ಸಾರಾಂಶ
ಕೃಷ್ಣಾನದಿಯ ಪ್ರವಾಹ ಇಳಿಮುಖವಾಗಿದ್ದು, ಹಿನ್ನೀರಿನಿಂದ ಜಲಾವೃತಗೊಂಡಿದ್ದ ರಸ್ತೆಗಳು ತೆರೆದುಕೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿವೆ. ಇದರೊಟ್ಟಿಗೆ ಪ್ರವಾಹದಿಂದ ಮನೆ ತೋರೆದ ಜನರು ಇದೀಗ ತಮ್ಮ ಮನೆಗಳತ್ತ ಹೆಜ್ಜೆ ಹಾಕು ಅಣಿ ಆಗಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಕೃಷ್ಣಾನದಿಯ ಪ್ರವಾಹ ಇಳಿಮುಖವಾಗಿದ್ದು, ಹಿನ್ನೀರಿನಿಂದ ಜಲಾವೃತಗೊಂಡಿದ್ದ ರಸ್ತೆಗಳು ತೆರೆದುಕೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿವೆ. ಇದರೊಟ್ಟಿಗೆ ಪ್ರವಾಹದಿಂದ ಮನೆ ತೋರೆದ ಜನರು ಇದೀಗ ತಮ್ಮ ಮನೆಗಳತ್ತ ಹೆಜ್ಜೆ ಹಾಕು ಅಣಿ ಆಗಿದ್ದಾರೆ. ತಾಲೂಕಿನ ಜಂಬಗಿಯಿಂದ ಸಾವಳಗಿ ಗ್ರಾಮಕ್ಕೆ ಹೋಗುವ ರಸ್ತೆ, ಹಿರೇಪಡಸಲಗಿ ಗ್ರಾಮದ ಬಿದರಿ ಹಳ್ಳದ ರಸ್ತೆಗಳ ಸಂಚಾರ ಪ್ರಾರಂಭವಾಗಿದೆ. ಕಳೆದ 7-8 ದಿನಗಳಿದಂದ ಕೃಷ್ಣಾ ಹಿನ್ನೀರಿನಿಂದ ಬಂದ್ ಆಗಿದ್ದ ರಸ್ತೆಗಳು ಪುನಃ ಪ್ರಾರಂಭವಾಗಿವೆ. ರಸ್ತೆಗಳು ಜಲಾವೃತವಾಗಿದ್ದರಿಂದ ಬಸ್‌ಗಳ ಸಂಚಾರ ನಿಲ್ಲಿಸಲಾಗಿತ್ತು. ಇದೀಗ ಪುನ: ಬಸ್‌ಗಳನ್ನು ಪ್ರಾರಂಭಿಸಲಾಗಿದೆ.ಮುತ್ತೂರು ನಡುಗಡ್ಡೆ ಪ್ರದೇಶ ತೆರುವುಗೊಂಡಿದೆ. ರೈತರ ಬೆಳೆ ಕಬ್ಬು, ಮೇವು, ಮೆಕ್ಕೆಜೋಳದ ಬೆಳೆಗಳು ಹಾನಿಯಾಗಿದ್ದು ತಾಲೂಕು ಆಡಳಿತದಿಂದ ಬೆಳೆಹಾನಿಯ ಮಾಹಿತಿ ರವಾನಿಸಲಾಗಿದೆ. ಆಲಗೂರಿನ ಗೌಡರಗಡ್ಡೆ ಪ್ರದೇಶದಲ್ಲಿನ ನದಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಮನೆ, ವಸತಿ ಪ್ರದೇಶಗಳನ್ನು ತೊರೆದು ಬೇರೆಡೆಗೆ ಸ್ಥಳಾಂತರಗೊಂಡಿದ್ದ ರೈತ ಕುಟುಂಬಗಳು ತಮ್ಮ ವಾಸಸ್ಥಳದ ಪರೀವಿಕ್ಷಣೆ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಇನ್ನೆರಡು ದಿನಗಳಲ್ಲಿ ಮತ್ತೆ ತಮ್ಮ ಸ್ಥಳಗಳಿಗೆ ಮರಳಲು ರೈತಾಪಿವರ್ಗ ಕಾತರವಾಗಿದೆ.
ಗ್ರಾಮಗಳಲ್ಲಿ ನದಿನೀರು ಸುತ್ತುವರೆದ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಫಾಗಿಂಗ್, ಡಿಡಿಟಿ ಸಿಂಪಡನೆ ಯಂತ ಕ್ರಮ ಜರುಗಿಸಲು ಆರೋಗ್ಯ ಇಲಾಖೆಗೆ ತಾಲೂಕು ಆಡಳಿತದಿಂದ ನಿರ್ದೇಶನ ನೀಡಲಾಗಿದೆ. ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಸ್ವಚ್ಛತಾಕಾರ್ಯಗಳು ನಡೆಸಲು ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಸದಾಶಿವ ಮಕ್ಕೊಜಿ ತಿಳಿಸಿದ್ದಾರೆ.