ಸಾರಾಂಶ
- ವಂಶಾವಳಿ ಆಧಾರದಲ್ಲಿ ಮತ ನೀಡಿದ್ದು ಸಾಕು ಎಂದು ಸಲಹೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಸ್ಪರ್ಧಿಸಿದ್ದು, ಗ್ಯಾಸ್ ಸಿಲಿಂಡರ್ ಚಿಹ್ನೆಯ ವಿನಯ ಅವರಿಗೆ ಮತ ನೀಡಿ, ಜಿಲ್ಲೆಯ ಮತದಾರರು ಗೆಲುವಿಗೆ ಸಹಕರಿಸಬೇಕು ಎಂದು ಹಿರಿಯ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ಮನವಿ ಮಾಡಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿನಯಕುಮಾರ ಅವರು ಪದವೀಧರ ವಿದ್ಯಾವಂತ, ಐಎಎಸ್-ಐಪಿಎಸ್ ಕೋಚಿಂಗ್ ಕೇಂದ್ರ ಸ್ಥಾಪಿಸಿ, ದೇಶಾದ್ಯಂತ ತರಬೇತಿ ನೀಡುತ್ತಿದ್ದಾರೆ. ಜಿ.ಬಿ.ವಿನಯಕುಮಾರ ಅವರಂಥ ಯುವಕ ಕ್ಷೇತ್ರ, ದೇಶದ ಅಭಿವೃದ್ಧಿ ಚಿಂತನೆ ಮಾಡುತ್ತಿದ್ದಾರೆ. ಇಂತಹ ಯುವಕನಿಗೆ ಬಹುಮತಗಳ ಅಂತರದಲ್ಲಿ ಗೆಲ್ಲಿಸಿ, ಲೋಕಸಭೆಗೆ ಆರಿಸಿ ಕಳಿಸಬೇಕು ಎಂದರು.
ಇಡೀ ಜಿಲ್ಲೆ ಕೇವಲ 2 ಮನೆತನಗಳ ಹಿಡಿತದಲ್ಲಿದೆ. ಕಾಂಗ್ರೆಸ್ಸಿನ ಶಾಸಕ ಶಾಮನೂರು ಶಿವಶಂಕರಪ್ಪ, ಪುತ್ರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ರಾಜಕೀಯ ಪ್ರವೇಶ ಆಯ್ತು. ಈಗ ಮೊಮ್ಮಗನನ್ನೂ ರಾಜಕಾರಣಕ್ಕೆ ಪರಿಚಯಿಸುತ್ತಿದ್ದಾರೆ. ಅದೇ ರೀತಿ ಬಿಜೆಪಿಯಲ್ಲೂ ದಿವಂಗತ ಜಿ.ಮಲ್ಲಿಕಾರ್ಜುನಪ್ಪ, ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಲೋಕಸಭೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. ಈಗ ಸಿದ್ದೇಶ್ವರರ ಪತ್ನಿ ಗಾಯತ್ರಿ ಅಭ್ಯರ್ಥಿಯಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.ವಂಶಾವಳಿ ಆಧಾರದಲ್ಲಿ ಮತದಾನ ಮಾಡಿದರೆ, ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಧಕ್ಕೆಯಾಗುತ್ತದೆ. ಎಲ್ಲಾ ಸಮುದಾಯದವರಿಂದ ಮತ ಪಡೆದು, ಕೇವಲ ಒಂದು ಸಮುದಾಯ, ಜನಾಂಗದ ಪರವಾಗಿ ಹೇಳಿಕೆ ನೀಡುವ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಜಾತಿ ಪರವಾಗಿ ಮಾತನಾಡಿದ್ದಾರೆ. ಇದು ಜಾತಿ ಸೂಚಕವಾದ ವರ್ತನೆ. ಕಾಂಗ್ರೆಸ್ಸಿನವರನ್ನು ಸೋಲಿಸಲು ಜನತೆ ಮುಂದಾಗಬೇಕು. ಬಿಜೆಪಿ ಸಹ ಪ್ರಜಾಪ್ರಭುತ್ವ ವ್ಯವಸ್ಥೆ ಬದಲಿಸಿ, ಅಧಿಕಾರಿಗಳ ಸ್ವತಂತ್ರ ಮೊಟಕುಗೊಳಿಸಿ, ದೇಶಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮುಖಂಡರಾದ ಬೇಲಿಮಲ್ಲೂರು ಎಂ.ನಾಗಪ್ಪ, ಹೊನ್ನಾಳಿ ಸಣ್ಣ ಸಿದ್ದಪ್ಪ, ಡಾ.ಕರಿಬಸಯ್ಯ ಮಠದ ಒಡೆಯರ್, ಹನುಮಂತಪ್ಪ ಹದಡಿ ಇತರರು ಇದ್ದರು.- - - -24ಕೆಡಿವಿಜಿ4:
ದಾವಣಗೆರೆಯಲ್ಲಿ ಬುಧವಾರ ಹಿರಿಯ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.