ಸಾರಾಂಶ
ಬ್ರಾಹ್ಮಣರು ಭಾರತ ದೇಶದ ಸಂಖ್ಯಾ ಬಲದಲ್ಲಿ ಅಲ್ಪಸಂಖ್ಯಾತರು. ಆದರೆ ಬುದ್ಧಿವಂತಿಕೆ ಮತ್ತು ಪ್ರತಿಭೆಯಲ್ಲಿ ಬಹು ಸಂಖ್ಯಾತರು. ದೇಶದ ಎಲ್ಲಾ ಭಾಗಗಳಲ್ಲಿ ಇರುವ ಏಕೈಕ ಸಮಾಜ ಎಂದರೆ ಅದು ಬ್ರಾಹ್ಮಣ ಸಮಾಜ ಮಾತ್ರ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಮಾಜದ ಪ್ರತಿಯೊಬ್ಬರ ಒಳಿತನ್ನು ಬಯಸುವ ಬ್ರಾಹ್ಮಣ ಸಮಾಜ ಮತ್ತಷ್ಟು ಸಂಘಟಿತ ಹಾಗೂ ಬಲಿಷ್ಟವಾಗಬೇಕಿದೆ. ಬ್ರಾಹ್ಮಣ ಸಮಾಜ ಬಾಂಧವರು ಸಂಘಟಿತರಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕವಾಗಿ ಮುಂದುವರಿಯಲು ಸಹಾಯ ಹಸ್ತ ನೀಡಿ ಪ್ರೋತ್ಸಾಹ ನೀಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ರಾಜ್ಯಾಧ್ಯಕ್ಷ ಅಶೋಕ್ ಹಾರನಹಳ್ಳಿ ತಿಳಿಸಿದರು.ನಗರದ ದ ಶ್ರೀ ಶಂಕರ ಮಠದಲ್ಲಿ ಜ್ಞಾನಮುದ್ರ ವಿಪ್ರ ಮಹಿಳಾ ಮಂಡಳಿಯ ಉದ್ಘಾಟಿಸಿ ಮಾತನಾಡಿ, ಸುಖಾಸುಮ್ಮನೆ ಬ್ರಾಹ್ಮಣರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದು ಇದೆಲ್ಲಾ ಅನವಶ್ಯಕವಾದ ಸನ್ನಿವೇಶಗಳನ್ನು ಸೃಷ್ಟಿ ಮಾಡುವ ಹಾಗೂ ಅಲ್ಪ ಸಂಖ್ಯೆಯ ನಮಗೆ ಕಿರುಕುಳ ಕೊಡುವ ಉದ್ದೇಶ ಇದಾಗಿದೆ ಎಂದರು.
ಸಮುದಾಯದ ಕೊಡುಗೆ ಅಪಾರಬ್ರಾಹ್ಮಣ ಸಮಾಜ ಇಡೀ ರಾಷ್ಟ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ. ಬ್ರಾಹ್ಮಣ ಸಮುದಾಯ ಸ್ವಂತ ಶಕ್ತಿ, ಬುದ್ಧಿವಂತಿಕೆ ಹಾಗೂ ದೂರದೃಷ್ಟಿ ದೇಶಕ್ಕೋಸ್ಕರ ನಾನಾ ಕೊಡುಗೆಗಳನ್ನು ನೀಡಿದೆ. ಬ್ರಾಹ್ಮಣ ಸಮಾಜದವರು ಪ್ರಧಾನಮಂತ್ರಿಗಳಾಗಿ, ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಬ್ರಾಹ್ಮಣರಿಗೆ ಆತ್ಮ ಗೌರವ ಹೆಚ್ಚು, ವಿಪ್ರ ಸಮಾಜದ ಯುವ ಶಕ್ತಿ ಆಡಳಿತ ಮುಂಚೂಣಿಗೆ ಬರಬೇಕಾಗಿದೆ. ಪ್ರಪಂಚದ ಯಾವುದೇ ದೇಶಕ್ಕೆ ಹೋದರೂ ಬ್ರಾಹ್ಮಣರು ಇದ್ದೇ ಇರುತ್ತಾರೆ. ಸಮಾಜದ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.ಬ್ರಾಹ್ಮಣರು ಭಾರತ ದೇಶದ ಸಂಖ್ಯಾ ಬಲದಲ್ಲಿ ಅಲ್ಪಸಂಖ್ಯಾತರು. ಆದರೆ ಬುದ್ಧಿವಂತಿಕೆ ಮತ್ತು ಪ್ರತಿಭೆಯಲ್ಲಿ ಬಹು ಸಂಖ್ಯಾತರು. ದೇಶದ ಎಲ್ಲಾ ಭಾಗಗಳಲ್ಲಿ ಇರುವ ಏಕೈಕ ಸಮಾಜ ಎಂದರೆ ಅದು ಬ್ರಾಹ್ಮಣ ಸಮಾಜ ಮಾತ್ರ ಎಂದು ಹೇಳಿದರು. ಮಹಿಳೆಯರಿಗೆ ಉದ್ಯೋಗ ತರಬೇತಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಮಹಿಳಾ ಸಂಚಾಲಕಿ ಶುಭಮಂಗಳ ಮಾತನಾಡಿ, ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದ್ದು, ಮುಂಬರುವ ದಿನಗಳಲ್ಲಿ ನಮ್ಮ ರಾಜ್ಯ ಸಂಘದ ವತಿಯಿಂದ ವಿಪ್ರ ಮಹಿಳೆಯರ ಸ್ವಯಂ ಉದ್ಯೋಗ, ನಿರ್ವಹಣೆಯ ಸಲುವಾಗಿ ವಿವಿಧ ಕಸುಬುಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸುವ, ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಈವೇಳೆ ರಾಜ್ಯ ಬ್ರಾಹ್ಮಣರ ಸಂಘದ ಉಪಾಧ್ಯಕ್ಷರಾದ ಸುಧಾಕರ್ ಬಾಬು, ಎಂ.ಆರ್. ಶಿವಶಂಕರ್, ಸಂಘಟನಾ ಕಾರ್ಯದರ್ಶಿ ಕಾರ್ತಿಕ್ ಭಾಪಟ್, ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ನಾಗಭೂಷಣರಾವ್, ಜ್ಞಾನಮುದ್ರಾ ವಿಪ್ರ ಮಹಿಳಾ ಸಂಘದ ಅನುಪಮಾ ನಾಗಭೂಷನ್, ವೆಂಕಟೇಶಮೂರ್ತಿ, ಅಟ್ಟೂರು ವೆಂಕಟೇಶಯ್ಯ, ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.