ಸಾರಾಂಶ
ಚಿತ್ರದುರ್ಗ ತಾಲೂಕಿನ ತಮಟಕಲ್ಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ.ಟಿ.ಎಸ್.ನಾಗರಾಜ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸ್ತನ್ಯಪಾನವೇ ನಾವುಗಳು ಮಗುವಿಗೆ ನೀಡುವ ಮಹಾ ಭಾಗ್ಯವಾಗಿದ್ದು, ಇದನ್ನು ಎಲ್ಲ ತಾಯಂದಿರು ಗಂಭೀರವಾಗ ಸ್ವೀಕರಿಸಬೇಕೆಂದು ಎಸ್‌ಜೆಎಂ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್.ನಾಗರಾಜ್ ಹೇಳಿದರು.ಎಸ್‌ಜೆಎಂ ಫಾರ್ಮಸಿ ಕಾಲೇಜು ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ-2024 ಅಂಗವಾಗಿ ನಗರದ ತಮಟಗಲ್ಲು ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಲ್ಲಿ ಪಾಲ್ಗೊಂಡು ಮಾತನಾಡಿ, ತಾಯಿ ಎದೆಹಾಲು ಅಮೃತಕ್ಕೆ ಸಮಾನ. ಈ ದಿನಗಳಲ್ಲಿ ಭೂಮಿ ಮೇಲೆ ಎಲ್ಲವೂ ಕಲುಷಿತವಾಗಿದೆ. ಆದ್ದರಿಂದ ನಾನಾ ರೋಗಗಳು ಹರಡುತ್ತಿವೆ. ಏಕೆಂದರೆ ಮಗುವಿಗೆ ಬೇಕಾದ ದೈಹಿಕ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ಪಡೆಯುವಲ್ಲಿ ಸ್ತನ್ಯಪಾನ ಬಲುಮುಖ್ಯ ಪಾತ್ರ ವಹಿಸುತ್ತದೆ. ಸ್ತನ್ಯಪಾನ ಮಾಡದ ಮಕ್ಕಳು ಬಹಳ ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದರು.
ಡಾ.ಯೋಗಾನಂದ ಮಾತನಾಡಿ, ಯಾಂತ್ರಿಕ ಬದುಕಿನಿಂದಾಗಿ ತಾಯಂದಿರು ಮಗುವಿಗೆ ಸ್ತನ್ಯಪಾನ ಮಾಡಿಸುವಲ್ಲಿ ಹಿಂದೆ ಉಳಿಯುತ್ತಿದ್ದಾರೆ. ಹಾಗಾಗಿ ಮಗುವಿನ ಆರೋಗ್ಯಕ್ಕೆ ತುಂಬಾ ಗಂಭೀರವಾದ ಪರಿಣಾಮ ಬೀರುತ್ತದೆ. ತಾಯಿ ಎದೆಹಾಲು ಸಿಕ್ಕ ಮಗುವೆ ಭಾಗ್ಯ ಎಂದು ತಿಳಿಸಿದರು. ಕುಮಾರಿ ಪೂಜಾ ಬಿ.ಸಿ ಸ್ತನ್ಯಪಾನದ ಮಹತ್ವ ತಿಳಿಸಿದರು.ತಮಟಗಲ್ಲು ಗ್ರಾಮದ ಪ್ರಶಾಂತ್ ಎಚ್ಐಒ, ಶಬಾನಬಾನು ಸಿಎಚ್ಒ, ಗ್ರಾಪಂ ಅಧ್ಯಕ್ಷೆ ರುದ್ರಮ್ಮ, ಸದಸ್ಯರಾದ ಸಣ್ಣ ಹನುಮಂತಪ್ಪ ,ಬಿ.ಟಿ ಸಾಕಮ್ಮ, ದೊಡ್ಡ ಕರಬಸಪ್ಪ, ಕೆಂಚಣ್ಣ ಸಮದಾಯ ಆರೋಗ್ಯ ಅಧಿಕಾರಿ ಶಬನಾ ಬಾನು, ಆಶಾ ಕಾರ್ಯಕರ್ತ ಶಿವಮಾಲಾ ಮತ್ತು ಗೀತಾ ಇದ್ದರು. ಕಾರ್ಯಕ್ರಮದ ಅಂಗವಾಗಿ ಫಾರ್ಮಡಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಡಾ.ಲತಾ ಸ್ತನ್ಯಪಾನದ ಮಹತ್ವ ವಿವರಿಸಿದರು.