ಬೊಮ್ಮಾಯಿ ಕೇಂದ್ರ ಮಂತ್ರಿಯಾಗಿ ನೀರಾವರಿ ಯೋಜನೆ ಸಾಕಾರ-ಮನೋಹರ ತಹಶೀಲ್ದಾರ

| Published : May 03 2024, 01:02 AM IST

ಬೊಮ್ಮಾಯಿ ಕೇಂದ್ರ ಮಂತ್ರಿಯಾಗಿ ನೀರಾವರಿ ಯೋಜನೆ ಸಾಕಾರ-ಮನೋಹರ ತಹಶೀಲ್ದಾರ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಅಧಿಕಾರಾವಧಿಯಲ್ಲಿ ಕೃಷಿ ಸಮುದಾಯಕ್ಕಾಗಿ ನೀರಾವರಿಗೆ ಪ್ರಥಮ ಆದ್ಯತೆ ನೀಡಿದ ಬಸವರಾಜ ಬೊಮ್ಮಾಯಿ ಕೇಂದ್ರ ಮಂತ್ರಿಯಾಗಿ, ಬೇಡ್ತಿ-ವರದಾ ನದಿ ಜೋಡಣೆ ಸಾಕಾರಗೊಳಿಸಲಿದ್ದಾರೆ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ ಹೇಳಿದರು.

ಹಾನಗಲ್ಲ: ತಮ್ಮ ಅಧಿಕಾರಾವಧಿಯಲ್ಲಿ ಕೃಷಿ ಸಮುದಾಯಕ್ಕಾಗಿ ನೀರಾವರಿಗೆ ಪ್ರಥಮ ಆದ್ಯತೆ ನೀಡಿದ ಬಸವರಾಜ ಬೊಮ್ಮಾಯಿ ಕೇಂದ್ರ ಮಂತ್ರಿಯಾಗಿ, ಬೇಡ್ತಿ-ವರದಾ ನದಿ ಜೋಡಣೆ ಸಾಕಾರಗೊಳಿಸಲಿದ್ದಾರೆ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ ಹೇಳಿದರು.

ಬುಧವಾರ ಹಾನಗಲ್ಲ ತಾಲೂಕಿನ ಸಾವಿಕೇರಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇದು ದೇಶದ ಭವಿಷ್ಯ ನಿರ್ಮಿಸುವ ಚುನಾವಣೆಯಾಗಿದೆ. ತಾತ್ಕಾಲಿಕ ಯೋಜನೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಹುನ್ನಾರಗಳಿಗೆ ಮಣೆ ಹಾಕದಿರಿ. ರಾಷ್ಟ್ರದ ಸುಭದ್ರತೆಗಾಗಿ ನಾವು ಮತದಾನ ಮಾಡಬೇಕಾಗಿದೆ. ಭಾರತದ ಗಡಿಗಳನ್ನು ಭದ್ರವಾಗಿಡಬೇಕಾಗಿದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ರಾಜಣ್ಣ ಪಟ್ಟಣದ ಮಾತನಾಡಿ, ಕೇವಲ ೧೦ ವರ್ಷಗಳಲ್ಲಿ ಇಡೀ ಜಗತ್ತಿಗೆ ಮಾದರಿಯಾಗಿರುವ ಭಾರತದ ಕಡೆಗೆ ಇಡೀ ಜಗತ್ತೆ ಕಣ್ಬಿಟ್ಟು ನೋಡುತ್ತಿದೆ. ಭಾರತ ಹೇಳಿದಂತೆ ಜಗತ್ತು ಕೇಳುವಂತೆ ನರೇಂದ್ರ ಮೋದಿ ಅವರು ಈ ದೇಶದ ಹಿರಿಮೆಯನ್ನು ಬೆಳೆಸಿದ್ದಾರೆ. ರೈತರು ಮಹಿಳೆಯರಿಗೆ ಹೆಚ್ಚು ಸೌಲಭ್ಯ ಒದಗಿಸಿದ್ದಾರೆ. ಯುವ ಭಾರತ ಕಟ್ಟಲು ಹೆಚ್ಚು ಯೋಜನೆಗಳು ಸಾಕಾರಗೊಂಡಿವೆ ಎಂದರು.

ಯುವ ನಾಯಕ ಭರತ್ ಬೊಮ್ಮಾಯಿ ಮಾತನಾಡಿ, ಒಬ್ಬ ಶಾಸಕರಾಗಿ ಶಿಗ್ಗಾಂವಿ ತಾಲೂಕನ್ನು ಮಾದರಿ ಅಭಿವೃದ್ಧಿ ಮಾಡಿದ ರೀತಿಯಲ್ಲಿಯೇ ಸಂಸದರಾಗಿ ಹಾವೇರಿ ಗದಗ ಲೋಸಭಾ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಮಾಡುವ ಕನಸು ಬಸವರಾಜ ಬೊಮ್ಮಾಯಿ ಅವರದ್ದಾಗಿದೆ. ನಾರಿ, ಯುವ, ರೈತ ಶಕ್ತಿಯನ್ನು ಇನ್ನಷ್ಟು ಉಜ್ವಲಗೊಳಿಸಲು ಬಿಜೆಪಿ ಸಿದ್ಧವಾಗಿದೆ ಎಂದರು.

ಜಿಪಂ ಮಾಜಿ ಸದಸ್ಯರಾದ ಕೃಷ್ಣ ಈಳಿಗೇರ, ರಾಘವೇಂದ್ರ ತಹಶೀಲ್ದಾರ, ರಾಜಣ್ಣ ಪಟ್ಟಣದ, ಮುಖಂಡರಾದ ರಾಜಶೇಖರ ಕಟ್ಟೇಗೌಡರ, ಸಿದ್ದನಗೌಡ ಪಾಟೀಲ, ಬಿ.ಆರ್. ಪಾಟೀಲ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಬಿ. ಪಾಟೀಲ, ರಾಮಚಂದ್ರಪ್ಪ ಅರಳೇಶ್ವರ, ಜಗದೀಶಗೌಡ್ರು ಪಾಟೀಲ, ವಿನಾಯಕ ಕುರುಬರ, ಅಣ್ಣಪ್ಪ ಚಾಕಾಪುರ, ರಾಘವೇಂದ್ರ ಕಠಾರಿ ಮೊದಲಾದವರಿದ್ದರು.