ಸಂಸ್ಕಾರಯುತ ಜೀವನಕ್ಕೆ ಪುಸ್ತಕ ಅಧ್ಯಯನ ಅಗತ್ಯ: ವಿನಯ್ ಕಣಿವೆ

| Published : Jul 09 2024, 12:52 AM IST

ಸಂಸ್ಕಾರಯುತ ಜೀವನಕ್ಕೆ ಪುಸ್ತಕ ಅಧ್ಯಯನ ಅಗತ್ಯ: ವಿನಯ್ ಕಣಿವೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಮಕ್ಕಳು ಸಂಸ್ಕಾರಯುತ ಜೀವನ ನಡೆಸಬೇಕಾದರೆ ಮೊಬೈಲ್ ಗೀಳಿನಿಂದ ಹೊರಬಂದು ಪುಸ್ತಕ ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದು ಸಿನಿಮಾ ನಿರ್ಮಾಪಕ ವಿನಯ್ ಕಣಿವೆ ಹೇಳಿದರು.

ಎನ್.ಆರ್.ಪುರ ತಾಲೂಕು ಕಸಾಪದಿಂದ ಮುಂಗಾರಿನಲ್ಲಿ ಸಾಹಿತ್ಯ ತೇರು ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಕ್ಕಳು ಸಂಸ್ಕಾರಯುತ ಜೀವನ ನಡೆಸಬೇಕಾದರೆ ಮೊಬೈಲ್ ಗೀಳಿನಿಂದ ಹೊರಬಂದು ಪುಸ್ತಕ ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದು ಸಿನಿಮಾ ನಿರ್ಮಾಪಕ ವಿನಯ್ ಕಣಿವೆ ಹೇಳಿದರು . ಎನ್.ಆರ್.ಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಮುಂಗಾರಿನಲ್ಲಿ ಸಾಹಿತ್ಯ ತೇರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕತೆ ಹೆಸರಿನಲ್ಲಿ ಇಂದು ನಾವು ಸಂಸ್ಕಾರ ತಿರಸ್ಕಾರ ಭಾವನೆಯಿಂದ ನೋಡುವುದು ತಪ್ಪು. ಆಧುನಿಕ ತಂತ್ರಜ್ಞಾನವನ್ನು ನಮ್ಮ ಸಂಸ್ಕಾರಯುತ ಜೀವನಕ್ಕೆ ವರವಾಗಿ ಬಳಸಿಕೊಂಡರೆ ಉನ್ನತ ವ್ಯಕ್ತಿಗಳಾಗಿ ಬದುಕಬಹುದು. ಇಂದಿನ ಶಿಕ್ಷಣ ವ್ಯವಸ್ಥೆ ಕೂಡ ಸಂಸ್ಕಾರ ರಹಿತ ಜೀವನಕ್ಕೆ ಪೂರಕವಾಗಿದೆ. ಮಕ್ಕಳು ಅಂಕ ಗಳಿಕೆ ಶಿಕ್ಷಣಕ್ಕೆ ಮಾರು ಹೋಗದೆ ನೈತಿಕ ಶಿಕ್ಷಣ ಪಡೆಯಬೇಕು. ಭಾರತೀಯ ಸಂಸ್ಕೃತಿ ಪ್ರಕೃತಿ, ತಾಯಿ, ತಂದೆ, ಗುರು, ನೆರೆಹೊರೆ ಎಲ್ಲರನ್ನೂ ಗೌರವಿಸುವ ಗುಣ ಬೆಳಸುತ್ತಿತ್ತು. ಆದರೆ ಇಂದಿನ ಶಿಕ್ಷಣ ವಿದ್ಯಾರ್ಥಿಗಳ ಮನಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳು ಕೂಡ ಭಾರತೀಯ ಸಂಸ್ಕೃತಿಯನ್ನು ಬಳಸಿಕೊಳ್ಳಬೇಕು ಎಂದರು.ಹೋಬಳಿ ಕಸಾಪ ಅಧ್ಯಕ್ಷ ರತ್ನಾಕರ ಗಡಿಗೇಶ್ವರ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರಯುತ ಜೀವನದಡಿ ಆಧುನಿಕತೆಯನ್ನು ಬಳಸಿ ಕೊಂಡರೆ ವಿದ್ಯಾರ್ಥಿ ಜೀವನ ಸಾರ್ಥಕ ಎಂದರು.ಮುಖ್ಯಶಿಕ್ಷಕ ಮಂಜುನಾಥ ಮಾತನಾಡಿ, ಸಾಹಿತ್ಯ ಪರಿಷತ್ ಮಕ್ಕಳಿಗೆ ಅಗತ್ಯ ವಿಷಯವನ್ನು ಇಂದು ಉಪನ್ಯಾಸದ ರೂಪದಲ್ಲಿ ಮಕ್ಕಳಿಗೆ ನೀಡುತ್ತಿರುವುದು ಖುಷಿಯ ವಿಚಾರ. ಮಕ್ಕಳು ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು .ತಾಲೂಕು ಕಸಾಪ ಘಟಕದ ಅಧ್ಯಕ್ಷ ಎಸ್.ಹೆಚ್.ಪೂರ್ಣೇಶ್ ಮಾತನಾಡಿ, ಸಾಹಿತ್ಯ ಪರಿಷತ್ ನಿಂದ ಮುಂಗಾರಿನಲ್ಲಿ ಸಾಹಿತ್ಯ ತೇರು ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಕ್ಕಳು ಸಂಸ್ಕಾರಯುತ ಜೀವನ ನಡೆಸಿದರೆ ಬದುಕು ಬಂಗಾರವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕತೆ ಸಂಸ್ಕಾರಯುತ ಜೀವನಕ್ಕೆ ಪೂರಕ ಮಾರಕ ಎನ್ನುವ ವಿಷಯದಲ್ಲಿ ಚರ್ಚಾ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಕಳೆದ ವರ್ಷ ಸರ್ಕಾರಿ ಪ್ರೌಢಶಾಲೆ ಗಡಿಗೇಶ್ವರದಲ್ಲಿ ವಿದ್ಯಾಬ್ಯಾಸ ಮಾಡಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶ್ರದ್ಧಾ ಅವರಿಗೆ ಸನ್ಮಾನ ಮಾಡಲಾಯಿತು.ಕಸಾಪ ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಅರಳಿಕೊಪ್ಪ, ಶೇಖರ್ ಇಟ್ಟಿಗೆ, ಹೋಬಳಿ ಕಾರ್ಯದರ್ಶಿ ಬಿ.ಎಂ. ಶ್ರೀಚೇತನಾ, ಎಸ್‌ಡಿಎಂಸಿ ಅಧ್ಯಕ್ಷ ಶಿವೇಂದ್ರ ಮತ್ತಿತರರು ಇದ್ದರು. ೦೮ಬಿಹೆಚ್‌ಆರ್ ೩:

ಬಾಳೆಹೊನ್ನೂರು ಸಮೀಪದ ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಸಾಪ ಆಯೋಜಿಸಿದ್ದ ಮುಂಗಾರಿನಲ್ಲಿ ಸಾಹಿತ್ಯ ತೇರು ಕಾರ್ಯಕ್ರಮದ ಚರ್ಚಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್.ಎಚ್.ಪೂರ್ಣೇಶ್, ವಿನಯ್ ಕಣಿವೆ, ರತ್ನಾಕರ್, ಮಂಜುನಾಥ್ ಇದ್ದರು.