರದಲ್ಲಿ ಎರಡು ಬಾರಿ, ಆರು ತಿಂಗಳಲ್ಲಿ ನಾಲ್ಕು ಬಾರಿಗೆ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿದೆ. ಹೀಗಾಗಿ ನಾವು ಕಿಡಿಗೇಡಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದೇವೆ ಎಂದು ಹಿರಿಯ ಪೊಲೀಸರ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಹಳೇ ವೈಷಮ್ಯ ಹಿನ್ನೆಲೆ: ಜೀವ ಬೆದರಿಕೆ, ಕಳ್ಳತನಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಲ್ಲದೆ, ದೇವರಕೋಣೆಯಲ್ಲಿಟ್ಟಿದ್ದ ₹8 ಲಕ್ಷ ಮೌಲ್ಯದ 80 ಗ್ರಾಂ ಬಂಗಾರದ ಬಳೆಗಳನ್ನು ತೆಗೆದುಕೊಂಡು ಹೋದ ಆರೋಪದ ಮೇಲೆ ಓರ್ವನ ವಿರುದ್ಧ ಪ್ರಕರಣ ದಾಖಲಾಗಿದೆ. ರೋಹನ್ ಬಿ, ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ರೋಹನ್ ಮಹಿಳೆಯ ಮನೆಗೆ ಹೋಗಿ ನನ್ನ ವಿರುದ್ಧ ಸಾಕ್ಷಿ ಹೇಳುತ್ತೀಯಾ ನಿನಗೆ ಒಂದು ಗತಿ ಕಾಣಿಸುತ್ತೇನೆ. ನಾನು ಕೋರ್ಟ್‌ಗೆ ಓಡಾಡಿ ಹಣ ಖರ್ಚಾಗಿವೆ. ಅವನ್ನು ಕೊಡು ಇಲ್ಲದಿದ್ದರೆ ಬಂಗಾರ ಕೊಡು ಎಂದು ಬೆದರಿಕೆ ಹಾಕಿದಲ್ಲದೆ, ದೇವರ ಕೊಣೆಯಲ್ಲಿದ್ದ ಆಭರಣ ತೆಗೆದುಕೊಂಡು ಹೋಗಿದ್ದಾನೆ ಎಂದು ರೂಪಾ ಎಂಬುವರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ನವಲಗುಂದ ಪುರಸಭೆ ಕಚೇರಿಗೆ ಲೋಕಾಯುಕ್ತರ ದಾಳಿನವಲಗುಂದ: ಪುರಸಭೆ ಕಚೇರಿ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತ ಡಿವೈಎಸ್ಪಿ ಬಿ.ಎನ್. ಪಾಟೀಲ ನೇತೃತ್ವದ ವಿವಿಧ ಅಧಿಕಾರಿಗಳ ತಂಡ ದಾಳಿ ನಡೆಸಿ ಸಂಜೆಯ ವರೆಗೂ ಕಡತಗಳ ಪರಿಶೀಲನೆ ನಡೆಸಿದರು.ಪುರಸಭೆಗೆ ಆಗಮಿಸಿದ ಸಾರ್ವಜನಿಕರಿಗೆ ಲೋಕಾಯುಕ್ತ ಅಧಿಕಾರಿಗಳು ಯಾವ ಕೆಲಸದ ಮೇಲೆ ಬಂದಿದ್ದೀರಿ, ಎಷ್ಟು ದಿನಗಳ ಕಾಲ ಕೆಲಸದ ನಿಮಿತ್ತ ಅಲೆದಾಡುತ್ತಿದ್ದೀರಿ ಎಂಬ ಮಾಹಿತಿಗಳನ್ನು ಕಲೆ ಹಾಕಿದರು.ಪುರಸಭೆಗೆ ಆಗಮಿಸಿದ ಸಾರ್ವಜನಿಕರು ಯಾರೂ ಈ ಅಧಿಕಾರಿಗಳು ಎಂದು ಗಾಬರಿಗೊಂಡಿದ್ದು ಕಂಡು ಬಂತು. 4-5 ವಿವಿಧ ನೋಂದಣಿ ಸಂಖ್ಯೆಗಳಿರುವ ವಾಹನಗಳಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು 2-3 ತಂಡಗಳಾಗಿ ಕಡತ ಪರಿಶೀಲಿಸಿದರಲ್ಲದೆ ಪುರಸಭೆ ಘನತಾಜ್ಯ ಘಟಕಕ್ಕೂ ತರಳಿ ಅಲ್ಲಿಯ ವಸ್ತುಸ್ಥಿತಿ ಪರಿಶೀಲಿಸಿದರು. ಪುರಸಭೆ ಮುಖ್ಯಾಧಿಕಾರಿ ಶರಣು ಪೂಜಾರ ಲೋಕಾಯುಕ್ತ ಸಿಬ್ಬಂದಿಗಳಾದ ಪ್ರಸಾದ ಪನೇಕರ, ಶ್ರೀಶೈಲ ಬಿಳಗಿ, ಕಾರ್ತಿಕ ಹುಲಗೋಳ, ಸಂಜು ಗಾಳಿ, ತೇಜಸ್ವನಿ ಸೋಪಿ, ಶ್ರೀಧರ ವಡ್ಡರ ಇತರರು ಇದ್ದರು.