ಗುರುಗಳು ಉಪದೇಶಿಸಿದ ವಾಣಿ ಕಾರ್ಯರೂಪಕ್ಕೆ ತನ್ನಿ

| Published : Jul 09 2024, 12:52 AM IST

ಗುರುಗಳು ಉಪದೇಶಿಸಿದ ವಾಣಿ ಕಾರ್ಯರೂಪಕ್ಕೆ ತನ್ನಿ
Share this Article
  • FB
  • TW
  • Linkdin
  • Email

ಸಾರಾಂಶ

Put, practice, words, preached, Guru

ಕನ್ನಡಪ್ರಭ ವಾರ್ತೆ ವಿಜಯಪುರ

ಗುರುಗಳು ಉಪದೇಶಿಸಿದ ವಾಣಿಯನ್ನು ನಾವೆಲ್ಲ ಶ್ರದ್ಧೆಯಿಂದ ಕಾರ್ಯರೂಪಕ್ಕೆ ತಂದರೇ ನರ ಹೋಗಿ ನಾರಾಯಣನಾಗುವನು, ಮಾನವನು ಮಾಧವನಾಗುವನು ಎಂದು ದತ್ತಾತ್ರೇಯ ಹಾಸಿಲಕರ ಹೇಳಿದರು.

ಆಲಮೇಲ ತಾಲೂಕಿನ ಗುಂದಗಿ ಗ್ರಾಮದಲ್ಲಿ ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡ ತೋಟದಲ್ಲಿ ಹಮ್ಮಿಕೊಂಡಿದ್ದ ದಿ.ಅಯ್ಯವ್ವ ಕಲ್ಲಪ್ಪ ಮಲಗೊಂಡ ಪುಣ್ಯತಿಥಿ ಸಪ್ತಾಹದಲ್ಲಿ ಮಾತನಾಡಿದ ಅವರು, ದಿ.ಕಲ್ಲಪ್ಫ ಮಲಗೊಂಡ ಹಾಗೂ ದಿ.ಅಯ್ಯವ್ವ ಕಲ್ಲಪ್ಪ ಮಲಗೊಂಡ ಅವರು ಐದು ದಶಕಗಳಿಂದ ಇಂಚಗೇರಿ ಸಂಪ್ರದಾಯದ ಪರಮ ಭಕ್ತರು. ಅವರು ನಡೆದ ಹಾದಿಯಲ್ಲಿ ಇಂದು ಟಿ.ಕೆ.ಮಲಗೊಂಡ ಅವರು ನಡೆಯುತ್ತಿದ್ದಾರೆ. ದಿ.ವಿಜಯಕುಮಾರ ಮಲಗೊಂಡ ನಮ್ಮಿಂದ ದೂರವಿದ್ದರೂ ಅವರು ಸದಾ ಅಮರವಾಗಿದ್ದಾರೆ. ಮರಣ ಹೊಂದಿದವರ ಸಪ್ತಾಹ ಸಹಜವಾಗಿ ಯಾರು ಮಾಡಲ್ಲ. ಆದರೆ ದಿ.ಕಲ್ಲಪ್ಫ ಮಲಗೊಂಡ ಹಾಗೂ ದಿ.ಅಯ್ಯವ್ವ ಮಲಗೊಂಡ ಇವರ ಪುಣ್ಯತಿಥಿ ಸಪ್ತಾಹ ಆಗಿದೆ ಎಂದರೆ ಅವರು ಪೂರ್ವಜನ್ಮದಲ್ಲಿ ಪುಣ್ಯ ಮಾಡಿದ್ದರು. ಶ್ರೀ ಸ.ಸ ಮಾಧವಾನಂದರ ಆಶೀರ್ವಾದ ಸದಾ ಮಲಗೊಂಡ ಮನೆತನದ ಮೇಲೆ ಇರುತ್ತದೆ ಎಂದು ತಿಳಿಸಿದರು.ಭೀಮಣ್ಣ ಮಹಾರಾಜರು ಮಾತನಾಡಿ, ಈ ಪಾದಯಾತ್ರೆಯ ಹಾಗೂ ಸಪ್ತಾಹದ ಮಹತ್ವ ತಿಳಿಸುತ್ತ ಸದ್ಗುರುಗಳ ವಚನುಪದೇಶವನ್ನು ಆಲಿಸಿ ಶ್ರದ್ಧೆಯಿಂದ ಆಚರಣೆಗೆ ತಂದರೆ ಸದ್ಗುರುಗಳು ನಮ್ಮನ್ನು ಭವ ಭಯದಿಂದ ಮುಕ್ತಗೊಳಿಸಿ ಜೀವನಮುಕ್ತ ಮಾಡುವರು ಎಂದರು.

ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆದೇಶದಂತೆ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿರವರ ಪರಮ ಶಿಷ್ಯರಾದ ದಿ.ಕಲ್ಲಪ್ಫ ಮಲಗೊಂಡ ಹಾಗೂ ದಿ.ಅಯ್ಯವ್ವ ಮಲಗೊಂಡ ಇವರ ಪುಣ್ಯತಿಥಿ ಸಪ್ತಾಹ ವಿಮಲ ಬ್ರಹ್ಮ ನಿರೂಪಣೆ ಹಾಗೂ ಪುಷ್ಪ ವೃಷ್ಟಿಯೊಂದಿಗೆ ಮಂಗಲಗೊಂಡಿತು.ಈ ಸಂದರ್ಭದಲ್ಲಿ ದಿಂಡಿಪಲ್ಲಕ್ಕಿ ಪಾದಯಾತ್ರಿಕರಾದ ವಾಸುದೇವ ವರೂರ, ಮಹೇಶ ಅರಳಿ, ಭಾರತೇಶ ಹಾಸಿಲಕರ. ಶ್ರೀಪಾದ ಹಾಸಿಲಕರ, ಆದರ್ಶ ರೊಡ್ಡನವರ, ಮಹಾವೀರ ಹಾಸಿಲಕರ, ಗುರುಪುತ್ರ ಹಾಸಿಲಕರ, ಗುರುಪುತ್ರ ಜಂಗಮ, ಸುಧೀರ ಕೋಪರ್ಡೆ, ಮಾಧವಾನಂದ ಅರಳಿ, ಮೃತ್ಯುಂಜಯ ಹಾಸಿಲಕರ, ಸುರೇಶ ಹಾಸಿಲಕರ, ಸುಧಾಕರ ಹಾಸಿಲಕರ, ಶಾರದಾ ದತ್ತಾತ್ರೇಯ ಹಾಸಿಲಕರ, ಶಾರದಾ ಶ್ರೀಪಾದ ಹಾಸಿಲಕರ, ಶ್ರಾವಣಿ ಕಣೇರಿ, ಗುಂದಗಿ ಗ್ರಾಮದ ರಾಮನಗೌಡ ಪಾಟೀಲ, ಈರಯ್ಯ ಮಠಪತಿ, ಆಯ್.ಎಸ್.ಬಿರಾದಾರ, ಎನ್.ಬಿ.ಬಿರಾದಾರ, ಶರಣಪ್ಪ ತೆಗ್ಗೆಳ್ಳಿ, ಬಸವರಾಜ ಮಲಗೊಂಡ, ರಮೇಶ ಮಲಗೊಂಡ, ಭೀಮರಾಯ ಮಲಗೊಂಡ, ಶಿಕ್ಷಕ ಬಸವರಾಜ ಪಾಟೀಲ, ಶಿವಶರಣ ಹೋಳಿ, ಶಿವಶಂಕರ ಹಿಪ್ಪರಗಿ, ಮಲ್ಲಿಕಾರ್ಜುನ ಮಲಗೊಂಡ, ಶೇಕಣ್ಣ ಮಲಗೊಂಡ, ಹಣಮಂತ ಪ್ಯಾಟಿ, ಶರಣಪ್ಪ ಭಾಸಗಿ, ಮಂಜುನಾಥ ಅಖಂಡಪ್ಪಗೋಳ, ಮಾದೇವ ಏಳಗಿ, ರ‍್ಯಾವಮ್ಮ ಹೋಳಿ, ಕಮಲಾಬಾಯಿ ಆಹೇರಿ, ಮಲಗೊಂಡ ಪರಿವಾರದವರು, ರಾಂಪುರೆ ಪರಿವಾರದವರು, ಸೇರಿದಂತೆ ಇನ್ನಿತರರು ಸಪ್ತಾಹದಲ್ಲಿ ಪಾಲ್ಗೊಂಡಿದ್ದರು.